LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಫೇಸ್ಬುಕ್ ಪೇಜ್ ಜಾಸ್ತಿ ಪ್ರೀತಿಗೆ ಸ್ಪೂರ್ತಿ

ಪೂರ್ಣ ಶ್ರೀ ಎಂಟರ್ಪ್ರೈಸಸ್ ಮುಖಾಂತರ ಸಿದ್ದಗೊಂಡಿರುವ ಜಾಸ್ತಿ ಪ್ರೀತಿ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆ ಸಮಾರಂಭ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಮಿಡಿದ ಹೃದಯಗಳ ಮೌನರಾಗ ಎಂಬ ಅಡಿಬರಹವಿದೆ. ರಿಯಲ್ ಎಸ್ಟೇಟ್ ಉದ್ಯಮಿ ಶಿವರಾಂ ಕೊಡತಿ ಬಂಡವಾಳ ಹೂಡಿರುವುದು ಹೊಸ ಅನುಭವ.

ಎಸ್‍ಆರ್ಕೆ ಕೃಷ್ಣಪ್ಪ ಸರ್ಜಾಪುರ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವುದು ಅರುಣ್ ಮಾನವ್.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಪ್ರೀತಿಯ ಅವ್ಯಕ್ತಭಾವ ಜಾಸ್ತಿಪ್ರೀತಿಯಾಗಿದೆ. ಸಿನಿಮಾ ಹುಟ್ಟಲು ಫೇಸ್ಬುಕ್ ಪೇಜ್ ಕಾರಣವಾಗಿದೆ. ಹೀಗೆ ಒಮ್ಮೆ ಎಫ್ಬಿ ನೋಡುವಾಗ ಒಂದು ಹುಡುಗಿಯ ಫೋಟೋ ನೋಡಿ ಕರುಳು ಚುರ್ ಅನಿಸಿತು. ಅದರ ಏಳೆಯನ್ನು ತೆಗೆದುಕೊಂಡು ಕಾಲ್ಪನಿಕ ಚಿತ್ರಕಥೆಯನ್ನು ಬರೆಯಲಾಯಿತು. ಎಲ್ಲಿಯೂ ನೋಡದೆ ಇರತಕ್ಕಂತ ಪ್ರೀತಿಯನ್ನು ಇದರಲ್ಲಿ ನೋಡಬಹುದು.

ಒಳ್ಳೆ ಮರವಾಗಬಲ್ಲ ಜಾಸ್ತಿಪ್ರೀತಿ ಆಗಿದೆ. ಯಾವುದೇ ವ್ಯಕ್ತಿಗೆ ಸಂಬಂದಪಟ್ಟಿರುವುದಿಲ್ಲ. ಬಂದಿರತಕ್ಕಂತ ಕಥೆಗಳು ಇರುವುದಿಲ್ಲ. ಯಾವ ದೃಶ್ಯವು ಹಿಂದಿನ ಚಿತ್ರದಲ್ಲಿ ನೋಡಿದಂತೆ ಭಾಸವಾಗುವುದಿಲ್ಲ. ವಿಭಿನ್ನ ನಿರೂಪಣೆ ಹೊಂದಿದ್ದು, ಪ್ರಾರಂಭದಿಂದ ಕೊನೆತನಕ ಊಹಿಸಲು ಕಷ್ಟವಾಗುತ್ತದೆ. ಪ್ರೀತಿಯನ್ನು ತೋರ್ಪಡಿಸಲಿಕ್ಕೆ ಆಗುವುದಿಲ್ಲವೋ, ಆಗ ಸೋತು ಹೋಗುತ್ತಾನೆ. ಅದನ್ನು ಇಲ್ಲಿ ಕಾಣಬಹುದು. ಬೆಂಗಳೂರು, ಬಂಗಾರಪೇಟೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆದಷ್ಟು ಬೇಗನೆ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ. ಮಾಧ್ಯಮದ ಸಹಕಾರ ಬೇಕೆಂದು ಕೋರಿದರು.

ಸಾಹಿತಿ, ಕವಿ, ಚಿಂತಕ, ವಿಮರ್ಶಕ ಹಾಗೂ ಚಿತ್ರ ನಿರ್ದೇಶಕ ಎಲ್.ಎನ್.ಮುಕುಂದರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವರು ಹೇಳುವಂತೆ ಕನ್ನಡ ಸಿನಿಮಾ ಬೇರೆ ಬೇರೆ ರೀತಿಯಲ್ಲಿ ಬೆಳೆದಿದೆ. ಅನೇಕ ಚಿತ್ರಗಳು ಜಗತ್ತಿನ ಸಿನಿಮಾಗಳ ಎದುರು ಸವಾಲು ಒಡ್ಡುವಂತ ಕೆಲಸ ಮಾಡುತ್ತಿದೆ. ಅದೇ ಸಾಲಿನಲ್ಲಿ ಜಾಸ್ತಿ ಪ್ರೀತಿ ಸೇರುತ್ತದೆ. ಸಿನಿಮಾ ಎಂಬುದು ಉದ್ಯಮವಾಗಿದೆ. ನೂರಾರು ಜನರ ಪ್ರತಿಭೆ ಮತ್ತು ಪರಿಶ್ರಮ ಒಳಗೊಂಡಿದೆ. ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಅಲ್ಲಿನ ಪ್ರಸಿದ್ದ ಕವಿಗಳು ಸಾಹಿತ್ಯ ರಚಿಸುತ್ತಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು