LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಖಿದ್ಮಾ ಫೌಂಡೇಶನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ

ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ ಭಾನುವಾರ ಬೆಂಗಳೂರಿನ ಜಯನಗರ ವಿಜಯ ಕಾಲೇಜಿನ ಹಸಿರು ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ವಿಜಯ ಕಾಲೇಜು ಪ್ರಾಂಶುಪಾಲರಾದ  ಪ್ರೊ .ಡಿ. ಆರ್ ಸುಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀ ಯೂಸಫ್ ಹೆಚ್.ಬಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು, ಶ್ರೀಮತಿ ಅಶ್ವಿನಿ ಎಸ್ ಅಂಗಡಿ ಕವಿಗೋಷ್ಠಿಯ ಅಧ್ಯಕ್ಷತೆ ಮತ್ತು ಡಾ. ಬಿ. ಎನ್ ಸುರೇಶ್ ಬಾಬು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಕವಿಗಳು ಸ್ವರಚಿತ ಕವನವನ್ನು ವಾಚನ ಮಾಡಿದರು.

ಕರ್ನಾಟಕ ಸುವರ್ಣ ಮಹೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತರಷ್ಟು ಸಾಧಕರಿಗೆ ಖಿದ್ಮಾ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ವಿಜಯ ಕಾಲೇಜು ಉಪ ಪ್ರಾಂಶುಪಾಲರಾದ ಪ್ರೊ.ಎಲ್.ಕೆ. ಶ್ರೀವತ್ಸ, ಖಿದ್ಮಾ ಅಧ್ಯಕ್ಷ ಹಾಶಿಂ ಬನ್ನೂರು, ಶ್ರೀಮತಿ ಕಮಲಾಕ್ಷಿ ಸುರೇಶ್ ಕೌಜಲಗಿ, ಹುಮಾಯೂನ್, ಡಾ. ಆರ್ ಎಸ್ ರವೀಂದ್ರ, ಕೆ.ಶ್ರೀಧರ್ (ಕೆ.ಸಿರಿ), ಡಾ.ಎಮ್.ಎಮ್.ಪೀರಜಾದೆ, ಉಮೇಶ್ ಸಿ. ಎನ್, ಡಾ.ಗಣೇಶ್ ಗಂಗೊಳ್ಳಿ, ವಿನಯ್ ಖಾನ್, ಡಾ ಜುಬೇದಾ ಎಂ ಬದಾಮಿ, ಡಾ. ಜ್ಯೋತಿ ಶ್ರೀನಿವಾಸ್, ಸಿನಾನ್ ಇದ್ದಬೆಟ್ಟು, ರಾಧಾಮಣಿ ಎಂ ಕೋಲಾರ, ಉದಯ್ ಕಿರಣ್ ಬಿ, ಕಿರಣ್ ಕೆ. ಸಂತೋಷ್ ಕುಮಾರ್, ಪೂಜಾ ಸಿ.ಐ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಸ್ವಾಗತಿಸಿ, ರಶ್ಮಿತಾ ಸುರೇಶ್ ಜೋಗಿಬೆಟ್ಟು ನಿರೂಪಿಸಿದರು. ಕಾರ್ಯಕ್ರಮದ ಆಯೋಜಕ ಹಾಗೂ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ವಂದಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು