LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಜೆಜಿಎಲ್‍ಎಸ್ ವಿಶ್ವವಿದ್ಯಾಲಯ ಭಾರತದ ನಂ.1 ಕಾನೂನು ಶಿಕ್ಷಣ ಸಂಸ್ಥೆ

ಬೆಂಗಳೂರು: ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಸತತ 5ನೇ ವರ್ಷವೂ ಭಾರತದ ನಂ. 1 ಕಾನೂನು ಶಾಲೆಯಾಗಿದೆ. ಅಷ್ಟೇ ಅಲ್ಲ, ವಿಶ್ವದ ಪಟ್ಟಿಯಲ್ಲಿ 72 ನೇ ರ್ಯಾಂಕಿಂಗ್ ಅನ್ನೂ ಪಡೆದುಕೊಂಡಿದೆ. ಈ ಮೂಲಕ ವಿಶ್ವದ ಟಾಪ್-100 ರಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಕಾನೂನು ಶಾಲೆಯಾಗಿ ಹೊರಹೊಮ್ಮಿದೆ.

ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಕಳೆದ ವರ್ಷ 84 ನೇ ಶ್ರೇಯಾಂಕದಿಂದ ಈ ವರ್ಷ ವಿಶ್ವದಲ್ಲಿ 72 ನೇ ಸ್ಥಾನಕ್ಕೆ ಜಿಗಿದಿದೆ. ಅಂದರೆ, 12 ರ್ಯಾಂಕ್ ಸಾಧನೆ ಮಾಡಿದೆ! ಈ ವರ್ಷದ ರ್ಯಾಂಕಿಂಗ್‍ಗಳನ್ನು ರೂಪಿಸಲು, QS ಸುಮಾರು 5,000 ಸಂಸ್ಥೆಗಳ ಖ್ಯಾತಿ ಮತ್ತು ಸಂಶೋಧನೆಯನ್ನು ವಿಶ್ಲೇಷಿಸಿದೆ. ಈ ಗುಂಪಿನಿಂದ, 55 ವಿಷಯಗಳು ಮತ್ತು 5 ವಿಶಾಲ ವಿಷಯ ಕ್ಷೇತ್ರಗಳಲ್ಲಿ 19,100 ಎಂಟ್ರಿಗಳು ಬಂದಿದ್ದು.

ಇದರಲ್ಲಿ 1561 ಸಂಸ್ಥೆಗಳಿಗೆ ರ್ಯಾಂಕಿಂಗ್ ನೀಡಲಾಗಿದೆ. ಈ ಅಂಕಿಅಂಶಗಳು ಈ ವಿಷಯದ ಶ್ರೇಯಾಂಕಗಳನ್ನು ಉತ್ಪಾದಿಸುವ ಸಲುವಾಗಿ QS ಕೈಗೊಳ್ಳುವ ಬೃಹತ್ ಶ್ರಮದ ವ್ಯಾಪ್ತಿ ಕಂಡುಬರುತ್ತದೆ.ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಕುಲಪತಿಗಳಾದ ನವೀನ್ ಜಿಂದಾಲ್,JGLS ನ ಈ ಗಮನಾರ್ಹ ಸಾಧನೆಯ ಕುರಿತು ಮಾತನಾಡಿ ಪ್ರತಿಷ್ಠಿತ QS ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್‍ನಲ್ಲಿ JGLS ದೇಶದ ಉನ್ನತ ಕಾನೂನು ಶಾಲೆಯಾಗಿ ಕಾಣಿಸಿಕೊಂಡಿರುವುದು ಸ್ಥಿರತೆಯನ್ನು ಸೂಚಿಸುತ್ತದೆ.

JGLS ಸತತ ಐದು ವರ್ಷಗಳ ಕಾಲ ಭಾರತದಲ್ಲಿ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದೆ ಎಂಬ ಸಂಗತಿಯು ನನ್ನನ್ನು ರೋಮಾಂಚನಗೊಳಿಸಿದೆ. JGU ಅಧ್ಯಾಪಕರು ಮತ್ತು ಸಿಬ್ಬಂದಿಯ ಬದ್ಧತೆಯಿಂದಾಗಿ ಕಾನೂನು ಶಿಕ್ಷಣದ ಮಟ್ಟವನ್ನು ಹೆಚ್ಚಿಸುವ ನಮ್ಮ ಧ್ಯೇಯ ಪೂರೈಕೆಯಾಗಿದೆ ಎಂದಿದ್ದಾರೆ.
ಒ.ಪಿ. ಜಿಂದಾಲ್ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಉಪಕುಲಪತಿ ಪ್ರೊ . (ಡಾ.) ಸಿ. ರಾಜ್ ಕುಮಾರ್ ಮಾತನಾಡಿ, ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ((JGLS) ಸತತ ಐದು ವರ್ಷಗಳಿಂದ ಸಬ್ಜೆಕ್ಟ್ 2024 ವಿಭಾಗದಲ್ಲಿ QS ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್‍ಗಳಲ್ಲಿ ಭಾರತದಲ್ಲಿ ನಂ. 1 ಸ್ಥಾನದಲ್ಲಿದೆ ಎಂಬ ಸಂಗತಿಯನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಜಾಗತಿಕವಾಗಿ, JGLS  72 ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದಿದ್ದಾರೆ.

JGLS  ಜೊತೆಗೆ, ಭಾರತದ ಇತರ ಎರಡು ಕಾನೂನು ಶಾಲೆಗಳು ಈ ವರ್ಷ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅವುಗಳೆಂದರೆ: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU), ಬೆಂಗಳೂರು (151-200 ಶ್ರೇಯಾಂಕ), ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗ (201-250 ಶ್ರೇಯಾಂಕ).

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು