LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಇದೀಗ ಐತಿಹಾಸಿಕ ಪಾತ್ರದಲ್ಲಿ ನೆನಪಿರಲಿ ಪ್ರೇಮ್

ತನ್ನ ಸ್ವಂತ ಪರಿಶ್ರಮದಿಂದ ವೈವಿಧ್ಯಮಯ'" ಫೀಲ್ ಗುಡ್ " ಸಿನಿಮಾಗಳ (ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕ್ಕಿ, ಚಾರ್ ಮಿನಾರ್, ಮಳೆ)ಮೂಲಕ ಕನ್ನಡ ಚಿತ್ರರಂಗ ದ ಒಟ್ಟು ಇತಿಹಾಸ ದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಯಶಸ್ಸಿನ ಮೈಲುಗಲ್ಲು ನೆಟ್ಟಿರುವ ಕನ್ನಡ ದ ಪ್ರಸಿದ್ಧ ಪ್ರತಿಭಾವಂತ ಲವ್ಲಿ ಸ್ಟಾರ್ ಪ್ರೇಮ್ ಇದೇ ಮೊದಲಬಾರಿಗೆ ಐತಿಹಾಸಿಕ ಸಿನಿಮಾವೊಂದರಲ್ಲಿ ನಾಯಕ ನಟನಾಗಿ ಕಾಣಿಸಿ ಕೊಳ್ಳುವ ಮೂಲಕ ಕೆರಿಯರ್ ನ್ನು ಹೊಸತೊಂದು ಮಜಲಿಗೆ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾರೆ.
2023ರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದ್ದ, ಪರಿಸರ ಕಾಳಜಿಯ ಜಲಪಾತ ಸಿನಿಮಾ ನಿರ್ಮಿಸಿದ ಶ್ರೀ ಬ್ಯಾನರ್ ನ ಅಡಿಯಲ್ಲಿ, ಅದೇ ತಂಡ ಚಿತ್ರಿಸುತ್ತಿರುವ ಈ ಹೊಸ ಸಿನಿಮಾ ದಲ್ಲೂ ಪರಿಸರ ಅರಿವಿನ ವಿಚಾರಗಳಿದ್ದರೂ ಇದೇ ಮೊದಲಬಾರಿಗೆ ಐತಿಹಾಸಿಕ ಹಿನ್ನೆಲೆಯ ಕಥೆ ಹೊಂದಿರುವುದು ಮತ್ತು ಪೂರ್ತಿ ಮಾಸ್ ಶೈಲಿಯಲ್ಲಿರುವುದು ವಿಶೇಷವಾಗಿದೆ.
ಇತಿಹಾಸ ಮತ್ತು ವರ್ತಮಾನಕ್ಕೆ ಕೊಂಡಿ ಬೆಸೆಯುತ್ತಾ ವಿಭಿನ್ನವಾಗಿ ಸಾಗುವ ಈ ಚಿತ್ರ, ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿಯನ್ನು ಆಧರಿಸಿದೆ.
ಪ್ರೇಮ್ ಅವರ ಜನುಮದಿನಕ್ಕೆ ಅವರ ಪಾತ್ರದ ನೋಟವನ್ನು ಹೊಂದಿದ ಬರ್ತೆ್ಡÃ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ಪೂರ್ತಿ ಮಾಸ್ ಲುಕ್ ನಲ್ಲಿ ಇರುವ, ತೀವ್ರ ಹರಿತ ನೋಟದಲ್ಲಿ ಇರುವ ಪ್ರೇಮ್ ಕಾಣಸಿಗುತ್ತಾರೆ. ಕೈಯಲ್ಲಿ ಹೊಳೆವ ಮುದ್ರೆಯುಂಗುರ ಮತ್ತು ಹಿರಿದ ಕತ್ತಿ ಅವರ ಕಣ್ಣ ನೋಟಕ್ಕೆ ಮತ್ತಷ್ಟು ಹೊಳಪು ನೀಡಿದೆ. ಹಣೆಯಲ್ಲಿ ಕಂಡೂ ಕಾಣದಂತೆ ಹರಡಿದ ಮುಂಗುರುಳು ಗಾಳಿಯಲ್ಲಿ ಹಾರುತ್ತಾ ಇಡೀ ನಿಲುವಿಗೆ ಮಾಸ್ ಲುಕ್ ನೀಡಿದೆ. ಇತಿಹಾಸ ಪುರುಷರ ಪರಂಪರೆ ಬಿಂಬಿಸುವ ಹೊಳೆವ ತ್ರಿಪುಂಡ್ರ, ಕೇಶ ವಿನ್ಯಾಸ, ಟ್ರೆಂಡಿ ಗಡ್ಡ ಪ್ರೇಮ್ ಅವರನ್ನು ಬೇರೆಯದೆ ಒಂದು ಅವತಾರದಲ್ಲಿ ಕಾಣಿಸುತ್ತಿದೆ. ಶೃಂಗೇರಿ ಯ ಪ್ರಸಿದ್ಧ ರಂಗಕರ್ಮಿ, ಯಕ್ಷಗಾನ, ಕಿರುತೆರೆ, ಜಾನಪದ, ಹಿರಿತೆರೆಗಳಂಥ ಬಹು ಮಾಧ್ಯಮದಲ್ಲಿ ತೊಡಗಿಕೊಂಡಿರುವ ರಮೇಶ್ ಬೇಗಾರ್ ಬರವಣಿಗೆ ಜೊತೆಗೆ ಈ ಸಿನಿಮಾ ನಿರ್ದೇಶಿಸಿದ್ದಾರೆ.
ಈಗಾಗಲೇ ಈ ಸಿನಿಮಾ ದ ಪ್ರೇಮ್ ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಕನ್ನಡದಲ್ಲಿ ಇರುವ ಐತಿಹಾಸಿಕ ಸಿನಿಮಾ ದ ಕೊರತೆಯನ್ನು ಮೀರುವ ಸ್ಪಷ್ಟ ಲಕ್ಷಣವಿರುವ ಈ ಚಿತ್ರದ ಪೂರ್ತಿವಿವರ ಮತ್ತು ಶೀರ್ಷಿಕೆಯನ್ನು ಒಂದು ಟೀಸರ್ ಮೂಲಕ ಹಂಚಿಕೊಳ್ಳಲಾಗುವುದು ಎಂದು ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದ್ದಾರೆ.
ಒಟ್ಟಾರೆ ಜನ್ಮದಿನದ ಸಡಗರ ಕ್ಕೆ ಬಿಡುಗಡೆ ಗೊಂಡಿರುವ ಫಸ್ಟ್ ಲುಕ್ ಪೋಸ್ಟರ್ " ನೆನಪಿರಲಿ ಪ್ರೇಮ್ ಅವರ ನೆನಪಿಡುವ ಪಾತ್ರ " ವೊಂದು ವಿಜೃಂಭಿ ಸುವುದಕ್ಕೆ ತೆರೆ ಮರೆಯಲ್ಲಿ ಸಿದ್ದತೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು