LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಆಂಜನೇಯನ ಗಧೆಯ ಮಹತ್ವ ಹೇಳುವ ಜೈ ಗದಾ ಕೇಸರಿ..

ಕಳೆದ 3 ದಶಕಗಳಿಂದ ಸಹ ನಿರ್ದೇಶಕ, ಸಂಕಲನಕಾರನಾಗಿ ಕೆಲಸ ಮಾಡಿರುವ ಯತೀಶ್ ಕುಮಾರ್ ವಿ. ಈಗ ಸ್ವತಂತ್ರ ನಿರ್ದೇಶಕನಾಗಿದ್ದಾರೆ.ಈಗಾಗಲೇ ಶ್ರೀರಾಮನ ಪರಮಭಕ್ತ ಶ್ರೀ ಆಂಜನೇಯನ ಕುರಿತಂತೆ ಸಾಕಷ್ಟು ನಿರ್ದೇಶಕರು ಸಿನಿಮಾ ಮಾಡಿದ್ದಾರೆ.

ಆದರೆ, ಆಂಜನೇಯನ ಗದೆಯ ಪ್ರಾಮುಖ್ಯತೆ, ವಿಶೇಷತೆಗಳನ್ನಿಟ್ಟುಕೊಂಡು ಯಾರೂ ಸಹ ಸಿನಿಮಾ ಮಾಡಿಲ್ಲ. ಯತೀಶ್ ಕುಮಾರ್ ಅವರಿಂದ ಅಂಥದ್ದೊಂದು ಪ್ರಯತ್ನ ನಡೆದಿದೆ.ಆಂಜನೇಯನ ಗದೆಯ ಮಹತ್ವದ ಬಗ್ಗೆ ಹಾಗೂ ಅದರ ಸುತ್ತಲೂ ನಡೆಯುವ ಕಥೆಯನ್ನು ಇಟ್ಟುಕೊಂಡು 'ಜೈ ಗಧಾಕೇಸರಿ' ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ಹೊಸಪೇಟೆ, ಸಿಂಧನೂರು ಸುತ್ತಮುತ್ತ 70 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.

ಬಸವರಾಜ್ ಭಜಂತ್ರಿ ಮೂವೀ ಮೇಕರ್ಸ್ ಮೂಲಕ ಬಸವರಾಜ್ ಭಜಂತ್ರಿ ಅವರು ಜೈ ಗಧಾ ಕೇಸರಿ ಚಿತ್ರವನ್ನು ನಿರ್ಮಿಸಿದ್ದು, ಈಶ್ವರ್ ನಾಯಕ್ ಅವರ ಸಹ ನಿರ್ಮಾಣವಿದೆ. ಯತೀಶ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ಚಿತ್ರದಲ್ಲಿ ನಾಯಕನಾಗಿ ಈಶ್ವರ್ ನಾಯಕ್, ನಾಯಕಿಯರಾಗಿ ಜೀವಿತಾ ಹಾಗೂ ಕೋಮಲ ನಟಿಸಿದ್ದು, ಅವಿನಾಶ್, ಧರ್ಮ, ಅರವಿಂದರಾವ್, ಹೊನ್ನವಳ್ಳಿ ಕೃಷ್ಣ, ಪ್ರಶಾಂತ್ ಸಿದ್ದಿ, ರಾಜ್ ಚರಣ್ ಬ್ರಹ್ಮವರ್ ಉಳಿದ ಪಾತ್ರಗಳಲ್ಲಿದ್ದಾರೆ.

ಇನ್ನು ಈ ಚಿತ್ರದಲ್ಲಿ 5 ಹಾಡುಗಳಿದ್ದು, ಜಾರ್ಜ್ ಥಾಮಸ್ ಶ್ಯಾಮ್, ಕಾರ್ತೀಕ್ ವೆಂಕಟೇಶ್, ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ 8 ಸಾಹಸ ದೃಶ್ಯಗಳಿಗೆ ಸುಪ್ರೀಂ ಸುಬ್ಬು, ಸೂರಿ, ರಾಮ್ ದೇವ್ ಜಾನಿ, ಅಲ್ಟಿಮೇಟ್ ಶಿವು. ವೈಲೆಂಟ್ ವೇಲು ಸಾಹಸ ಸಂಯೋಜನೆ ಮಾಡಿದ್ದಾರೆ. ಶ್ಯಾಮ್ ಸಿಂಧನೂರು ಅವರ ಛಾಯಾಗ್ರಹಣ, ಪೂಜಾ.ಸಿ. ಅವರ ಸಂಕಲನ, ಮಂಜು ಹೊಸಪೇಟೆ ಸಹನಿರ್ದೇಶನ ಈ ಚಿತ್ರಕ್ಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು