LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chitradurga

ಸ್ಥಳೀಯ ಕಲಾವಿದರು ಪಾಸ್ ಪೋರ್ಟ್ ಮಾಡಿಸಿಕೊಳ್ಳಿ: ಡಾ.ಬಿ.ಎಂ.ಗುರುನಾಥ್

ಚಿತ್ರದುರ್ಗ: ಸ್ಥಳೀಯ ಕಲಾವಿದರನ್ನು ದೇಶ ವಿದೇಶಗಳಿಗೆ ಕಳಿಸುವ ಒಡಂಬಡಿಕೆಯಾಗಿರುವುದರಿAದ ಪಾಸ್‌ಪೋರ್ಟ್ಗಳನ್ನು ಮಾಡಿಸಿ ಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಬಿ.ಎಂ.ಗುರುನಾಥ್ ಕಲಾವಿದರಿಗೆ ತಿಳಿಸಿದರು.ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಂಸ್ಕೃತಿಕಾ ಕಲಾ ಸಂಘ ಹುಲ್ಲೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದೊಂದಿಗೆ ಮಠದ ಕುರುಬರಹಟ್ಟಿಯಲ್ಲಿರುವ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜನಪದ ಸಂಸ್ಕೃತಿಕ ಉತ್ಸವ-2026 ಹಾಗೂ ಕಲಾವಿದರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಜನಪದ ಕಲಾವಿದರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸ ಬೇಕಾ ದರೆ ವೇದಿಕೆ ಮುಖ್ಯ. ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಲೆಗಳಿವೆ. ಕರ್ನಾಟಕದಲ್ಲಿ ಕಲೆಯನ್ನು ಉಳಿಸಲು ದೊಡ್ಡ ವಿದ್ವಾಂಸರುಗಳು ಶ್ರಮಿಸಿದ್ದಾರೆ. ಕಲೆ ಬದುಕಿನ ಒಂದುಭಾಗ. ಪಾರಂಪರಿಕ ಕಲೆಯನ್ನು ಉಳಿಸಿ ಪ್ರದರ್ಶಿಸಬೇಕಾಗಿರುವುದರಿಂದ ರೀಲ್ಸ್ ಬೇಕು. ಸ್ಥಳೀಯ ಕಲಾವಿದರು ಹೊರದೇಶಗಳಿಗೆ ಹೋಗುವ ಅವಕಾಶವಿರುವುದರಿಂದ ಪಾಸ್ ಪೋರ್ಟ್ ಗಳನ್ನು ಮಾಡಿಸಿಕೊಳ್ಳುವಂತೆ ಡಾ.ಬಿ.ಎಂ.ಗುರುನಾಥ್ ಮನವಿ ಮಾಡಿದರು.ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ವಿಜಯಕುಮಾರ್ ಮಾತನಾ ಡಿ ಕಲೆಗೆ ಪ್ರೇಕ್ಷಕರ ಕೊರತೆಯಿರುವುದರಿಂದ ಕಲಾವಿದರ ಬದುಕು ಕಷ್ಟ ದಲ್ಲಿದೆ. ಜಾನಪದ ಹಾಡಿಗೂ ಚಿತ್ರಗೀತೆಗಳಿಗೂ ವ್ಯತ್ಯಾಸವಿದೆ. ಜನಪದ ಕಲೆಯ ಮಹತ್ವವನ್ನು ಇಂದಿನ ಮಕ್ಕಳಿಗೆ ತಿಳಿಸಬೇಕಾಗಿರುವುದರಿಂದ ಗದ್ಯ ಪಠ್ಯದ ರೂಪದಲ್ಲಿ ಅಳವಡಿಸಬೇಕಿದೆ. ಜನಪದ ಗೀತೆಯಲ್ಲಿ ಹಲ ವಾರು ಪ್ರಕಾರಗಳಿವೆ. ಹಳ್ಳಿಗಾಡಿನಿಂದ ಹುಟ್ಟಿಕೊಂಡಿರುವ ಜಾನಪದ ಬೇಗನೆ ಹೃದಯವನ್ನು ತಟ್ಟುತ್ತದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸ ಬೇಕಿದೆ ಎಂದು ಹೇಳಿದರು.
ಕಡ್ಡೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಮಹೇಶ್ ಮಾತನಾಡುತ್ತ ಮಾನವೀಯತೆ ಮರೆತಿರುವ ಇಂದಿನ ಕಾಲಘಟ್ಟದಲ್ಲಿ, ಧ್ವನಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಕೇವಲ ಸಂಸ್ಥೆಯಾಗಿರದೆ ಕ ಲಾವಿದರಿಗೆ ಉಸಿರಾಗಿದೆ. ಕರ್ನಾಟಕದಲ್ಲಿ ವಿಶಿಷ್ಟವಾದ ಜನಪದ ಕಲೆಯಿದೆ. ಜನಪದ ಮೂಲೆ ಗುಂಪಾಗುತ್ತಿರುವುದರಿAದ ಕಲಾವಿದರು ಬಡ ತನದಲ್ಲಿದ್ದಾರೆ. ನಿಮ್ಮಲ್ಲಿರುವ ಕಲೆಯನ್ನು ಫೇಸ್ಬುಕ್, ಯೂಟೂಬ್, ರೀಲ್ಸ÷್ನಲ್ಲಿ ಪ್ರಸಾರ ಮಾಡಿದಾಗ ಕಲಾವಿದರ ಬದುಕು ಸುಧಾರಣೆ ಯಾಗುತ್ತದೆಂದರು. ಕಲಾವಿದರ ಜೀವನ ದುಸ್ಥಿತಿಯಲ್ಲಿರುವುದರಿಂದ ದುಶ್ಚಟಗಳಿಂದ ದೂರವಿರಿ. ಬದ್ದತೆಯಿಂದ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಕಲಾವಿದ ಮನದಾಳದ ನೋವನ್ನು ಧ್ವನಿ ಮೂಲಕ ಹೊರ ಹಾಕುತ್ತಾನೆಂದು ನುಡಿದರು.ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕೃತಿಕ ಕಲಾ ಸಂಘದ ಕಾರ್ಯ ದರ್ಶಿ ಕೃಷ್ಣಪ್ಪ ಮಾತನಾಡುತ್ತ, ಮೊಬೈಲ್ ಟಿವಿ ಹಾವಳಿಯಿಂದ ಜನಪ ದ ಕಲೆ ದಿನದಿಂದ ದಿನೆ ನಶಿಸುತ್ತಿದೆ. ಬಾಯಿಂದ ಬಾಯಿಗೆ ಹರಡುವ ಜನಪದವನ್ನು ಸುಗ್ಗಿ ಕಾಲದಲ್ಲಿ ಹಾಡಲಾಗುತ್ತಿತ್ತು. ಭಜನೆ, ಕೋಲಾಟ, ತಮಟೆ, ಉರುಮೆ, ಸೋಭಾನೆ ಪದ,ಬೀಸುವ ಕಲ್ಲು ಮೂಲಕ ಜಾನಪದ ಹುಟ್ಟಿದೆ, ಜಿಲ್ಲೆಯಲ್ಲಿ ಅನೇಕ ಜನಪದ ಕಲೆಗಳಿವೆ. ಕಲೆಗೆ ಶಿಕ್ಷಣ ಬೇಕಿಲ್ಲ. ಸಾಕಷ್ಟು ಅವಿದ್ಯಾಂತರು ಕಲೆಯಲ್ಲಿ ನಿಪುಣರಾಗಿದ್ದಾರೆ, ಇಂದಿನಯುವ ಪೀಳಿಗೆ ಜಾನಪದ ಕಲೆಯನ್ನು ಕಲಿತು ಉಳಿಸಿ ಬೆಳೆಸಬೇಕಿದೆ ಎಂದರು.ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಸ್ಕಾಂ ಜಾಗೃತದಳದ ಸಬ್‌ಇನ್ಸೆ÷್ಪಕ್ಟರ್ ಯಶೋಧಮ್ಮ, ಬ್ಯಾಲಹಾಳ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಡಿ.ವಿರುಪಾಕ್ಷಪ್ಪ, ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕೃತಿಕ ಕಲಾ ಸಂಘದ ಅಧ್ಯ ಕ್ಷೆ ನೀಲಮ್ಮ ಎ.ಕೃಷ್ಣಪ್ಪ, ಗಾಯತ್ರಿ ಶಿವರಾಂ ಇವರುಗಳು ವೇದಿಕೆಯಲ್ಲಿದ್ದರು. ಎಂ.ಕೆ.ಹರೀಶ್ ಮತ್ತು ತಂಡ, ಚನ್ನಬಸಪ್ಪ ಮತ್ತು ತಂಡ, ಕೆ.ಗಂಗಾಧರ್ ಮತ್ತು ತಂಡದವರು ಜಾನಪದ ಹಾಡುಗಳನ್ನು ಹಾಡಿ ನೆರೆದಿದ್ದವ ರನ್ನು ರಂಜಿಸಿದರು.
ಎಲ್.ವಾಗೇಶ್ ಮತ್ತು ತಂಡದ ನಾಸಿಕ್ ಡೋಲ್, ಉದಯಕುಮಾರ್ ಮತ್ತು ತಂಡದಿAದ ಕಹಳೆ, ಎನ್.ಡಿ.ತಿಪ್ಪೇಸ್ವಾಮಿ ಮತ್ತು ತಂಡದಿAದ ಉರುಮೆ, ಅಂಜಿನ್ಕುಮಾರ್ ಮತ್ತು ತಂಡದ ತಮಟೆ, ಜಿ.ಟಿ.ಪಾತಯ್ಯ ಮತ್ತು ತಂಡದ ಪೋತರಾಜ ಕುಣಿತ ಮನಮೋಹಕವಾಗಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು