LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ರಾಮಾಯಣ' ಚಿತ್ರದ `ಜೈ ಜೈ ರಾಮ್' ಭಕ್ತಿ ಗೀತೆ ಲೋಕಾರ್ಪಣೆ


ನಿತೀಶ್ ತಿವಾರಿ ನಿರ್ದೇಶನದ ಬೃಹತ್ ದೃಶ್ಯಕಾವ್ಯ `ರಾಮಾಯಣ’  ಚಿತ್ರದ ಮ್ಯೂಸಿಕಲ್ ಜರ್ನಿ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಚಿತ್ರತಂಡವು ಶ್ರೀರಾಮನ ದಿವ್ಯ ಚೇತನವನ್ನು ಕೊಂಡಾಡುವ `ಜೈ ಜೈ ರಾಮ್’ ಎಂಬ ಪ್ರಥಮ ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ಪ್ರಚಾರದ ಮೊದಲ ಹೆಜ್ಜೆಯನ್ನು ಇಟ್ಟಿದೆ. ಆಧ್ಯಾತ್ಮಿಕ ಆರತಿಯ ಪವಿತ್ರತೆಯೊಂದಿಗೆ ವಿಶಾಲವಾದ ಸಿನಿಮಾ ಸಂಗೀತವನ್ನು ಸಮ್ಮಿಳಿತಗೊಳಿಸಿ ಈ ಹಾಡನ್ನು ನಿರ್ಮಿಸಲಾಗಿದೆ.ಭಾರತೀಯ ಚಿತ್ರರಂಗದ ದೈತ್ಯ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ದಿವ್ಯ ಗೀತೆಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಕನ್ನಡ ಆವೃತ್ತಿಗೆ ವರದರಾಜ್ ಚಿಕ್ಕಬಳ್ಳಾಪುರ ಅವರು ಮನಮುಟ್ಟುವ ಸಾಹಿತ್ಯ ರಚಿಸಿದ್ದು, ಗಾಯಕರಾದ ರಾಘವ್ ಕೌಶಿಕ್ ಮತ್ತು ರಕ್ಷಿತಾ ಸುರೇಶ್ ತಮ್ಮ ದೈವಿಕ ಕಂಠಸಿರಿಯಲ್ಲಿ ಹಾಡಿದ್ದಾರೆ. ಶ್ರೀರಾಮನ ಕರುಣೆ, ಅಭಯ, ರಕ್ಷಣೆ ಹಾಗೂ ಧರ್ಮನಿಷ್ಠೆಯನ್ನು ಬಣ್ಣಿಸುವ ಈ ಸಾಲುಗಳು, ಮತ್ತೆ ಮತ್ತೆ ಪುನರಾವರ್ತನೆಯಾಗುವ ‘ಜೈ ಜೈ ರಾಮ್’ ನಾಮಸ್ಮರಣೆಯ ಮೂಲಕ ಕೇಳುಗರ ಮನಸ್ಸಿನಲ್ಲಿ ಭಕ್ತಿರಸವನ್ನು ಸೃಷ್ಟಿಸುತ್ತವೆ.ಈ ವಿಶೇಷ ಗೀತೆಯ ಕುರಿತು ಮಾತನಾಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಶ್ರೀರಾಮನು ರಾಮಾಯಣದ ಹೃದಯಭಾಗವಾಗಿದ್ದು, ತಲೆಮಾರುಗಳಿಂದ ಪ್ರತಿಯೊಬ್ಬರ ಜೀವನದ ದಾರಿದೀಪವಾಗಿದ್ದಾನೆ ಎಂದಿದ್ದಾರೆ. ಕತ್ತಲೆಯ ಕ್ಷಣಗಳಲ್ಲಿ ಆತನ ಶಕ್ತಿ, ಗೊಂದಲದ ಸಮಯದಲ್ಲಿ ಆತನ ಧರ್ಮದ ಮಾರ್ಗ ಹಾಗೂ ಸಂತೋಷದ ಕ್ಷಣಗಳಲ್ಲಿ ಕೃತಜ್ಞತೆಯಿಂದ ಆತನನ್ನು ಸ್ಮರಿಸಲಾಗುತ್ತದೆ. `ಜೈ ಜೈ ರಾಮ್’ ಗೀತೆಯು ಪ್ರತಿಯೊಬ್ಬ ಭಾರತೀಯನು ಶ್ರೀರಾಮನೊಂದಿಗೆ ಹೊಂದಿರುವ ಅತ್ಯಂತ ವೈಯಕ್ತಿಕ ಮತ್ತು ಪವಿತ್ರ ಸಂಬAಧದ ಅಭಿವ್ಯಕ್ತಿಯಾಗಿದೆ ಎಂದು ಅವರು ಹಂಚಿಕೊಂಡಿದ್ದಾರೆ. ಮುಂದುವರಿದು ಮಾತನಾಡಿದ ಅವರು, ರಾಮಾಯಣವನ್ನು ಅತ್ಯಂತ ಬೃಹತ್ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದರೂ, ಅದರ ನಿಜವಾದ ತಳಹದಿ ಇರುವುದು ನಮ್ಮ ಭಾವನೆ, ಮೌಲ್ಯ ಮತ್ತು ಭಕ್ತಿಯಲ್ಲಿದೆ ಎಂದಿದ್ದಾರೆ. ಆದ್ದರಿಂದಲೇ ಸಿನಿಮಾದ ಮೊದಲ ಹಾಡು ಆ ಆತ್ಮವನ್ನು ಪ್ರತಿಬಿಂಬಿಸಬೇಕು ಎಂಬ ಉದ್ದೇಶದಿಂದ ರೂಪಿಸಲಾಗಿದೆ. ಶ್ರೀರಾಮ ಕೇವಲ ನಾವು ಪೂಜಿಸುವ ದೇವರಷ್ಟೇ ಅಲ್ಲ, ನಮ್ಮೊಳಗೆ ನಾವು ಕೊಂಡೊಯ್ಯುವ ಧೈರ್ಯ, ಮಾರ್ಗದರ್ಶಿ ಮತ್ತು ಶಕ್ತಿಯ ಮೂಲ ಎಂಬುದನ್ನು ಈ ಗೀತೆ ಪ್ರತಿಯೊಬ್ಬರಿಗೂ ನೆನಪಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮಾತನಾಡಿ, ಶ್ರೀರಾಮನ ಹೆಸರಿನ ಸರಳ ಮತ್ತು ಶಕ್ತಿಯುತ ಜಪವೇ ಈ ‘ಜೈ ಜೈ ರಾಮ್’ ಹಾಡಿನ ಜೀವಾಳವಾಗಿದೆ ಎಂದಿದ್ದಾರೆ. ಕಿವಿಗೆ ತಲುಪುವ ಪ್ರಾರ್ಥನೆಯ ಸಾತ್ವಿಕತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುತ್ತಲೇ, ಅದನ್ನು ವಿಶಾಲವಾದ ಸಿನಿಮಾ ಮಟ್ಟದ ಗೀತೆಯಾಗಿ ಬೆಳೆಸುವುದು ತಮ್ಮ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ. ಸಾಹಿತ್ಯದ ಭಕ್ತಿಭಾವಕ್ಕೆ ಗಾಯಕರು ತಮ್ಮ ಎಮೋಷನಲ್ ಗಾಯನದ ಮೂಲಕ ಜೀವ ತುಂಬಿದ್ದು, ದೈವಿಕ ಸಂಪರ್ಕ ನೀಡುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೋವಿಂದರಾಜನಗರ ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಪತ್ರಕರ್ತೆ ಪದ್ಮ ನಾಗರಾಜು ಕನ್ನಡ ಜಾನಪದ ಪರಿಷತ್ತಿನಿಂದ ಅಧಿಕೃತ ಆಹ್ವಾನಮತ್ತೆ 2 ಅರ್ಜಿ ಸಲ್ಲಿಸಿದ  ಆರೋಪಿ, ನಟ ದರ್ಶನ್ದೆಹಲಿಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಧರಣಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರಾಜಕೀಯ ಕೆಸರೆರಚಾಟರಾಜ್‌ಘಾಟ್‌ನಲ್ಲಿ ಗಾಂಧಿ ಸಮಾಧಿಗೆ ಪ್ರಧಾನಿ ಗೌರವಬಡ ಮಕ್ಕಳ ಶಿಕ್ಷಣಕ್ಕಾಗಿ ರೂ.30 ಕೋಟಿ ಮೌಲ್ಯದ 10 ಎಕರೆ ಭೂಮಿ ದಾನಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿನಗು-ಬದುಕಿನ ಮೌನ ಭಾಷೆ50 ಲಕ್ಷ ಮತದಾರರನ್ನು ಕೈಬಿಡುವ ಷಡ್ಯಂತ್ರದ ಆರೋಪ ಮಾಡಿರುವ ಸಿಎಂ ಡಿಕೆಶಿ ಅದನ್ನು ಸಾಬೀತು ಪಡಿಸಲಿ, ಇಲ್ಲವೇ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ ಆಗ್ರಹ