LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಅಥಿ ಐ ಲವ್ ಯು ಚಿತ್ರ ವೀಕ್ಷಿಸಿದ 7 ದಂಪತಿಗಳಿಗೆ ಗೋವಾ ಪ್ರವಾಸ

ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಅಥಿ ಐ ಲವ್ ಯು ಚಿತ್ರತಂಡ ಎರಡು ಟಿಕೆಟ್ ಪಡೆದು ಚಿತ್ರ ವೀಕ್ಷಣೆ ಮಾಡಿದ ದಂಪತಿಗಳಿಗೆ ಗೋವಾ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದರು.

ಅಂತೆಯೇ ಡಿಸೆಂಬರ್ 17ರ ಸಂಜೆ ಬೆಂಗಳೂರಿನಿಂದ ಹೊರಟ ಏಳು ದಂಪತಿಗಳು ಮತ್ತು ಚಿತ್ರದ ನಟ, ನಿರ್ದೇಶಕ ಲೋಕೇಂದ್ರ ಸೂರ್ಯ ದಂಪತಿಗಳು ಹಾಗೂ ಚಿತ್ರತಂಡದವರು ಗೋವಾ ಪ್ರವಾಸಕ್ಕೆ ಹೊರಟಿದರು, ಗೋವಾ ಬೀಚ್ ಗಳು ಚರ್ಚ್,ಪೋರ್ಟ್ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಮಡಿಕೇರಿ ಮೂಲದ ನಾವು ಇಲ್ಲಿಯವರೆಗೂ ಗೋವಾ ಪ್ರವಾಸವನ್ನು ಕೈಗೊಂಡಿರಲಿಲ್ಲ, ಇದು ನಮ್ಮ ಮೊದಲ ಗೋವಾ ಟ್ರಿಪ್ ನಮ್ಮ ಜೀವಿತಕಾಲದ ಮೆಮೊರಿ ಆಗಿದೆ ಎಂದು ಚಿತ್ರತಂಡಕ್ಕೆ ತಮ್ಮ ಸಂತಸವನ್ನು ವ್ಯಕ್ತಪಡಿಸಿಕೊಂಡರು ರಶ್ಮಿ ಮತ್ತು ಬೋಪಣ್ಣ ದಂಪತಿಗಳು. ಕನ್ನಡ ಭಾಷೆಯೇ ತಿಳಿಯದ ಉಷಾ ಮತ್ತು ಕಣ್ಣನ್ ದಂಪತಿಗಳು ಸಬ್ ಟೈಟಲ್ ಮೂಲಕ ಚಿತ್ರವನ್ನು ಅರ್ಥ ಮಾಡಿಕೊಂಡು ಅಥಿ ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇಂದಿರಾ ಮತ್ತು ಪಂಡರಿ ದಂಪತಿಗಳು 70ರ ಹರೆಯದಲ್ಲಿ ಗೋವಾ ಪ್ರವಾಸ ನಮಗೆ ಮತ್ತಷ್ಟು ಸಂತಸವನ್ನು ನೀಡಿದೆ ಜೊತೆಗೆ ಹಲವು ಕುಟುಂಬಗಳ ಒಡನಾಟ ಅವರೊಂದಿಗೆ ಆತ್ಮೀಯತೆ ಸಂತಸವನ್ನು ತಂದಿದೆ ಈ ಮೂಲಕ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರಿಗೆ ಧನ್ಯವಾದಗಳು ಅರ್ಪಿಸಲು ಬಯಸುತ್ತೇನೆ ಎಂದರು.

ಎಡಿಟರ್ ಯುಡಿವಿ ವೆಂಕಿ ಕೆಲಸದ ಒತ್ತಡದಲ್ಲಿ ಕುಟುಂಬಕ್ಕೆ ಹೆಚ್ಚು ಒತ್ತುಕೊಡಲು ಸಾಧ್ಯವಾಗಿರಲಿಲ್ಲ ನನ್ನ ಮದುವೆಯಾಗಿ 8 ವರ್ಷಗಳಾದರೂ ಒಮ್ಮೆಯೂ ಪ್ರವಾಸವನ್ನು ಕೈಗೊಳ್ಳಲು ಅವಕಾಶ ಸಿಕ್ಕಿರಲಿಲ್ಲ ಅಥಿ ಚಿತ್ರತಂಡದ ಜೊತೆ ನನ್ನ ಹೆಂಡತಿ ಅಂಜು ಮತ್ತು ಮಗನೊಂದಿಗೆ ಕಳೆದ ಈ ಮೂರು ದಿನ ಸುಂದರ ನೆನಪುಗಳನ್ನು ಕಟ್ಟಿಕೊಟ್ಟಿದೆ. ನನ್ನ ಮಡದಿಯ ಮುಖದಲ್ಲಿಯೂ ಆ ಸಂತಸವನ್ನು ಕಂಡಿದ್ದೇನೆ. ಹಣವಿದ್ದರೂ ಇಂತಹ ಪ್ರವಾಸವನ್ನು ಕೈಗೊಳ್ಳಲು ಅವಕಾಶ ಆಗುವುದಿಲ್ಲ. ಯಾಕೆಂದರೆ ಅದಕ್ಕೆ ಬೇಕಾದ ಸಮಯ ಮತ್ತು ಆತ್ಮೀಯ ವಲಯ ದೊರಕುವುದಿಲ್ಲ ಆದರೆ ಆ ಎರಡು ಈ ಬಾರಿ ನನಗೆ ಸಿಕ್ಕಿದೆ ಅದಕ್ಕಾಗಿ ನಾನು ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು