LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

‘ಗಂಗಾ’ ಆಯೋಜನೆ ಕುರಿತ ಚಿತ್ರಕಲೆಗಳ ಪ್ರದರ್ಶನ

ಬೆಂಗಳೂರು: ಖ್ಯಾತ ಚಿತ್ರಕಲಾವಿದ ಯೂಸುಫ್ ಆರಕ್ಕಲ್ ಚಿತ್ರ ಕಲಾಕೃತಿಗಳು ಹಾಗೂ ಅವರ ಪುತ್ರ ಶಿಬು ಆರಕ್ಕಲ್ ಅವರ ವಿಶೇಷ ಛಾಯಾಚಿತ್ರಗಳ ಸರಣಿಯ ಪ್ರದರ್ಶನವನ್ನು ಸಂದೀಪ್ & ಗೀತಾಂಜಲಿ ಮೈನಿ ಫೌಂಡಶನ್ ಆಯೋಜಿಸಿದೆ.

ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ 7ನೇ ಅಡ್ಡರಸ್ತೆಯಲ್ಲಿರುವ ಫೌಂಡೇಶನ್ ಆವರಣದ ಮೆಜ್ಜಾನೈನ್ ಲೆವೆಲ್‍ನ 38 ಮೈನಿ ಸದನ್ ನಲ್ಲಿ ಕಲಾಕೃತಿಗಳು ಹಾಗೂ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೂನ್ 5ರಂದು ಆರಂಭಗೊಂಡಿರುವ ಈ ಪ್ರದರ್ಶನ ಜುಲೈ 10, 2024ರವರೆಗೆ ನಡೆಯಲಿದೆ.ಯೂಸುಫ್ ಅರಕ್ಕಲ್ ಮತ್ತು ಅವರ ಮಗ ಶಿಬು ಅವರು ಗಂಗಾ ಸರಣಿಯಲ್ಲಿ ಹಲವಾರು ಅಪರೂಪದ ಚಿತ್ರಕಲೆಗಳು ಹಾಗೂ ಛಾಯಾಚಿತ್ರಗಳ ಸಂಗ್ರಹವನ್ನು ಹೊಂದಿದ್ದಾರೆ.

ಭಾರತದ ಜನಸಮುದಾಯದ ಆಧ್ಯಾತ್ಮಿಕ ಮೂಲವಾಗಿರುವ ಗಂಗಾನದಿಯ ಉದ್ದಕ್ಕೂ ಸಂಚರಿಸಿರುವ ಅವರು ಅಲ್ಲಿನ ತಾತ್ವಿಕ ಅನ್ವೇಷಣೆಗಳು ಮತ್ತು ವೈಯಕ್ತಿಕ ಸತ್ಯಗಳನ್ನು ತಮ್ಮ ಫೋಟೊಗ್ರಫಿಗಳು ಹಾಗೂ ಚಿತ್ರಕಲೆಗಳ ಮೂಲಕ ಸಂಗ್ರಹಿಸಿದ್ದಾರೆ. ತಾವು ಸ್ವತಃ ಗಂಗಾ ನದಿಯ ಕುರಿತು ಅಕರ್ಷಿತರಾಗುವ ಜತೆಗೆ ನದಿಗಾಗಿಯೇ ಜೀವನ ಸಮರ್ಪಿಸಿದವರ ಬದುಕನ್ನೂ ಚಿತ್ರಿಸಿದ್ದಾರೆ. ಪ್ರಮುಖವಾಗಿ ನದಿಯಲ್ಲಿ ದೋಣಿ ಹಾಯಿಸುವ ಮಲ್ಲಾ ಎಂಬ ಅಂಬಿಗರ ಜೀವಕ್ಕೆ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.ಈ ಚಿತ್ರಗಳು ಹಾಗೂ ಕಲಾಕೃತಿಗಳು ಗಂಗಾ ಸರಣಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಮಲ್ಲಾ ಎಂದು ಕರೆಯಲ್ಪಡುವ ಗಂಗಾನದಿಯ ಅಂಬಿಗರು, ಈ ಕಲಾ ಪ್ರದರ್ಶನದ ನಿರೂಪಣೆಯ ಅವಿಭಾಜ್ಯ ಭಾಗವಾಗಿದ್ದಾರೆ, ಇದನ್ನು ಶಿಬು ಅರಕ್ಕಲ್ ತನ್ನ ಕ್ಯಾಮೆರಾ ಲೆನ್ಸ್ ಮೂಲಕ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ನೂರಾರು ವರ್ಷಗಳಿಂದ ಈ ಸಮುದಾಯವು ತಮ್ಮ ಕಾಯಕವನ್ನು ಪರಂಪರಾಗತವಾಗಿ ವರ್ಗಾಯಿಸಿಕೊಂಡು ಬಂದಿದ್ದಾರೆ.‘ಮಲ್ಲಾ’ ಶೀರ್ಷಿಕೆಯ ಛಾಯಾಚಿತ್ರ ಕಲಾಕೃತಿಗಳ ಸರಣಿಯು ಈ ದೋಣಿಯವರು ಗಂಗಾ ನದಿಯೊಂದಿ ಗೆ ಹೊಂದಿರುವ ನಂಟಿನಿಂದ ಸ್ಫೂರ್ತಿ ಪಡೆದಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು