LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನಗರದಲ್ಲಿ ಪೊಲೀಸರ ಕೊರತೆ ಜನಸಂಖ್ಯೆ-ಪೊಲೀಸ್ ಅನುಪಾತದಲ್ಲಿ ಭಾರಿ ಅಂತರ

ಬೆಂಗಳೂರು: ನಗರದಲ್ಲಿ ಅಪರಾಧ ಕೃತ್ಯಗಳ ಹೆಚ್ಚಳ, ಜನ ಸಂಖ್ಯೆ ಹೆಚ್ಚಳದಂಥ ಸಮಸ್ಯೆಗಳಿದ್ದರೆ ಮತ್ತೊಂದೆಡೆ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದಿರುವುದು ಕೂಡ ತಿಳಿದುಬಂದಿದೆ.

ನಗರದ ಜನಸಂಖ್ಯೆ ಮತ್ತು ಪೊಲೀಸ್ ಸಿಬ್ಬಂದಿಯ ಅನುಪಾತದಲ್ಲಿ ಭಾರಿ ಅಂತರ ಇದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ 1,825 ಪೆÇಲೀಸ್ ಕಾನ್ಸ್‍ಟೇಬಲ್‍ಗಳು (ಪಿಸಿಗಳು) ಮತ್ತು 347 ಪೊಲೀಸ್ ಸಬ್‍ಇನ್‍ಸ್ಪೆಕ್ಟರ್‍ಗಳು (ಪಿಎಸ್‍ಐಗಳು) ಸೇರಿದಂತೆ 3,814 ಹುದ್ದೆಗಳು ಖಾಲಿ ಇವೆ. ಈ ಕೊರತೆಯು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿವಿಧ ಸವಾಲುಗಳಿಗೆ ಕಾರಣವಾಗಿದೆ.

ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್ (ಬಿಪಿಆರ್ ಆಂಡ್ ಡಿ) ಪ್ರಕಾರ, ಪ್ರತಿ 1 ಲಕ್ಷ ಜನಸಂಖ್ಯೆಗೆ 170 ಸಿವಿಲ್ ಪೊಲೀಸರ ಅಗತ್ಯವಿದೆ.ಬೆಂಗಳೂರಿನ ಪ್ರಸ್ತುತ 1.4 ದಶಲಕ್ಷ ಜನಸಂಖ್ಯೆಗೆ ಈಗ ಮಂಜೂರಾದ ಪೊಲೀಸ್ ಬಲವೂ ಸಾಕಾಗುವುದಿಲ್ಲ. ಸದ್ಯ ನಗರಕ್ಕೆ 21,720 ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಆದರೆ ರಾಜ್ಯದ ರಾಜಧಾನಿಯಲ್ಲಿ ಈಗ 15,475 ಪೊಲೀಸರು ಮತ್ತು ಅಧಿಕಾರಿಗಳಷ್ಟೇ ಇದ್ದಾರೆ.

ಇದರಲ್ಲಿ ಡಿಸಿಪಿಗಳು, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಮತ್ತು ವಿಶೇಷ ಪಡೆಗಳ ಎಸಿಪಿಗಳು ಸೇರಿದ್ದಾರೆ. ಇದು ಈಗಿರುವ ಸಿಬ್ಬಂದಿ ಸಾಮಥ್ರ್ಯ ಮತ್ತು ಅಗತ್ಯವುಳ್ಳ ಸಿಬ್ಬಂದಿಯ ನಡುವಿನ ಗಣನೀಯ ಅಂತರವನ್ನು ಬಹಿರಂಗಪಡಿಸಿದೆ.ಅಪರಾಧ, ಜನಸಂಖ್ಯೆ, ಕೈಗಾರಿಕಾ ಮತ್ತು ವಿದ್ಯಾರ್ಥಿಗಳ ಚಟುವಟಿಕೆಗಳು ಮತ್ತು ವಾಹನ ದಟ್ಟಣೆ ಪ್ರತಿದಿನ ಹೆಚ್ಚುತ್ತಿರುವ ಕಾರಣ ಮಂಜೂರಾದ ಪೊಲೀಸ್ ಬಲವನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಸರ್ಕಾರಕ್ಕೆ ಅನೇಕ ಪ್ರಸ್ತಾವನೆಗಳನ್ನು ಕಳುಹಿಸಿರಬೇಕು.

ಎಲ್ಲ ಕ್ಷೇತ್ರಗಳಲ್ಲಿ ನಗರದ ಬೆಳವಣಿಗೆಗೂ ಪೊಲೀಸ್ ಇಲಾಖೆಯ ಬೆಳವಣಿಗೆಗೂ ತಾಳೆಯಾಗುತ್ತಿಲ್ಲ. ಬಜೆಟ್ ನಿರ್ಬಂಧಗಳಿಂದಾಗಿ ಪೊಲೀಸ್ ಬಲವನ್ನು ಹೆಚ್ಚಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಸಿಬ್ಬಂದಿಯ ಕೊರತೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು