LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮದಿನಕ್ಕೆ ದಿನಸಿ ಸರಬರಾಜು

ಕೋಲಾರ: ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೋಲಾರ ನಗರದ ಡೂಮ್ ಲೈಟ್ ವೃತ್ತದಿಂದ ಅಕ್ಕಿ, ಬೆಲ್ಲ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಎರಡು ಲಾರಿಗಳಲ್ಲಿ ವಿವಿಧ ದಿನಸಿ ವಸ್ತುಗಳನ್ನು ದೇಣಿಗೆಯಾಗಿ ಕಳುಹಿಸಿಕೊಡಲಾಯಿತು. ಕಳೆದ 10 ವರ್ಷಗಳಿಂದಲೂ ನಿರಂತರವಾಗಿ ಕೋಲಾರ, ಕಳ್ಳೀಪುರ ಗ್ರಾಮ, ವೇಮಗಲ್, ನರಸಾಪುರ, ರಾಮಸಂದ್ರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ದಿನಸಿ ವಸ್ತುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗುತ್ತಿದೆ.ಏ.1 ರಂದು ಶ್ರೀಗಳ ಜನ್ಮದಿನದ ಅಂಗವಾಗಿ ಕೋಲಾರದಿಂದ ತುಮಕೂರಿನ ಮಠಕ್ಕೆ ತೆರಳಲು ವಾಹನ ವ್ಯವಸ್ಥೆಯನ್ನು ಮಾಜಿ ನಗರಸಭೆ ಸದಸ್ಯ ಪ್ರಸಾದ್ ಬಾಬು ಮತ್ತು ಕಳ್ಳೀಪುರ ನಾಗರಾಜ್ ಮಾಡಿದ್ದಾರೆ.
ಈ ವೇಳೆ ಡೂಮ್ ಲೈಟ್ ಸರ್ಕಲ್ ಸಿಆರ್ ಶೇಖರ್ ಮಾತನಾಡಿ, ತುಮಕೂರಿನ ಸಿದ್ದಗಂಗಾ ಮಠವು ಪ್ರಸಿದ್ಧ ತ್ರಿವಿಧ ದಾಸೋಹ ಕೇಂದ್ರವಾಗಿದ್ದು, ಇಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಭಕ್ತರಿಗೆ ಅನ್ನದಾನ ನಡೆಯುತ್ತದೆ. ಹಾಗಾಗಿ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ 119ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ಮಠದ ದಾಸೋಹಕ್ಕೆ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಎರಡು ಲಾರಿಗಳಲ್ಲಿ ವಿವಿಧ ದಿನಸಿ ವಸ್ತುಗಳು ಮತ್ತು ತರಕಾರಿಗಳನ್ನು ದೇಣಿಗೆಯಾಗಿ ಕೊಡುತ್ತಿರುವುದಾಗಿ ಹೇಳಿದರು. ಮುಂದೆಯೂ ಶಿವಕುಮಾರ ಶ್ರೀಗಳ ಜನ್ಮದಿನದ ಪ್ರಯುಕ್ತ ನಿರಂತರವಾಗಿ ದಿನಸಿ ವಸ್ತುಗಳು ಮತ್ತು ತರಕಾರಿಗಳನ್ನು ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಅಣ್ಣಿಹಳ್ಳಿ ನಾಗರಾಜ್ ಮಾತನಾಡಿ, ಕೋಟ್ಯಾಂತರ ಭಕ್ತಗಣ ಸಲುಹಿದ ಕಾಯಕ ಯೋಗಿ ನಡೆದಾಡುವ ಬಸವ ಸ್ವರೂಪಿ ಪದ್ಮಭೂಷಣ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಶಿವಯೋಗಿಗಳ ಜನ್ಮದಿನವನ್ನು ಜಾತ್ಯಾತೀತ,ಧರ್ಮಾತೀತವಾಗಿ ಎಲ್ಲರೂ ಆಚರಿಸುತ್ತಾರೆ. ಭಾರತದ ಸನಾತನ ಧರ್ಮದ ಇತಿಹಾಸದಲ್ಲಿ ಗುರುಗಳಿಗೆ ವಿಶೇಷವಾದ ಸ್ಥಾನ ಮಾನಗಳಿದೆ. ಪ್ರತಿ ಆದಿ ಹಾಗೂ ಅಂತ್ಯದಲ್ಲಿ ಗುರುವಿನ ಮಹತ್ಮ ದೊಡ್ಡದಿದೆ. ಮನಕುಲವನ್ನು ಶ್ರೀಗಳು ತ್ರಿವಿಧ ದಾಸೋಹದ ಮೂಲಕ ಸಮಾಜವನ್ನು ಬೆಳಗಿದಂತ ಮಹಾ ಜ್ಞಾನ ದೀಪವಾಗಿದ್ದಾರೆ .ಅವರು ತೋರಿದ ಮಾರ್ಗದಲ್ಲಿ ಸಾಗುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಬೇಕು, ಈ ನಿಟ್ಟಿನಲ್ಲಿ ಕೋಲಾರದ ಭಕ್ತರು ನಿರಂತರವಾಗಿ ದಾಸೋಹಕ್ಕೆ ನೆರವಾಗುತ್ತಿದ್ದಾರೆ ಎಂದರು.ಕಳೆದ ನಾಲ್ಕು ದಿನಗಳಿಂದ ಭಕ್ತಾದಿಗಳಿಂದ ದವಸ ಸಂಗ್ರಹಿಸಿ ಕಳ್ಳಿಪುರ ಗ್ರಾಮದ ನಾಗರಾಜಪ್ಪ ಮತ್ತು ಮಕ್ಕಳು ಹಾಗೂ ಕೋಲಾರದ ಮಾಜಿ ನಗರಸಭಾ ಸದಸ್ಯರಾದ ಪ್ರಸಾದ್ ಬಾಬು ಮತ್ತು ಸಹೋದರರು ಉಚಿತವಾಗಿ ನೀಡಿದ ಲಾರಿಗಳಲ್ಲಿ ಕೋಲಾರ ಎ.ಪಿ.ಎಂ.ಸಿ .ತರಕಾರಿ ಮಂಡಿಗಳವರಿAದ ಸಂಗ್ರಹಿಸಿದ ಆರುವರೆ ಟನ್ ತರಕಾರಿ, 230 ಮೂಟೆ ಬೆಲ್ಲ, 105 ಮೂಟೆ ಅಕ್ಕಿ, ಉಪ್ಪು 510 ಕೆಜಿ ಹೆಸರುಬೇಳೆ , ರವೆ, ಬೇಳೆ ಕಾಳುಗಳನ್ನು ಭಕ್ತರಿಂದ ಸಂಗ್ರಹಿಸಿ ಕಳುಹಿಸಿಕೊಡಲಾಯಿತು.
ಕಳ್ಳೀಪುರ ನಟರಾಜ್, ಅಮರನಾಥ್, ಪೊಲೀಸ್ ಬಸವರಾಜ್, ರೇಣುಕಯ್ಯ, ಡೂಮ್ ಲೈಟ್ ಸರ್ಕಲ್ ಸಿಆರ್ ಶೇಖರ್, ಅಣ್ಣಿಹಳ್ಳಿ ನಾಗರಾಜ್, ನಗರಸಭಾ ಸದಸ್ಯ ರಾಕೇಶ್, ವಕ್ಕಲೇರಿ ರಾಜಪ್ಪ, ವೆಂಕಟೇಶ್, ಶ್ರೀನಿವಾಸ್, ಶ್ರೀ ರಾಮ್ ಕಾಫಿ ವರ್ಕ್ಸ್ ಪವನ್, ಅನಿಲ್ ಸೇರಿದಂತೆ ಮಠದ ಎಲ್ಲಾ ಭಕ್ತಾಧಿಗಳು ಮತ್ತು ದಾನಿಗಳು ಮಠಕ್ಕೆ ದಾನ ಮಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು