LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕುಪ್ಪಳ್ಳಿಯ ಕವಿಶೈಲದಲ್ಲಿ ಕನ್ನಡ ಡಿಂಡಿಮ ಕಾರ್ಯಕ್ರಮ

ಡಾ.ಗುಣವಂತ ಮಂಜು ಅಧ್ಯಕ್ಷತೆಯ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಾಷ್ಟ್ರಕವಿ ಕುವೆಂಪು ಸಾಹಿತ್ಯ ಸಾಂಸ್ಕೃತಿಕ ಪರಿಷತ್ತು ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳ ಕೊಪ್ಪಳ್ಳಿಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ 50 ಆಚರಣೆ ಮತ್ತು ಕನ್ನಡ ಡಿಂಡಿಮ ವಿಚಾರ ಸಂಕಿರಣವವನ್ನು ಏರ್ಪಡಿಸಲಾಗಿತ್ತು.

ಎರಡು ದಿನಗಳ ವಿಶೇಷ ಪ್ರವಾಸ ದಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ, ಸಕ್ರೇಬೈಲಿನ ಆನೆ ಬಿಡಾರದ ವೀಕ್ಷಣೆ ಮತ್ತು ಶೃಂಗೇರಿ ಶಾರದಾ ಮಾತೆಯ ದರ್ಶನಮಾಡಿ ನತರ ಕವಿಶೈಲದ ರಾಷ್ಟ್ರಕವಿ ಕುವೆಂಪುರವರ ಸಮಾಧಿಗೆ ಭೇಟಿ ನೀಡಿ ಗೌರವವನ್ನು ಸಲ್ಲಿಸಲಾಯಿತು.

ನಾಡಿನ ವಿವಿಧ ಕ್ಷೇತ್ರದ ಸಾಧಕ ಗಣ್ಯರಾದ, ಸಾಹಿತಿ ಶ್ರೀ ಸದಾಶಿವಯ್ಯ ಜರಗನಹಳ್ಳಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಜೋಗಿ, ಮೊಳಕಾಲ್ಮುರಿನ ಪ್ರಾಧ್ಯಾಪಕರಾದ ಡಾ.ತಿಮ್ಮಣ್ಣ, ಹೊಳೆನರಸೀಪುರದ ಚಿತ್ರ ಕಲಾವಿದರಾದ ಶ್ರೀ. ಚಂದ್ರಶೇಖರ್, ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಡಾ. ಪುಷ್ಪ ಗೌಡ, ನಂಜನಗೂಡಿನ ಸಮಾಜ ಸೇವಕಿ ಡಾ. ಸರಸ್ವತಿ ಚಂದ್ರಶೇಖರ್ ರಾವ್, ಹಳ್ಳಿ ಮೈಸೂರಿನ ಸಮಾಜ ಸೇವಕರಾದ ಡಾ. ಹೆಚ್.ಸಿ.ಪ್ರಕಾಶ್,

ಕಾಮದೇನು ಹಂಸ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಜಿ. ಜಯರಾಮ,ಅಮೃತ ಮಡಿಲು ಟ್ರಸ್ಟ್ ಸಂಸ್ಥಾಪಕರಾದ ಡಾ. ಮಹೇಶ್ ವಿ.ಎನ್, ಸಮಾಜ ಸೇವಕ ಶ್ರೀ. ರಾಮ್ ಮೋಹನ್. ಮುಂತಾದವರಿಗೆ ರಾಷ್ಟ್ರಕವಿ ಕುವೆಂಪು ಸದ್ಭಾವನ ರಾಜ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ "ನಾ ಕಂಡ ನೇಪಾಳ" "ಕನ್ನಡ ರತ್ನ" ಮತ್ತು ಕರುನಾಡ ಜನಸೇವೆ ಸಮಿತಿಯ ಕ್ಯಾಲೆಂಡರನ್ನು ಲೋಕಾರ್ಪಣೆ ಗೊಳಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಡಾ. ಗುಣವಂತ ಮಂಜು ರವರ ಮಾತನಾಡಿ, ಜಗದಕವಿ, ಯುಗದಕವಿ, ರಾಷ್ಟ್ರಕವಿ ಕುವೆಂಪು ರವರು ನಡೆದಾಡಿದ, ಕಾವ್ಯಕಟ್ಟಿದ, ಪುಣ್ಯಭೂಮಿಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬಹಳ ಹೆಮ್ಮೆ ಎನಿಸುತ್ತಿದೆ ವಿಶ್ವಮಾನವ ಸಂದೇಶ ನೀಡಿದ ಮಹಾ ಕವಿಯ ಆದರ್ಶಗಳು ಎಲ್ಲರ ಬದುಕಿನ ದಾರಿದೀಪವಾಗಲಿ ಎಂದು ಆಶಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು