LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕನ್ನಡ ರತ್ನ ಕೃತಿ ಬಿಡುಗಡೆ ಮತ್ತು ಸಂಕ್ರಾಂತಿ ಕವಿಗೋಷ್ಠಿ

ಬೆಂಗಳೂರು: ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ಆಯೋಜಿಸಿದ್ದ "ಸಂಕ್ರಾಂತಿ ಸಂಭ್ರಮ" ಮತ್ತು " ಕರ್ನಾಟಕ ಸುವರ್ಣ ಸಂಭ್ರಮ" ಕುರಿತಾದ ಕವಿಗೋಷ್ಠಿ, ಶಾಂತಿನಗರದ ಡಾ.ಪುನೀತ್ ರಾಜಕುಮಾರ್ ಕನ್ನಡ ಭವನದಲ್ಲಿ ನಡೆಯಿತು.

ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟು ಎನ್ನುವ ನಾಣ್ಣುಡಿಯಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು ತಮ್ಮ ಕವನದ ಸಾಲುಗಳಲ್ಲಿ ನಾಡಿನ ಕುರಿತಾದ ವೈಭವವನ್ನು ವಿಭಿನ್ನವಾಗಿ ತೆರೆದಿಟ್ಟರು.ಡಾ.ಗುಣವಂತ ಮಂಜು ಅವರು ಶಾಲಾ ಮತ್ತು ಕಾಲೇಜು ಮಕ್ಕಳಿಗೆ ಉಚಿತವಾಗಿ ಹಂಚಲು ಬರೆದಿರುವ "ಕನ್ನಡ ರತ್ನ" ಕೃತಿಯನ್ನುಕರ್ನಾಟಕ ವಿಕಾಸ ರಂಗದ ಅಧ್ಯಕ್ಷರಾದ ಶ್ರೀ ವ.ಚ. ಚನ್ನೇಗೌಡ ರವರು ಬಿಡುಗಡೆಗೊಳಿಸಿದರು. ಮತ್ತು ಕರ್ನಾಟಕ ಸುವರ್ಣ ಸಂಭ್ರಮ 50 ಕುರಿತಾಗಿ ಉಪನ್ಯಾಸ ನೀಡಿದರು.

2024ರ ಕರುನಾಡು ಸೇವಾ ಸಮಿತಿಯ ಪಾಕೆಟ್ ಕ್ಯಾಲೆಂಡರನ್ನು ಡಾ. ಗುಣವಂತ ಮಂಜು ಬಿಡುಗಡೆಗೊಳಿಸಿದರು. ಸಂಕ್ರಾಂತಿ ಸುಗ್ಗಿ ಕುರಿತಾಗಿ ಡಾ. ಮಹೇಂದ್ರನಾಥ ಶರ್ಮ ಗುರೂಜಿ ರವರು ಉಪನ್ಯಾಸ ನೀಡಿದರು. ದಾಸೋಹದ ವ್ಯವಸ್ಥೆಯನ್ನು ಡಾ. ಕೆ. ಆರ್. ವೆಂಕಟೇಶ್ ಗೌಡ ರವರು ಆಯೋಜಿಸಿದ್ದರು.

ಉದ್ಘಾಟನೆಯನ್ನು ವಕೀಲರಾದ ಎಸ್. ಎಸ್ ಪಾಟೀಲ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ತಹಸಿಲ್ದಾರ್ ಹಾಗೂ ಹಿರಿಯ ಕಲಾವಿದರಾದಡಾ. ಎ.ಪಿ ರಾಮಕೃಷ್ಣ, ವಕೀಲರು ಹಾಗೂ ಸಮಾಜಸೇವಕರಾದ ಡಾ. ಸಾಯಿಸುಮನ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಡಾ. ಎನ್ ಆರ್ ಮಂಜುನಾಥ್. ಯುವ ಕವಿಯತ್ರಿ ಹಾಗೂ ಬರಹಗಾರ್ತಿ ಶ್ರೀಮತಿ ಮಂಜು ಪಾವಗಡ ಭಾಗಿಯಾಗಿದ್ದರು.
ಎಳ್ಳು ಬೆಲ್ಲ ಹಂಚುವ ಮೂಲಕ ಆರಂಭವಾದ ಗೋಷ್ಠಿ ಬಹಳ ಅರ್ಥಪೂರ್ಣವಾಗಿತ್ತು.

ಶ್ರೀಯುತ ಯೋಗೇಶ್. ಎಂ ರವರ ಸಹಕಾರದೊಂದಿಗೆ ಸ್ವಾವಲಂಬಿ ಬದುಕಿನ ದಾರಿಗಾಗಿ ಶ್ರೀಮತಿ ಶುಭ ರವರಿಗೆ ಟೈಲರಿಂಗ್ ಮಿಷನ್ ಕೊಂಡುಕೊಳ್ಳಲು ಧನ ಸಹಾಯ ಮಾಡಲಾಯಿತು. ಅನೇಕ ವಿಷಯಗಳ ಸಂಗಮವಾಗಿ ಸಂಕ್ರಾಂತಿ ಶುಭಾಶಯಗಳೊಂದಿಗೆ ನಾಡಿನ ಜನತೆಗೆ ಸಹ ಬಾಳ್ವೆಯ ಸಂದೇಶವನ್ನು ನೀಡಲಾಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು