LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಗಂಭೀರ್ ಕೋಚ್ ಹುದ್ದೆ ತ್ಯಜಿಸಿದರೆ ಪರ್ಯಾಯ ಆಯ್ಕೆ ಯಾರು ?

ಐಪಿಎಲ್ ಮುಗಿದು ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅಫ್ಘಾನಿಸ್ತಾನದ ಜೊತೆಗೆ ದ್ವಿಪಕ್ಷೀಯ ಸರಣಿಯ ಮೊದಲ ಟೆಸ್ಟ್ ಜೂನ್ ಆರರಂದು ಆರಂಭವಾಗಲಿದೆ. ತಂಡದ ಹೆಡ್ ಕೋಚ್ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಗೌತಂ ಗಂಭೀರ್, ಒಂದು ವೇಳೆ ಆ ಸ್ಥಾನವನ್ನು ತ್ಯಜಿಸಿದರೆ, ಅವರ ಉತ್ತರಾಧಿಕಾರಿ ಯಾರಾಗಬಹುದು?ಗೌತಂ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಉತ್ತಮ ಸಾಧನೆಯನ್ನು ಮಾಡುತ್ತಿದೆ. ಸೀಮಿತ ಓವರ್?ಗಳ ಕ್ರಿಕೆಟ್?ನಲ್ಲಿ ಭಾರತ ತಂಡವು, ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್?ಅನ್ನು ಗೆದ್ದಿದೆ. 2027ರ ಏಕದಿನ ವಿಶ್ವಕಪ್?ಗೂ ಟೀಂ ಇಂಡಿಯಾ ಫೇವರೇಟ್ ತಂಡವಾಗಿ ಕಣಕ್ಕಿಳಿಯಲಿದೆ. ಗಂಭೀರ್ ಅವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಯಾರು ಆಲ್ಟರ್ನೇಟಿವ್ ಆಗಬಹುದು ಎನ್ನುವುದರ ಬಗ್ಗೆ ಮಾಜಿ ಭಾರತ ತಂಡದ ಆಟಗಾರ ಸಂಜಯ್ ಮಂಜ್ರೇಕರ್, ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.ಒಂದು ವೇಳೆ ಟಿ20 ಆವೃತ್ತಿಯ ಪಂದ್ಯಗಳಿಗೆ ಸೀಮಿತವಾಗಿ, ಹೆಡ್ ಕೋಚ್ ಅನ್ನು ನೇಮಿಸುವುದಾದರೆ, ಗೌತಂ ಗಂಭೀರ್ ಅವರಿಗೆ ಮತ್ತೋರ್ವ ಮಾಜಿ ಕ್ರಿಕೆಟಿಗ, ಆಶಿಸ್ ನೆಹ್ರಾ ಸೂಕ್ತ ಆಯ್ಕೆಯಾಗಬಲ್ಲರು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ನೆಹ್ರಾ, ಸದ್ಯ ಗುಜರಾತ್ ಟೈಟನ್ಸ್ ತಂಡದ ಮೆಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮತ್ತು, ಇವರು ಯಾರನ್ನೂ ಓಲೈಸಲು ನೋಡುವುದಿಲ್ಲ ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.ಐಪಿಎಲ್ ನಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಆಶಿಸ್ ನೆಹ್ರಾ, ಗುಜರಾತ್ ಟೈಟನ್ಸ್ ತಂಡವನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಎನ್ನುವುದು ಸಂಜಯ್ ಮಂಜ್ರೇಕರ್ ಅಭಿಪ್ರಾಯ. 2022ರಲ್ಲಿ ಗುಜರಾತ್ ತಂಡವು, ಐಪಿಎಲ್ ಫ್ರಾಂಚೈಸ್ ಭಾಗವಾದ ನಂತರ, ತುಂಬಾ ಶ್ರಮವಹಿಸಿ ತಂಡವನ್ನು ಕಟ್ಟಿದ್ದಾರೆ. ಗುಜರಾತ್ ತಂಡವು, ಒಮ್ಮೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಇನ್ನೆರಡು ಸಂದರ್ಭಗಳಲ್ಲಿ ಫೈನಲ್ ಪ್ರವೇಶಿಸಿದೆ. ಮತ್ತೊಂದು ಸೀಸನ್?ನಲ್ಲಿ ಪ್ಲೇಆಫ್ ಹಂತ ಪ್ರವೇಶಿಸಿದೆ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
"ಆಶಿಸ್ ನೆಹ್ರಾ ಅವರೊಬ್ಬರು ಕಠಿಣ ಪರಿಶ್ರಮಿ, ಸ್ಮಾರ್ಟ್ ಕ್ರಿಕೆಟಿಗ. ದಿನದ 24ಗಂಟೆನೂ ಕ್ರಿಕೆಟ್ ಬಗ್ಗೆ ಯೋಚಿಸುವ ವ್ಯಕ್ತಿತ್ವ ಅವರದ್ದು. ಕ್ರಿಕೆಟ್ ಬಗ್ಗೆ ಮಾತನಾಡುವಾಗ ಅವರು ಭಾವನೆಗೆ ಒಳಗಾಗುವುದಿಲ್ಲ. ಬದಲಿಗೆ ತಂಡಕ್ಕಿರುವ ಸಮಸ್ಯೆ ಏನು, ಅದನ್ನು ಸರಿದಾರಿಗೆ ತರಲು ಏನು ಮಾಡಬೇಕು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. ಇನ್ನೊಬ್ಬರ ಮುಲಾಜಿಗೆ ತಕ್ಕಂತೆ ಅವರು ಕುಣಿಯುವುದಿಲ್ಲ " ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು