LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಕಂದೀಲು ತಂಡದಿಂದ ಕೌಮುದಿ ಚಿತ್ರ

ಕಂದೀಲು ಚಿತ್ರಕ್ಕೆ ಹಲವು ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು ಸಿನಿಮಾ ಸದ್ಯದಲ್ಲೆ ಬಿಡುಗಡೆಯಾಗಲಿದೆ.ಈಗ ಇದೇ ತಂಡದಿಂದ ನಾಗೇಶ್.ಎನ್ ಕಥೆಯನ್ನು ಆಧರಿಸಿರುವ ಕೌಮುದಿ ಚಿತ್ರಸೆಟ್ಟೇರಿದೆ.ದಿಂಬದಹಳ್ಳಿಯಲ್ಲಿರುವ ಬಿಸಲಮ್ಮ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಆಚರಿಸಿಕೊಂಡಿತು.

ದೊಡ್ಡ ಮುದುವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿವ್ಯ.ಎಸ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.ಬ್ಲೈಂಡ್ ಬಿಲೀಫ್ ಎಂಬ ಅಡಿಬರಹವು ಇಂಗ್ಲೀಷ್‍ನಲ್ಲಿ ಇರಲಿದೆ. ಸ್ವಸ್ಕಿಕ್ ಎಂಟರ್‍ಟೈನ್‍ಮೆಂಟ್ ಅಡಿಯಲ್ಲಿ ಯಶೋದ ಪ್ರಕಾಶ್ ಕೊಟ್ಟುಕತ್ತೀರ ಬಂಡವಾಳ ಹೂಡುವುದರ ಜತೆಗೆ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. ನಿರ್ಮಾಣ ನಿರ್ವಹಣೆ ಮತ್ತು ಛಾಯಾಗ್ರಹಣ ಜವಾ ಬ್ದಾರಿಯನ್ನು ಪಿ.ವಿ.ಆರ್.ಸ್ವಾಮಿ ಗೂಗಾರೆದೊಡ್ಡಿ ವಹಿಸಿಕೊಂಡಿದ್ದಾರೆ.

ಶಿಕ್ಷಣ ಹಾಗೂ ವೈಜ್ಘಾನಿಕ ಕೊರತೆಯಿಂದಾಗಿ ಮೂಲನಂಬಿಕೆ, ಮೂಡನಂಬಿಕೆಯ ವ್ಯತ್ಯಾಸ ತಿಳಿಯದೆ ಬದುಕಿಗೆ ಅಪಾಯ ತಂದೊಡ್ಡುವ ಸಂಪ್ರದಾಯ, ಆಚರಣೆಗಳ ಸತ್ಯ-ವಾಸ್ತವಗಳ ಸುತ್ತ ಸಿನಿಮಾವು ಬೆಳಕು ಚೆಲ್ಲಲಿದೆ. ಗತಕಾಲದಿಂದ ಇಂದಿನವರೆಗೂ ಗ್ರಾಮೀಣ ಭಾಗದಲ್ಲಿ ಇಂತಹ ಪದ್ದತಿಗಳನ್ನು ಅನುಸರಿಸುತ್ತಿದ್ದಾರೆ. ಕಥಾನಾಯಕಿ ಇದರ ವಿರುದ್ದ ಧ್ವನಿ ಎತ್ತಿ, ಯಾವ ರೀತಿ ಹೋರಾಟ ಮಾಡುತ್ತಾಳೆ ಎಂಬುದನ್ನು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಪಿಂಕಿ ಎಲ್ಲಿ ಮತ್ತು ಕೋಳಿಎಸ್ರು ಚಿತ್ರಗಳ ಖ್ಯಾತಿಯ ಅಕ್ಷತಾ ಪಾಂಡವಪುರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಕುಮಾರಿ ದೀಪಿಕಾ, ಪ್ರತೀಕ, ಅಂಕಿತಾಮೂರ್ತಿ ಉಳಿದಂತೆ ನೀನಾಸಂ ನಟರಾಜ್, ಕಾವೇರಿಶ್ರೀಧರ್, ಪಿ.ಬಿ.ರಾಜುನಾಯಕ, ರೋಹಿಣಿ, ತಾರಾ ರಘು, ಬಂಗಾರಶೆಟ್ಟಿ ಮುಂತಾದವರು ಅಭಿನಯಿಸುತ್ತಿದ್ದಾರೆ.ಸಂಗೀತ ಶ್ರೀಸುರೇಶ್, ಸಂಭಾಷಣೆ, ಸಂಕಲನ ನಾಗೇಶ್.ಎನ್, ಚಿತ್ರಕಥೆ ನಾಗೇಶ್.ಎನ್,ಹರೀಶ್.ಎಸ್ ಅವರದಾಗಿದೆ. ದಿಂಬಹಳ್ಳಿ, ಬಾಚಹಳ್ಳಿ ದೊಡ್ಡಿ ಹಾಗೂ ಕನಕಪುರ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಸಿಂಕ್ ಸೌಂಡ್‍ದಲ್ಲಿ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು