LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮಂಕುತಿಮ್ಮನ ಕಗ್ಗದ ಅಧ್ಯಯನದಿಂದ ಹೆಚ್ಚಿನ ಆತ್ಮವಿಶ್ವಾಸ

ಡಿವಿಜಿ ಯವರ ಮಂಕುತಿಮ್ಮನ ಕಗ್ಗದ ಅಧ್ಯಯನದಿಂದ ಆತ್ಮವಿಶ್ವಾಸ ಹೆಚ್ಚಲಿದ್ದು, ಬದುಕಿನ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಬಹುದು ಎಂದು ಯೂತ್ ಫಾರ್ ಬ್ಯಾಂಕ್ ಜಾಬ್ಸ್ ನ ಅಧ್ಯಕ್ಷ ಶ್ರೀ ಎಂ ವೆಂಕಟೇಶ ಶೇಷಾದ್ರಿಯವರು ತಿಳಿಸಿದರು. ಶ್ರೀಯುತರು ಬೆಂಗಳೂರಿನ ಜಯನಗರದಲ್ಲಿ ಸಂಗಾತಿ ಸಮಾಜದವರು ಏರ್ಪಡಿಸಿದ್ದ `ಮಂಕುತಿಮ್ಮನ ಕಗ್ಗನ ಪ್ರಸ್ತುತತೆ ಮತ್ತು ಅವಶ್ಯಕತೆ'ಯ ಬಗ್ಗೆ ಮಾತನಾಡುತ್ತಿದ್ದರು.

ಡಿ.ವಿ.ಜಿಯವರು ತಮ್ಮ ಬದುಕಿನಲ್ಲಿ ಕಷ್ಟ-ನಷ್ಟಗಳ ನಡುವೆಯೂ ಎದೆಗುಂದದೆ ಸ್ವಾಭಿಮಾನದಿಂದ ಸಾಹಿತ್ಯ ರಚನೆ ಮಾಡಿ, ಎಲ್ಲರಿಗೂ ಆದರ್ಶ ಪ್ರಾಯವಾಗಿದ್ದಾರೆ ಎಂದು ತಿಳಿಸಿದರು . ಸಂಗಾತಿ ಸಮಾಜದ ಅಧ್ಯಕ್ಷೆ ಶ್ರೀಮತಿ ಲಕ್ಷಿ ವಿ ಪತಿಯವರು ಮಾತನಾಡಿ, ಕಳೆದ ಒಂದುವರುಷದಿಂದ ಸಂಘವು ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪೂರ್ಣಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಲಕ್ಷಿ ಮೂರ್ತಿ, ರೇವತಿ ರಾಜಶೇಖರ್, ಇಂದುಮತಿ ಸುಬ್ರಮಣ್ಯ ಮತ್ತು ಚಂದ್ರಕಲಾ ರವರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST