LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಚಿತ್ರರಂಗದ ಒಳಿತಿಗಾಗಿ ಐಎಫ್‍ಎಂಎ ಸಂಸ್ಥೆ

ಪ್ರಸಕ್ತ ಚಿತ್ರರಂಗವು ಸಂಕಷ್ಟದಲ್ಲಿದೆ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ. ಇದರಿಂದ ನಿರ್ಮಾಣವಾಗುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈಗ ಸಿನಿಮಾರಂಗಕ್ಕೆ ಅನುಕೂಲವಾಗಲೆಂದೇ ಐಎಫ್‍ಎಂಎ (ಇಂಡಿಯನ್ ಫಿಲಂ makers ಅಸೋಸಿಯೇಷನ್) ಶಾಖಾ ಸಂಸ್ಥೆಯೊಂದು ಕನ್ನಡಿಗ H.R.Dilipkumar ಸಾರಥ್ಯದಲ್ಲಿ ತೆರೆದುಕೊಂಡಿದೆ.

ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಕಚೇರಿ ಉದ್ಗಾಟನೆ ಮತ್ತು website (www.ifma.in) ಲೋಕಾರ್ಪಣೆ ಸಮಾರಂಭವು ಅದ್ದೂರಿಯಾಗಿ ನಡೆಯಿತು.ನವಶಕ್ತಿ ಪೀಠದ ಡಾ.ಶ್ರೀಶ್ರೀ ಭಗವಾನ್ ವಿಷ್ಣುದತ್ತ ಗುರೂಜಿ, ನಟ, ನಿರ್ದೇಶಕ, ಸಾಹಿತಿ ವಿ.ಮನೋಹರ್ ಹಾಗೂ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಥೆಯು ಒದಗಿಸುತ್ತಿರುವ ಸೇವೆಗಳನ್ನು ಚಿತ್ರರಂಗದವರು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿ.ಮನೋಹರ್ ಹಾಗೂ ಡಾ.ವಿ.ನಾಗೇಂದ್ರಪ್ರಸಾದ್ ಕೋರಿಕೊಂಡರು.ಐಎಫ್‍ಎಂಎ ಸಂಸ್ಥೆಯ ಕೇಂದ್ರಕಚೇರಿ ತೆಲಂಗಾಣದಲ್ಲಿದ್ದು, ಇಂದು 12 ರಾಜ್ಯಗಳಲ್ಲಿ 9 ಕೇಂದ್ರಗಳು ಪ್ರಾರಂಭಗೊಂಡಿದೆ. ಇದರಲ್ಲಿ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಘರು ನೊಂದಣಿ ಮಾಡಿಸಬಹುದಾಗಿದೆ.

ನಿಯಮಾನುಸಾರ ನಿರ್ಮಾಪಕರುಗಳಿಗೆ ಬ್ಯಾಂಕಿನಿಂದ ಸಾಲ ಮಂಜೂರು ಮಾಡಿಸಿ ಕೊಡಲಾಗುವುದು. ವಾರದಲ್ಲಿ ಬಿಡುಗಡೆಯಾದ ಒಂದು ಕನ್ನಡ ಚಿತ್ರವನ್ನು ಆಯ್ಕೆ ಮಾಡಿಕೊಂಡು ಐದು ಸಾವಿರ ಟಿಕೆಟ್ ಖರೀದಿ ಮಾಡಲಾಗುತ್ತದೆ. ಓಟಿಟಿ, ಡಬ್ಬಿಂಗ್, ಆಡಿಯೋ, ವಿತರಣೆ ಇನ್ನು ಮುಂತಾದ ಸೇವೆಗಳನ್ನು ನೀಡಲಾಗಿ ನಿರ್ಮಾಪಕರಿಗೆ ಆಸರೆಯಾಗಿ ನಿಲ್ಲುತ್ತದೆ. ಅಮೆಜಾನ್ ಪ್ರೈಮ್,Netflix ಅಧಿಕಾರಿಗಳೊಂದಿಗೆ ನಿರ್ಮಾಪಕರನ್ನು ಭೇಟಿ ಮಾಡಿಸಿ ವ್ಯವಹಾರ ಮಾಡಿಕೊಡಲಾಗುತ್ತದೆ.

ಇದಕ್ಕೆ ಸಂಸ್ಥೆಯು ಯಾವುದೇ ರೀತಿಯ ದಲ್ಲಾಳಿ ಶುಲ್ಕ ಪಡೆಯುವುದಿಲ್ಲ. ಅಲ್ಲದೆ ಸಂಸ್ಥೆಯು ಮೊದಲ ಪ್ರಯತ್ನ ಎನ್ನುವಂತೆ ವೋಲ್ಸೇಲ್ ಬ್ಯಾಸ್ಕೆಟ್ ಗ್ರೂಪ್ಸ್ ಸಹಭಾಗಿತ್ವದೊಂದಿಗೆ ಶ್ರೀ ಮೂಕಾಂಬಿಕಾ ರೇಷನ್ ಕಿಟ್ ಹಾಗೂ ಶ್ರೀ ಸ್ಟಾರ್ ಗೋಲ್ಡ್ ಅಡಿಯಲ್ಲಿ ಕಲಾವಿದರು, ತಂತ್ರಜ್ಘರಿಗೆ ಅತಿ ಕಡಿಮೆ ಬೆಲೆಯಲ್ಲಿ ದಿನಸಿ ಸಾಮಾನುಗಳನ್ನು ಉಚಿತವಾಗಿ ಸರಬರಾಜು ಮಾಡಲು ಯೋಜನೆ ರೂಪಿಸಿಕೊಂಡಿದೆ.
ನಿರ್ದೇಶಕರುಗಳಾದ ಬುಕ್ಕಾಪಟ್ಟಣವಾಸು, ಮಾ.ಚಂದ್ರು, ಸೋಷಿಯಲ್ ಮೀಡಿಯಾ ಅಧ್ಯಕ್ಷರು, ನಿರ್ಮಾಪಕರು, ನಿರ್ದೇಶಕರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು