LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಯೋಗಕ್ಕೆ ಕರ್ನಾಟಕದ  ಕೊಡುಗೆ ಅಪಾರ

ಪ್ರಶಾಂತಿ ಕುಟೀರದ 50ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ಅಭಿಮತ


ಬೆಂಗಳೂರು: ಕರ್ನಾಟಕವು ಹಲವು ದಶಕಗಳಿಂದ ಯೋಗ ಕೇಂದ್ರವಾಗಿದ್ದು, ಇಲ್ಲಿನ ಅನೇಕರು ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಪ್ರಶಾಂತಿ ಕುಟೀರದ 50ನೇ ವರ್ಷದ ಸಂಭ್ರಮಾಚರಣೆ ಮತ್ತು ಚಿಂ ಸಂಘಟಕರಾಗಿದ್ದ ಹೊಂಗಸAದ್ರ ವೆಂಕಟರಾಮಯ್ಯ ಶೇಷಾದ್ರಿ  ಅವರ ಜನ್ಮ ಶತಮಾನೋತ್ಸವವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಯೋಗದ ಮಹತ್ವದ ಬಗ್ಗೆ ವಿವರಣೆ ವೇಳೆ ವರನಟ ಡಾ.ರಾಜ್‌ಕುಮಾರ್ ಅವರನ್ನೂ ಪ್ರಧಾನಿ ಸ್ಮರಿಸಿದ್ದಾರೆ. ಹೆಚ್.ವಿ.ಶೇಷಾದ್ರಿಯವರು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದರು. ಆರ್‌ಎಸ್‌ಎಸ್‌ನಲ್ಲಿ ಇದ್ದುಕೊಂಡು ಅನೇಕರಿಗೆ ಮಾರ್ಗದರ್ಶಕರಾಗಿದ್ದರು ಎಂದವರು ತಿಳಿಸಿದ್ದಾರೆ.ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರನ್ನೂ ಉದಾಹರಿಸಿದ ಪ್ರಧಾನಿ ಮೋದಿ, ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಯೋಗಕ್ಕೆ ಕೊಡುಗೆ ನೀಡಿದ ಅನೇಕ ಮಹನೀಯರು ನಮ್ಮಲ್ಲಿದ್ದಾರೆ ಎಂದರು. ಪ್ರಶಾಂತಿ ಕುಟೀರಂನ 50 ವರ್ಷಗಳ ಪಯಣವು ಸೇವೆ ಮತ್ತು ಸಮರ್ಪಣೆಯ ಕಥೆಯಾಗಿದೆ. ಪ್ರತಿಯೊಬ್ಬ ಭಾರತೀಯನೂ ಈ ಬಗ್ಗೆ ತಿಳಿದುಕೊಳ್ಳಬೇಕು. ಒಂದು ಸರಳ ಯೋಗ ಕೇಂದ್ರವು ಇಷ್ಟು ದೊಡ್ಡ ಆಂದೋಲನವಾಗಿ ಬೆಳೆದಿರುವುದು ಸ್ವತಃ ಸ್ಫೂರ್ತಿದಾಯಕ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಹೆಚ್.ವಿ. ಶೇಷಾದ್ರಿ ಅವರನ್ನು ನೆನಪಿಸಿಕೊಂಡಾಗ ಮೊದಲು ನೆನಪಾಗುವುದು ಅವರ ಸರಳ ಸ್ವಭಾವ. ದೊಡ್ಡ ವ್ಯಕ್ತಿತ್ವ ಮತ್ತು ಅಪಾರ ಅನುಭವ ಹೊಂದಿದ್ದರೂ ಅವರ ನಡೆನುಡಿಯಲ್ಲಿ ವಿನಯವಿತ್ತು. ತಾವು ಹಿಂದೆಯೇ ಉಳಿದು ಇತರರನ್ನು ಮುಂದೆ ತರುವುದು, ಜನರನ್ನು ಒಗ್ಗೂಡಿಸಿ ದೇಶಕ್ಕಾಗಿ ಅವರನ್ನು ಸಿದ್ಧಪಡಿಸುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು. ಇದು ಅವರ ಜೀವನದ ಪ್ರಮುಖ ಕಾರ್ಯವಾಗಿತ್ತು ಎಂದು ಮೋದಿ ಸ್ಮರಿಸಿದ್ದಾರೆ. ಮಗುವಿನ ಆರೈಕೆಗಾಗಿ ತಾಯಿ ಇಡೀ ರಾತ್ರಿ ನಿದ್ರಿಸದೆ ಮಗುವಿನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ. ಯಾವುದೇ ಸ್ವಾರ್ಥವಿಲ್ಲದೆ ದುಡಿಯುತ್ತಾಳೆ. ಇದೇ ಭಾವನೆಯನ್ನು ಸಮಾಜದ ಕಡೆಗೂ ವಿಸ್ತರಿಸಿದರೆ ಸಮಾಜಕ್ಕೆ ಅಪಾರ ಒಳಿತಾಗುತ್ತದೆ ಎಂದು ಶೇಷಾದ್ರಿ ಅವರು ಆಗಾಗ್ಗೆ ಉದಾಹರಣೆ ನೀಡುತ್ತಿದ್ದರು ಎಂದಿದ್ದಾರೆ. ಹೆಚ್.ವಿ. ಶೇಷಾದ್ರಿ ಅವರ ಪ್ರೀತಿ ಮತ್ತು ಮಾರ್ಗದರ್ಶನವನ್ನು ಹಲವು ವರ್ಷಗಳ ಕಾಲ ತಾವು ಪಡೆದಿದ್ದಾಗಿ ತಿಳಿಸಿದ ಪ್ರಧಾನಿ ಮೋದಿ, ಅವರೊಂದಿಗೆ ಕಳೆದ ಕ್ಷಣಗಳು ಮತ್ತು ಅವರು ಹೇಳುತ್ತಿದ್ದ ಮಾತುಗಳು ಇಂದಿಗೂ ತಮ್ಮ ಪಾಲಿಗೆ ಅಮೂಲ್ಯ ನೆನಪು ಎಂದು ತಿಳಿಸಿದ್ದಾರೆ.ನಾವು ಸಮಾಜಕ್ಕೆ ಎರಡೂ ಕೈಗಳಿಂದ ಕೊಟ್ಟರೆ, ಸಮಾಜ ಲಕ್ಷಾಂತರ ಕೈಗಳಿಂದ ನಮಗೆ ಮರಳಿ ನೀಡುತ್ತದೆ ಎಂದು ಶೇಷಾದ್ರಿ ಅವರು ಹೇಳುತ್ತಿದ್ದರು. ತಮ್ಮ ಜೀವನದಲ್ಲಿ ಈ ಮಾತು ಹಲವು ಬಾರಿ ನಿಜವಾಗಿರುವುದನ್ನು ಕಂಡಿದ್ದೇನೆ. ಜನರ ಸೇವೆ ಮಾಡುವಾಗಲೆಲ್ಲ ಅವರ ಆಶೀರ್ವಾದ ದೊರೆತಿದೆ. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST