LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

`ಕೃಷ್ಣಬೈರೇಗೌಡರ ವಿರುದ್ಧ ನೀರಾವರಿ ಹೋರಾಟಗಾರರು ಆಕ್ರೋಶ, ಚರ್ಚೆಗೆ ಪಂಥಾಹ್ವಾನ’

ಚಿಕ್ಕಬಳ್ಳಾಪುರ: ಮೂರು ದಶಕಗಳ ಹೋರಾಟದ ನಂತರವೂ ಜಿಲ್ಲೆಗೆ ಶುದ್ಧ ನೀರು ನೀಡುವಲ್ಲಿ ಸರ್ಕಾರಗಳು ವಿಫಲವಾಗಿದ್ದು, ಅವಿಭಜಿತ ಜಿಲ್ಲೆಯಲ್ಲಿ ರಾಜಕೀಯ ವಿಷಯ ರೂಪಿಸಿಕೊಂಡ ಕೃಷ್ಣ ಬೈರೇಗೌಡರು ಈ ಜಿಲ್ಲೆಯ ಜನರ ಪಾಲಿಗೆ ಅಪಾಯವಾಗಿರುವ ನೀರಿನ ಬಗ್ಗೆ ಹಗುರವಾಗಿ ಮಾತನಾಡಿರುವುದು ಉಭಯ ಜಿಲ್ಲೆಗಳಿಗೆ ಮಾಡಿದ ಮೋಸವಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ೬ರಂದು ದಾಖಲೆ ಬಜೆಟ್ ಮಂಡಿಸಿದ್ದಾರೆ. ಆದರೆ ಜಿ¯್ಲೆಯ ನೀರಾವರಿಗೆ ಏನೂ ನೀಡಿಲ್ಲ, ಆದರೂ ಉಭಯ ಜಿಲ್ಲೆಗಳಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸಂಘಟನೆಯಾಗಿಲ್ಲ, ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಿಲ್ಲ, ಇದು ಈ ಜಿಲ್ಲೆಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದರು.
ವಿರೋಧ ಪP್ಷÀವಾಗಿ ನೀರಾವರಿ ಹೋರಾಟ ಸಮಿತಿ ಕಳೆದ ಎರಡು ದಶಕಗಳಿಂದ ಕೆಲಸ ಮಾಡುತ್ತಿದೆ, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್ ಅವರು ಕಲುಷಿತ ನೀರಿನ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರು, ಇದಕ್ಕೆ ಸಣ್ಣ ನೀರಾವರಿ ಸಚಿವ ಬೋಸರಾಜ್ ಸುಳ್ಳು ಉತ್ತರ ನೀಡಿದರೆ, ಅದೇ ಸುಳ್ಳು ಉತ್ತರದ ಆದಾರದ ಮೇಲೆ ಕಂದಾಯ ಸಚಿವ ಕೃಷ್ಣಬೈರೇಗೌಡರು ಹೇಳಿಕೆ ನೀಡುವ ಮೂಲಕ ಜಿಲ್ಲೆಯ ನೀರಾವರಿ ಹೋರಾಟದ ದಶಕದ ವರದಿಗಳನ್ನು ಲಘುವಾಗಿ ಪರಿಗಣಿಸಿದರು, ಕೃಷ್ಣಬೈರೇಗೌಡರು ಅನುಭವಿಸುತ್ತಿರುವ ಅಧಿಕಾರಕ್ಕೆ ಕೋಲಾರ ಜಿಲ್ಲೆಯ ಜನತೆಯ ಆಶೀರ್ವಾದ ಕಾರಣ ಎಂಬುದನ್ನು ಅವರು ಮರೆತಿರುವುದು ದುರಾದೃಷ್ಟ ಎಂದರು.
ನೀರಾವರಿಗೆ ಕೃಷ್ಣ ಬೈರೇಗೌಡರ ಪಾತ್ರ ಏನು ಎಂಬುದು ಬಹಿರಂಗಪಡಿಸಲಿ, ನೀರಾವರಿ ಹೋರಾಟಕ್ಕೆ ಸಂಬAಧಿಸಿ ಎಲ್ಲೂ ಚಕಾರ ಎತ್ತದ ಕೃಷ್ಣಬೈರೇಗೌಡ ಸಣ್ಣ ನೀರಾವರಿ ಸಚಿವರ ವಾದ ಸಮರ್ಥನೆ ಮಾಡಿರುವುದು ವಿಪರ್ಯಾಸ, ಸದನಕ್ಕೆ ಸಚಿವರು ನೀಡಿದ ವರದಿ ಪೊಟ್ಟಣ ಕಟ್ಟಲು ಯೋಗ್ಯ ಎಂದು ಲೇವಡಿ ಮಾಡಿದ ಆಂಜನೇಯರೆಡ್ಡಿ, ಇದು ಮೂರೂ ಜಿಲ್ಲೆಗಳಿಗೆ ಮಾಡಿದ ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಕುಡಿಯುವ ನೀರಿನಲ್ಲಿ ಯುರೇನಿಯಂ ಇದೆ, ಈ ಬಗ್ಗೆ ಕೃಷ್ಣಬೈರೇಗೌಡರು ಎಂದೂ ಮಾತನಾಡಲಿಲ್ಲ, ಎತ್ತಿನಹೊಳೆ ಯೋಜನೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗಾಗಿ ಮಾಡಿದ ಯೋಜನೆ, ಆದರೆ ಈಗ ಏಳು ಜಿಲ್ಲೆಗಳಿಗೆ ವಿಸ್ತರಣೆ ಮಾಡಿದಾಗಲೂ ಮಾತನಾಡಲಿಲ್ಲ, ಡಿಕೆ ಶಿವಕುಮಾರ್ ಅವರು ಸದನದಲ್ಲಿ ನೀಡಿದ ಉತ್ತರದಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ ಕೇವಲ ೮ ಟಿಎಂಸಿ ಮಾತ್ರ ನೀರು ಸಿಗಲಿದೆ ಎಂದು ಉತ್ತರ ಕೊಟ್ಟಾಗಲೂ ಮಾತನಾಡಿಲ್ಲ, ವಿಶೇಷ ಅಧಿವೇಶನದಲ್ಲಿ ಎತ್ತಿನಹೊಳೆ ಭ್ರಷ್ಟಾಚಾರದ ಬಗ್ಗೆ ಸಿಎಜಿ ವರದಿ ಸದನದಲ್ಲಿ ಮಂಡಿಸಿದಾಗಲೂ ಮಾತನಾಡಲಿಲ್ಲ, ಆದರೆ ಬೋಸರಾಜು ಸುಳ್ಳಿನ ಉತ್ತರಕ್ಕೆ ಕೃಷ್ಣಬೈರೇಗೌಡ ಉಡಾಫರ ಉತ್ತರ ನೀಡಿರುವುದು ವಿಪರ್ಯಾಸ ಎಂದರು.
ನೀರಾವರಿ ತಜ್ಞರನ್ನು ಕರೆತಂದು ಚರ್ಚೆ ಮಾಡೋಣ, ದಿನಾಂಕ ನೀವೇ ನಿಗಧಿ ಪಡಿಸಿ, ಮುಂದಿನ ಪರಿಣಾಮಗಳಿಗೆ ಹೊಣೆ ಯಾರು ಎಂಬ ಬಗ್ಗೆ ಬಹಿರಂಗವಾಗಲಿ, ತರಕಾರಿಯಲ್ಲಿ ಲೋಹದ ಅಂಶಗಳಿವೆ, ಈ ಬಗ್ಗೆ ಮಾತನಾಡದ ಕೃಷ್ಣಬೈರೇಗೌಡ ಜಿಲ್ಲೆಗಳ ಜನತೆಗೆ ಅನ್ಯಾಯ ಮಾಡಲು ಹೊರಟಿರುವುದು ಸರಿಯಲ್ಲ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೋಡಿ, ಸಪ್ಲಮೆಂಟರಿ ಬಜೆಟ್ ನಲ್ಲಿ ಮೂರನೇ ಹಂತದ ಶುದ್ಧೀಕರಣ ಮಾಡದಿದ್ರೆ ಹೋರಾಟ ತೀವ್ರವಾಗಲಿದೆ. ಕೃಷ್ಣ ನೀರಿನಿಂದಾದರೂ ಜಿಲ್ಲೆಗೆ ನೀರು ತರುವ ಪ್ರಯತ್ನ ಮಾಡಿ, ಮೂರೂ ಜಿಲ್ಲೆಗಳ ಜನತೆ ಎಚ್ಚೆತ್ತಿz್ದÁರೆ, ಹೋರಾಟ ತೀವ್ರವಾಗಲಿದೆ ಎಂದರು.
ಈ ಪತ್ರಿಕಾಗೋಷ್ಟಿಯಲ್ಲಿ ಸುಷ್ಮಾ ಶ್ರೀನಿವಾಸ್, ಲಕ್ಷö್ಮಯ್ಯ, ಸ್ವಾಮಿ ಕೋಲಾರ, ಶ್ರೀರಾಮಗೌಡ, ರವಿಕುಮಾರ್ ಕನ್ನಡಸೇನ್, ಮುಂತಾದವರು ನೀರಾವರಿ ಹೋರಾಟ ಸಮಿತಿಯ ಮುಖಂಡರು ಹಾಜರಿದ್ದರು.
ಜಿಲ್ಲೆಗಳ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು