LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್!


ಡಾಲಿ ಧನಂಜಯ್ ನಟನೆಯ  ಚಿತ್ರ `ಅಣ್ಣ ಫ್ರಮ್ ಮೆಕ್ಸಿಕೋ’ ಬಿಡುಗಡೆಗೂ ಮುನ್ನವೇ ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರದ `ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ’ ಎಂಬ ಮಾಸ್ ಡ್ಯಾನ್ಸ್ ನಂಬರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಬರೋಬ್ಬರಿ 5 ಮಿಲಿಯನ್ (50 ಲಕ್ಷ) ವೀಕ್ಷಣೆಗಳ ಗಡಿ ತಲುಪುವ ಮೂಲಕ ಧೂಳೆಬ್ಬಿಸುತ್ತಿದೆ. ಕೇವಲ ಯೂಟ್ಯೂಬ್ ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲೂ ಈ ಹಾಡು ಹೊಸ ದಾಖಲೆ ಬರೆದಿದ್ದು, ಈಗಾಗಲೇ 50 ಸಾವಿರಕ್ಕೂ ಅಧಿಕ ರೀಲ್ಸ್ಗಳು ಈ ಟ್ಯೂನ್‌ಗೆ ಹರಿದುಬಂದಿವೆ.ವಾಸುಕಿ ವೈಭವ್ ಅವರ ಮಾಸ್ ಬೀಟ್ಸ್ಗೆ ನಿರ್ದೇಶಕ ಚೇತನ್ ಕುಮಾರ್ ಪೆನ್ನಿನಿಂದ ಸಾಹಿತ್ಯ ಮೂಡಿಬಂದಿದ್ದು, ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಈ ಹಾಡನ್ನು  ಹಾಡಿದ್ದಾರೆ. ಧನಂಜಯ್  ನಾಯಕಿ ರೀಷ್ಮಾ ನಾಣಯ್ಯ ಜೊತೆಗೂಡಿ ಹೆಜ್ಜೆ ಹಾಕಿರುವ ರೀತಿಕಿಕ್ ಕೊಟ್ಟಿದೆ. ಭೂಷಣ್ ಮಾಸ್ಟರ್ ಕೋರಿಯೋಗ್ರಫಿ ಮಾಡಿರೋ ಈ ಹಾಡು ರಿಯಾಲಿಟಿ ಷೋ ಗಳಲ್ಲಿ ಫೇವರೇಟ್  ಆಗಿದೆ. ಇವರಿಬ್ಬರ ಸ್ಟೆಪ್ಸ್ ಹಾಗೂ ಎನರ್ಜಿ ಈ ಹಾಡನ್ನು ಸಿನಿಮಾಗೆ ದೊಡ್ಡ ಮಟ್ಟದ ಮೈಲೇಜ್ ತಂದುಕೊಡುವಂತೆ ಮಾಡಿದೆ.ಶಂಕರ್ ಗುರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಐರಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ. ಹಟ್ಟಿಹೊಳಿ ಹಾಗೂ ಮೃಣಾಲ್ ಮತ್ತು ರಾಯಲಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸತ್ಯ ರಾಯಲ ಹಾಗೂ ಜಾನ್ವಿ ರಾಯಲ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎ.ಜೆ. ಶೆಟ್ಟಿ ಮತ್ತು ಎಸ್.ಕೆ. ರಾವ್ ಛಾಯಾಗ್ರಹಣ ಮಾಡಿದ್ದಾರೆ.
ಈ ಚಿತ್ರದಲ್ಲಿ ಡಾಲಿ ಧನಂಜಯ್ ಹಾಗೂ ರೀಷ್ಮಾ ನಾಣಯ್ಯ ಜೊತೆಗೆ  ನಟಿ ಉಮಾಶ್ರೀ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ಪ್ರತಿಭಾವಂತ ಕಲಾವಿದರ ಬಹುದೊಡ್ಡ ತಾರಾಗಣವಿದೆ. ಹಾಡಿನ ಮೂಲಕವೇ ಹೊಸ ಹವಾ ಸೃಷ್ಟಿಸಿರುವ `ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಇದೇ ಡಿಸೆಂಬರ್ 24ರಂದು  ತೆರೆಕಾಣಲು ಸಜ್ಜಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST