LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ದೊಡ್ಡಬೊಮ್ಮಸಂದ್ರ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಗಿರಿಜ ಕಲ್ಯಾಣೋತ್ಸವ

ಬೆಂಗಳೂರು: ದೊಡ್ಡಬೊಮ್ಮಸಂದ್ರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಗಿರಿಜ ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ ಮಾರ್ಚ್ 8ರ ಶುಕ್ರವಾರ ಬೆಳಿಗ್ಗೆ 6ರಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಅಲಂಕಾರ ಸಂಜೆ 4ಕ್ಕೆ ವಾಗ್ದೇವಿ ಮಾತೃಮಂಡಳಿ ಅವರಿಂದ ಪಾರಾಯಣ,

ಸಂಜೆ 5:30ಕ್ಕೆ ಶ್ರೀ ಗಿರಿಜಾ ಕಲ್ಯಾಣೋತ್ಸವ ಪ್ರಾರಂಭ ಸಂಜೆ 6ಕ್ಕೆ ಶ್ರೀ ಶ್ವೇತಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ, ಸಾಮೂಹಿಕವಾಗಿ ಭಕ್ತರಿಂದಲೇ ಶ್ವೇತಲಿಂಗೇಶ್ವರ ಸಾಲಿಗ್ರಾಮಕ್ಕೆ ಮಹಾನದಿಗಳ ಪವಿತ್ರ ಜಲ
ಹಾಗೂ ಹಾಲಿನ ಅಭಿಷೇಕ ಏರ್ಪಡಿಸಲಾಗಿದೆ,

ರಾತ್ರಿ 8ಕ್ಕೆ ನಾಟ್ಯಮಂಜರಿ ಭಕ್ತಿ ಕುಸುಮಾಂಜಲಿಯವರಿಂದ ಭರತನಾಟ್ಯ ಕಾರ್ಯಕ್ರಮ, ರಾತ್ರಿ 10ಕ್ಕೆ ಕಲಶ ಸ್ಥಾಪನೆಗಳು ರಾತ್ರಿ 11ಕ್ಕೆ ಕಲಶಾರ್ಚನೆ ರಾತ್ರಿ 12ಕ್ಕೆ ಮಹಾಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಮಹಾ ರುದ್ರ- ದುರ್ಗ ಹೋಮ ಶ್ರೀವಲ್ಲಿ-ದೇವಯಾನಿ ಸಮೇತ ಸುಬ್ರಮಣ್ಯ, ಆಂಜನೇಯ ಹೋಮ, ಮಾರ್ಚ್ 9 ಶನಿವಾರ ಬ್ರಾಹ್ಮೀ ಮುಹೂರ್ತ ಬೆಳಿಗ್ಗೆ 3:3ಕ್ಕೆ ಮಹಾಪೂರ್ಣಾಹುತಿ, ಬೆಳಿಗ್ಗೆ 4:30ಕ್ಕೆ ದೇವರುಗಳಿಗೆ ಕುಂಭಾಭಿಷೇಕ, ಅಲಂಕಾರ,

ಬೆಳಿಗ್ಗೆ 5:30ಕ್ಕೆ ಈ ಪೂಜಾ ಕಾರ್ಯಕ್ರಮಗಳಿಗೆ ``ರಾಷ್ಟ್ರೀಯ ರತ್ನ'' ವಿದ್ವಾನ್ ವೇದಮೂರ್ತಿ, ಎಸ್. ಎನ್. ಸೋಮಸುಂದರ್ ದೀಕ್ಷಿತರು ಇವರ ಉಪಸ್ಥಿತಿಯಲ್ಲಿ ನಡೆಯಲಿದೆ, ಪೂಜಾ ಕಾರ್ಯಕ್ರಮಗಳಲ್ಲಿ ದೇವಸ್ಥಾನದ ಸಂಸ್ಥಾಪಕಿ ಲಯನ್ ಮಂಜುಳ, ಕಾರ್ಯದರ್ಶಿ ಲಯನ್ ಆರ್. ಲೀಲಾಕೃಷ್ಣ (ಪಿ,ಎಂ,ಜೆ,ಎಫ್), ಜಂಟಿ ಕಾರ್ಯದರ್ಶಿ ಶಿಲ್ಪಾಭರತ್ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವಸ್ಥಾನದ ಸಂಸ್ಥಾಪಕ ಹಾಗೂ ಧರ್ಮಾಧಿಕಾರಿಗಳಾದ ಡಾ.ಲಯನ್ ಬಿ. ಎಂ. ರವಿನಾಯ್ಡು ಪಿ,ಎಂ,ಜೆ,ಎಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- ಜಿ.ಎಲ್. ಸಂಪಂಗಿ ರಾಮುಲು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು