LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಾಮಾಜಿಕ ಸೇವೆಗೆ ಮರ್ಕುಲಿ ಗೋಪಾಲಗೌಡರಿಗೆ ಗೌರವ ಡಾಕ್ಟರೇಟ್

ಬೆಂಗಳೂರು: ನವದೆಹಲಿಯ ಇಂಟರ್‍ನ್ಯಾಷನಲ್ ಹೂಮನ್ ಡೆವಲಪ್‍ಮೆಂಟ್ ಯೂನಿವರ್ಸಿಟಿ, ಕೊಡಮಾಡುವ ಗೌ. ಡಾಕ್ಟರೆಟ್ ಪದವಿಯನ್ನು ಹಾಸನ ಜಿಲ್ಲಾ ಕಾಂಗ್ರೆಸ್ ಸೇವಾದಳದ ಮಾಜಿ ಅಧ್ಯಕ್ಷ ಹಾಗೂ ಪ್ರದೇಶ ಕಾಂಗ್ರೆಸ್ ಸೇವಾದಳದ ಉಪಾಧ್ಯಕ್ಷ ಮರ್ಕುಲಿ ಗೋಪಾಲೇಗೌಡ ಅವರಿಗೆ ನೀಡಲಾಗಿದೆ.

ಅಮೇರಿಕಾದ ಅಂತಾರಾಷ್ಟ್ರೀಯ ಮಾನ್ಯತಾ ಸಮಿತಿಗೆ ಒಳಪಟ್ಟಂತೆ ನವದೆಹಲಿ ಬೋರ್ಡ್ ಆಫ್ ಡಾಕ್ಟರೆಟ್ ಪ್ರಶಸ್ತಿ ಸಮಿತಿಯು ಗೋಪಾಲಗೌಡರಿಗೆ ಈ ಪದವಿ ಪ್ರಮಾಣಪತ್ರ ನೀಡಿ ಗೌರವಿಸಿದೆ. ಕಳೆದ ಅಕ್ಟೋಬರ್ 30 ರಂದು ಗೋವಾದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಈ ಪದವಿ ಪ್ರದಾನ ಮಾಡಲಾಯಿತು.

ಯೂನಿವರ್ಸಿಟಿಯ ವಿಶ್ರಾಂತ ವೈಸ್ ಚಾನ್ಸಲರ್ ವಿಶ್ವನಾಥ್ ಚಿಮನಕಟ್ಟಿ, ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಶರಣಪ್ಪ ಮತ್ತಿಕಟ್ಟಿ, ಹೈಕೋರ್ಟ್ ನ್ಯಾಯಾಧೀಶರಾಗಿದ್ದ ರೇವಣ್ಣ ಸಿದ್ದಯ್ಯ, ಜಾನಪದ ಕೋಗಿಲೆ ಖ್ಯಾತಿ ಪದ್ಮಾವತಿ, ಹಾಗೂ ಹಂಪಿ ವಿಶ್ವ ವಿದ್ಯಾಲಯದ ಸಿಂಡಿಕೆಟ್ ಸದಸ್ಯರಾ ಶಶಿಕಲಾ, ಇಂಟರ್‍ನ್ಯಾಷನಲ್ ಡ್ಯೂಮನ್ ಡೆವಲಪ್‍ಮೆಂಟ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮಹೇಶ್‍ಗೌಡ ಇತರರು ಸಮಾರಂಭದಲ್ಲಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಮರ್ಕುಲಿ ಗೋಪಾಲಗೌಡರು ಮಾತನಾಡಿ ಜನರ ಸೇವೆ ಮಾಡಬೇಕು, ಬಡವರ ದೀನದಲಿತರು ಸಮಾಜದ ಮುಖ್ಯವಾಹಿನಿ ಬರಬೇಕು ಸಮ ಸಮಾಜ ನಿರ್ಮಾಣವಾಗಬೇಕು ಆಗ ದೇಶ ಅಭಿವೃದ್ದಿ ಸಾಧ್ಯ ಎಂಬ ಉದ್ದೇಶದಿಂದ ಸಮಾಜ ಸೇವೆ ಮಾಡುತ್ತಾ ಕಾಂಗ್ರೆಸ್ ಪಕ್ಷದ ಸೇವಾ ದಳದಲ್ಲಿ ಸಕ್ರಿಯವಾಗಿ ದುಡಿಯುತ್ತಾ ಬಂದಿದ್ದೇನೆ. ರಾಜಕೀಯ ಕ್ಷೇತ್ರ ಜನ ಸೇವೆ ಮಾಡಲು ಅದನ್ನ ಎಲ್ಲರು ಅರ್ಥಮಾಡಿಕೊಳ್ಳಬೇಕು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 5ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆ, ಮನೆಗೆ ತಲುಪಿಸಲಾಯಿತು ಇಂದು ಪ್ರತಿ ಕುಟುಂಬದಲ್ಲಿ ಅರ್ಹ ಫಲಾನುಭವಿಗಳಿಗೆ ಇದರ ಲಾಭ ಸಿಗುತ್ತಿದೆ.ಬಡವರರಾಗಿ ಹುಟ್ಟಿರಬಹುದು, ಅದರೆ ಬಡತನದಲ್ಲಿ ಜೀವನ ಸಾಗಿಸಬಾರದು 5ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಮರೇಪಕವಾಗಿ ತಲುಪಿ ಅವರ ಆರ್ಥಿಕವಗಾಗಿ ಸಬಲರಾಗಲು ಸಾಧ್ಯ. ಜನತಾ ಜನಾರ್ಧನಾ ಸೇವೆ ಮಾಡುವುದು ಪುಣ್ಯದ ಕೆಲಸ ಅದನ್ನ ನನ್ನ ಜೀವನದಲ್ಲಿ ಮಾಡುತ್ತಿದ್ದೇನೆ ಎಂಬ ಸಂತೋಷ, ಆತ್ಮತೃಪ್ತಿ ಎಂದು ತಿಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು