LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"ಜೈ ಗದಾ ಕೇಸರಿ ಟೀಸರ್‌ ಹಾಡುಗಳು ಬಿಡುಗಡೆ"

ಜೈ ಗದಾ ಕೇಸರಿ ಚಿತ್ರದ ಟೀಸರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಕರ್ನಾಟಕ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಉಜ್ಜಲ್ ರಘು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿ.ಬಿ.ಮೂವೀ ಕ್ರಿಯೇಶನ್ಸ್ ಅಡಿಯಲ್ಲಿ ಕೊಪ್ಪಳ ಮೂಲದ ಉದ್ಯಮಿ ಬಸವರಾಜ್ ಭಜಂತ್ರಿ ಕಲಾವಿದರನ್ನು ಉಳಿಸುವ ಸಲುವಾಗಿ ಹಾಗೂ ಕನ್ನಡ ನಾಡಿಗೆ ಹೆಮ್ಮೆ ತರಬೇಕೆಂಬ ಅಭಿಲಾಷೆಯಿಂದ ಬಂಡವಾಳ ಹೂಡಿದ್ದಾರೆ. ಯತೀಶ್‌ಕುಮಾರ್.ವಿ ಮತ್ತು
ಮಂಜು ಹೊಸಪೇಟೆ ಜಂಟಿಯಾಗಿ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಗಮೂರ್ತಿ ಮತ್ತು ಕುಮಾರ್ ಕೋ ಡೈರಕ್ಟರ್ ಆಗಿರುತ್ತಾರೆ.

ತಿಪ್ಪೆಸ್ವಾಮಿ(ಗೌಳಿ) ಕಾರ್ಯಕಾರಿ ನಿರ್ಮಾಪಕರಾಗಿರುತ್ತಾರೆ. ನಾಯಕರುಗಳಾಗಿ ರಾಜ್ ಚರಣ್ ಬ್ರಹ್ಮಾವರ್ ಮತ್ತು ಈಶ್ವರನಾಯಕ. ಈ ಪೈಕಿ ಈಶ್ವರನಾಯಕ ಸಹ ನಿಮಾಪ ಕರಾಗಿ ಗುರುತಿಸಿಕೊಂಡಿದ್ದಾರೆ. ಜೀವಿತಾ ವಸಿಷ್ಠ ನಾಯಕಿ. ಕೋಮಲ್ ದೇವಕರ್ ಉಪನಾಯಕಿ. ಇವರೊಂದಿಗೆ ಹಿರಿಯ ಕಲಾವಿದರಾದ ಅವಿನಾಶ್, ಹೊನ್ನವಳ್ಳಿ ಕೃಷ್ಣ, ಧರ್ಮ, ಅರವಿಂದರಾವ್, ಜಯರಾಮ್, ಪ್ರಶಾಂತ್ ಸಿದ್ದಿ, ಲಕ್ಷಣದಾಸ್, ವರುಣ್, ರಮೇಶ್(ಬಿಲ್ಲಾ) ಮುಂ ತಾದವರು ನಟಿಸಿದ್ದಾರೆ.

ಕಾರ್ತಿಕ್‌ವೆಂಕಟೇಶ್ ಮೂರು, ಪ್ರಸನ್ನ ಬೋಜಶೆಟ್ಟರ್ ಶೀರ್ಷಿಕೆ ಗೀತೆ ಹಾಗೂ ಜಾರ್ಜ್ಥಾಮಸ್ ಸ್ಯಾಮ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶ್ಯಾಮ್
ಸಿಂಧನೂರು-ಎಸ್.ನಾಗರಾಜ್, ಸAಕಲನ ಪೂಜಾ.ಎಸ್, ಸಾಹಸ ಸುಪ್ರೀಂಸುಬ್ಬು ಸೂರಿರಾ ಮ್‌ದೇವ್ ಜಾನಿ-ವೈಲೆಂಟ್‌ವೇಲು- ಅಲ್ಟಿಮೇಟ್ ಶಿವು, ನೃತ್ಯ ಕಂಬಿರಾಜ್ ಅವರದಾಗಿದೆ. ಲಿಖಿತ್ ಫಿಲಂಸ್‌ನ ರಮೇಶ್ ಬಿಡುಗಡೆ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸಾರಾಗೋವಿಂದು ಮಾತನಾಡಿ ಸಿದ್ಧತೆ ಮಾಡಿಕೊಂಡು ಬಾರದಿದ್ದರೆ ಚಿತ್ರ ತಡವಾಗುತ್ತದೆ.

ಅನುಭವ ಪಡೆದುಕೊಂಡು ಬಂದರೆ ಇಂತಹ ಕಷ್ಟಗಳು ಬರುವುದಿಲ್ಲವೆಂಬುದು ಈಗಿನ ಪೀಳಿಗೆಯವರು ತಿಳಿದುಕೊಂಡರೆ ಉತ್ತಮ. ಈಶ್ವರನಾಯಕ ಅವರು ಮಾತನಾಡುವಾಗ ಭಾವುಕರಾದರು. ಅವರಿಗೆ ಎಲ್ಲಿ ಎಡವಿದ್ದೇನೆ. ಅದನ್ನು ಸರಿಪಡಿಸಿಕೊಂಡನೆAಬ ಪಶ್ಚಾತ್ತಾಪ ಆಗಿದೆ. ಇದಕ್ಕೆ ನಿರ್ಮಾಪಕರು ಸಹಕಾರ
ನೀಡಿದ್ದಾರೆ. ಇಬ್ಬರು ನಿರ್ದೇಶಕರು ಕೆಲಸ ಮಾಡಿದ್ದಾರೆ. ಹಿಂದೆ ದೊರೆ-ಭಗವಾನ್ ಎಂತಹ ಒಳ್ಳೆ ಚಿತ್ರ ಕೊಟ್ಟಿದ್ದಾರೆ. ಅವುಗಳು ಇಂದಿಗೂ ಜೀವಂತವಾಗಿದೆ. ಅವರಂತೆ ನಿಮಗೂ ಶ್ರೇಯ ಸಿಗಲಿ. ಹಿಂದೂ ಸಂಸ್ಕೃತಿ ಎತ್ತಿ ಹಿಡಿಯುವಂತ ಟೈಟಲ್ ಚಿತ್ರಕ್ಕೆ ಭೂಷಣವಾಗಿದೆ. ತೆರೆಗೆ ಬರುವ ಮುಂಚೆ ಪ್ರಚಾರ ಮಾಡಿದಾಗ ಮಾತ್ರ ಚಿತ್ರವು ಜನರಿಗೆ ತಲುಪುತ್ತದೆಂದು ತಂಡಕ್ಕೆ ಶುಭ ಹಾರೈಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು