LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ನಗರದಲ್ಲಿ `ನೈಬರ್ ಹುಡ್ ವಾಚ್ ಸ್ಕೀಮ್' ಜಾರಿ

ಬೆಂಗಳೂರು: ಅಂದಾಜು ಸುಮಾರು 20 ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಜಾರಿಯಲ್ಲಿದ್ದ ನೈಬರ್ ಹುಡ್ ವಾಚ್ಸ್ಕೀಮ್‍ನು (ನೆರೆಹೊರೆಯವರ ಅಥವಾ ಅಕ್ಕಪಕ್ಕದವರ) ಬೆಂಗಳೂರು ನಗರದಲ್ಲಿ ಮತ್ತೆ ಪ್ರಾಯೋಗಿಕವಾಗಿ ಡಿಸಿಪಿ ಪಶ್ಚಿಮ ವಿಭಾಗದಲ್ಲಿ ಜಾರಿಗೆ ತರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದರವರು ತಮ್ಮ ಮಾಸಿಕ ಪೆರೇಡ್‍ನಲ್ಲಿ ತಿಳಿಸಿದರು.

ರಾತ್ರಿ ಹೊತ್ತು ಮನೆಗಳ್ಳತನ, ಒಂಟಿ ಜನರನ್ನು ಬೆದರಿಸಿ ದರೋಡೆ ಮಾಡುವುದು ಮತ್ತು ವಾಹನಗಳ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ನೈಬರ್‍ಹುಡ್ ವಾಚ್ಕೀಮ್ ಅನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.ರಾತ್ರಿ 10 ರಿಂದ ಬೆಳಗ್ಗೆ 5ರ ತನಕ ಪೊಲೀಸರ ಜೊತೆಗೂಡಿ ಪಹರೆ ಅಥವಾ ಗಸ್ತು ನಡೆಸುತ್ತಿದ್ದರು. ಇದನ್ನು ಪೊಲೀಸ್ ಠಾಣಾಮಟ್ಟದ ಬೀಟ್‍ಗಳಲ್ಲಿ ವಾಸಿಸುತ್ತಿದ್ದ ಸಾರ್ವಜನಿಕರ ಸಹಾಯದಿಂದ ಜಾಸ್ತಿಗೊಳಿಸಿ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಲು ಜಾರಿ ಮಾಡಲಾಗಿದೆ ಎಂದು ಹೇಳಿದರು.

ಥಣಿಸಂದ್ರದಲ್ಲಿರುವ ಸಿ ಏ ಆರ್ ಉತ್ತರ ವಿಭಾಗದ ಕವಾಯಿತು ಮೈದಾನದಲ್ಲಿ ಇಂದು ಬೆಳಿಗ್ಗೆ 10 ಪ್ಲಟೂನ್ ವತಿಯಿಂದ ಗೌರವ ವಂದನೆ ಸ್ವೀಕರಿಸಿ ಮಾತ
ನಾಡಿದ ಆಯುಕ್ತರು ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸಮರ್ಪಕವಾಗಿ ಡ್ರಿಲ್ ನಡೆಯುತ್ತಿಲ್ಲ ವೆಂದು ಬೇಸರ ವ್ಯಕ್ತಪಡಿಸಿದರು.
ಡ್ರಿಲ್ ಮಾಡುವುದನ್ನು ಸಣ್ಣ ಸಣ್ಣ ವಿಡಿಯೋ ಮಾಡಿ ಎಲ್ಲಾ ಪೊಲೀಸ್ ಠಾಣೆಗೂ ಸರಬರಾಜು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ಮುಂದೆ ಪ್ರತಿ ಡಿಸಿಪಿ ಮತ್ತು ಎಸಿಪಿ ಗಳ ಮಾರ್ಗದರ್ಶನದಲ್ಲಿ ಪ್ರತಿವಾರ ಪೊಲೀಸ್ ಠಾಣಾ ಮಟ್ಟದಲ್ಲಿ ವಾರದ ಕವಾಯಿತನ್ನು ನಡೆಸಬೇಕೆಂದು ಆದೇಶಿಸಿದರು.

ಚುನಾವಣಾ ಕೆಲಸದ ನಿಮಿತ್ತ ಬೇರೆ ಜಿಲ್ಲೆಗಳಿಂದ ಹಾಗೂ ಇತರೆ ವಿಭಾಗಗಳಿಂದ ಬಂದಿದ್ದ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಮತ್ತುಸಬ್ ಇನ್ಸ್ಪೆಕ್ಟರ್ ರವರಗಳಿಗೆ ಉತ್ತಮ ಕಾರ್ಯ ನಿರ್ವಹಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು.ಅಂದಾಜು ಸುಮಾರು ಏಳು ವರೆ ಸಾವಿರ ಪೊಲೀಸ್ ಸಿಬ್ಬಂದಿಗಳು ಬಹಳ ದಪ್ಪಗೆ ಇರುವುದರಿಂದ ತೂಕಗಳನ್ನು ಇಳಿಸಿಕೊಳ್ಳಬೇಕೆಂದು ಆದೇಶಿಸಿದರು ಮತ್ತು ಆರೋಗ್ಯ ತಪಾಸಣೆಯನ್ನು ಸಹ ಕಾಲಕಾಲಕ್ಕೆ ಮಾಡಿಸಿಕೊಳ್ಳಬೇಕೆಂದು ತಿಳುವಳಿಕೆ ನೀಡಿದರು.ಇದೇ ಸಮಯದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಕ್ಕಾಗಿ ಸುಮಾರು 60 ಜನ ಸಿಬ್ಬಂದಿಗಳಿಗೆ ಪ್ರಸಂಶನಾ ಪತ್ರ ಮತ್ತು ನಗದು ಬಹುಮಾನವನ್ನು ಸಹ ನೀಡಿ ಅಭಿನಂದಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು