LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ರಾಷ್ಟ್ರಪ್ರಶಸ್ತಿ ವಿಜೇತ ಬಾನಾಸುಗೆ ಹುಟ್ಟೂರ ಗೌರವ

ಕಾಸರಗೋಡಿನ *ಸಾಂಸ್ಕೃತಿಕ -ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿ ಮತ್ತು ಅದರ ಸಹ ಘಟಕಗಳಾದ ನಾರಿ ಚಿನ್ನಾರಿ, ಸ್ವರ ಚಿನ್ನಾರಿ ಜೊತೆಗೆ ಕಾಸರಗೋಡಿನ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ (ವಿಶೇಷ ಉಲ್ಲೇಖ) ಪ್ರಶಸ್ತಿಗೆ ಭಾಜನರಾದ ಹಿರಿಯ ಚಲನಚಿತ್ರ ಪತ್ರಕರ್ತ ಸುಬ್ರಹ್ಮಣ್ಯ ಬಾಡೂರು (ಬಾನಾಸು) ಅವರಿಗೆ ಪದ್ಮಗಿರಿ ಕಲಾಕುಟೀರದಲ್ಲಿ ಹುಟ್ಟೂರ ಗೌರವ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು, ಕಾಸರಗೋಡಿನ ಕನ್ನಡಪರ ಸಂಘಟನೆಗಳು ಕೈಜೋಡಿಸಿದರೆ ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರಲ್ಲದೆ, ಸುಬ್ರಹ್ಮಣ್ಯ ಬಾಡೂರು ಅವರ ರಾಷ್ಟ್ರಮಟ್ಟದ ಸಾಧನೆ ಕಾಸರಗೋಡಿನ ಕನ್ನಡಿಗರಿಗೆಲ್ಲ ಕೀರ್ತಿ ತಂದಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವೆ, ಎಂಎಲ್‍ಸಿ, ತಾರೆ ಉಮಾಶ್ರೀ ಅವರು ಕಳೆದ ಐದು ದಶಕಗಳಿಂದ ಸಿನಿಮಾ ಕ್ಷೇತ್ರದ ಒಳಹೊರಗನ್ನು ಅತೀ ಹತ್ತಿರದಿಂದ ಬಲ್ಲ ಬಾನಾಸು ಅವರ ಅನುಭವಗಳನ್ನು ದಾಖಲಿಸಿ ಪುಸ್ತಕರೂಪದಲ್ಲಿ ಹೊರತರಬೇಕು. ಅದರಿಂದ ಮುಂದಿನ ತಲೆಮಾರಿನವರಿಗೆ ಕನ್ನಡ ಚಿತ್ರರಂಗದ ಮಾಹಿತಿಗಳನ್ನು ನೀಡಿದಂತಾಗುತ್ತದೆ, ಎಂದರಲ್ಲದೆ, ಒಬ್ಬ ಸೃಜನಶೀಲ, ಸೌಮ್ಯ ಸ್ವಭಾವದ ಪ್ರಶ್ನಿಸುವ ಗುಣಗಳುಳ್ಳ ಪ್ರಾಮಾಣಿಕ ಪತ್ರಕರ್ತ, ನನ್ನ ಗೆಳೆಯ ಅನ್ನುವುದೇ ನನಗೆ ಅಭಿಮಾನ ಎಂದರು.

ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ ಬಾನಾಸು ಕಾಸರಗೋಡಿಗೆ ಅಭಿಮಾನ ತರುವ ಕೆಲಸ ಮಾಡಿದ್ದಾರೆ. ಅವರು ಮತ್ತಷ್ಟು ಪ್ರಶಸ್ತಿ ಗಳಿಸಲಿ ಎಂದು ಶುಭ ಹಾರೈಸಿದರು. ಮತ್ತೊಬ್ಬ ಅತಿಥಿ, ರಾಷ್ಟ್ರಪ್ರಶಸ್ತಿ ವಿಜೇತ, ನಟ, ಶಿವಧ್ವಜ ಶೆಟ್ಟಿ ಮಾತನಾಡಿ, ಬಾನಾಸು ಅವರು ನನ್ನ ಸಿನಿಮಾ ರಂಗದ ಪ್ರವೇಶದ ಸಂದರ್ಭಗಳಲ್ಲಿ ಗುರುಸ್ಥಾನದಲ್ಲಿದ್ದು, ಬೆನ್ನುತಟ್ಟಿ ಆಶೀರ್ವದಿಸಿ ತಿದ್ದಿದವರು. ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಇರುವ ಮಾಹಿತಿ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ . ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಅವರು ಕನ್ನಡ ಚಿತ್ರರಂಗದ ಎನ್ಸೈಕ್ಲೋಪೀಡಿಯಾ ಎಂದರು. ಪತ್ರಕರ್ತ ರವೀಂದ್ರ ಜೋಶಿ ಶುಭ ಹಾರೈಸಿದರು.

ಕಾಸರಗೋಡಿನ ಕನ್ನಡಪರ ಸಂಸ್ಥೆಗಳು ಬಾನಾಸು ಅವರಿಗೆ ಶಾಲು, ಹಾರ ನೀಡಿ ಗೌರವಿಸಿದವು. ರಂಗ ಚಿನ್ನಾರಿ ಸಂಸ್ಥೆಯ ಪರವಾಗಿ ಪೇಟ,ಶಾಲು, ಫಲ, ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಬಾಡೂರು , ಚಿತ್ರರಂಗದಲ್ಲಿ ತಾನು ನಡೆದು ಬಂದ ದಾರಿಯನ್ನು ಹೇಳಿ, 'ಹುಟ್ಟೂರ ಗೌರವ' ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಹೇಳಿದರು. ಕಾರ್ಯಕ್ರಮ ಸಂಯೋಜಕ, ಕಾಸರಗೋಡು ಚಿನ್ನಾ ಸ್ವಾಗತಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು