LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"ನಿಷಿದ್ಧ ಪಾಲಿಸಿದರೆ ಬದುಕು ಸುಖಮಯ"

ಹೊಸ ಪ್ರತಿಭೆಗಳ ನಿಷಿದ್ಧ ಚಿತ್ರವು ತೆರೆಗೆ ಬರಲು ಅಣಿಯಾಗಿದೆ. ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಶ್ರೀ ಅಂಜನಿ ತನಯ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೂರ್ಗ್ ಮೂಲದ ಉದ್ಯಮಿ ಸಿ.ಬಿ.ಬೋಪಯ್ಯ (ಜಗನ್) ಬಂಡವಾಳ ಹೂಡಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಸುಸಮಯ ದಿನೇಶ್ ಬರವಣಿಗೆ ಮತ್ತು ಆಕ್ಷನ್ ಕಟ್ ಹೇಳಿದ್ದಾರೆ. ನಾಯಕ ಅಂಜನ್‌ತಮ್ಮಯ್ಯನನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಯುವತಿಯರಾಗಿ ಶ್ವೇತಾಪೂಜಾರಿ ಮತ್ತು ಶೃತಿರಮೇಶ್ ನಟಿಸಿದ್ದಾರೆ. ಹೀರೋಗೆ ಮಾರ್ಗದರ್ಶನ ನೀಡುವ ಪಾತ್ರದಲ್ಲಿ ಶಿವಕುಮಾರ್ ಆರಾಧ್ಯ. ಇವರೊಂದಿಗೆ ದಿನೇಶ್.ಹೆಚ್.ಸಿ, ಲಾಲುಸಾಬ್, ಮಂಜುನಾಥ್ ಮುAತಾದವರು ಬಣ್ಣ ಹಚ್ಚಿದ್ದಾರೆ. ಸಂಗೀತ ಮನುರಾಜ್, ಛಾಯಾಗ್ರಹಣ ನಿರಂಜನ್ ಬೋಪಣ್ಣ, ಸಂಕಲನ ಸುನಯ್.ಎಸ್. ಜೈನ್, ಸಾಹಸ ರಾಕೆಟ್ ವಿಕ್ರಂ, ನೃತ್ಯ ರಾಮುಕುಮಾರ್- ಗೌರಿಶಂಕರ್ ಅವರದಾಗಿದೆ. ಮಡಕೇರಿ, ಕುಮಟೂರು ಪುರಾತನ ಏರ್ಮಾಡು ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದೇ ತಿಂಗಳು ಸಿನಿಮಾವನ್ನು ಜನರಿಗೆ
ತೋರಿಸಲು ವಿತರಕ ಕುಮಾರ್ ಯೋಜನೆ ಹಾಕಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಕೆಲವೊಮ್ಮೆ ನಾವುಗಳು ಇಂತಹ ಕೆಲಸಗಳನ್ನು ಮಾಡಬಾರದು ಎಂಬ ನಿಷೇದವಿದ್ದರೂ ಹಠ ಮಾಡಿ ಅದನ್ನು ಮಾಡಲು ಹೋದಾಗ ಭಿನ್ನ ಭಿನ್ನ ಅವಘಡಗಳಿಗೆ ಸಿಲುಕುತ್ತೇವೆ. ನಾಲ್ಕು ನಿರುದ್ಯೋಗಿ ಯುವಕರು ಇಂತಹುದೇ ವಿಷಯಗಳ ಹಿಂದೆ ಹೋದಾಗ ಕಷ್ಟಕ್ಕೆ ಸಿಲುಕುತ್ತಾರೆ. ಅದರಿಂದ ಮುಂದೆ ಅಗಬಹುದಾದ
ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಊಹಿಸಲಾಗದ ದೃಶ್ಯಗಳು ಹಾಗೂ ಅಂದುಕೊAಡAತ ಸನ್ನಿವೇಶಗಳು ಬಾರದೆ ನೋಡುಗರ ಕುತೂಹಲ ಕೆರಳಿಸುತ್ತದೆ. ಕಷ್ಟಪಟ್ಟು ಇಷ್ಟದಿಂದ ಹಾರರ್ ಸಿನಿಮಾ ಸಿದ್ದಪಡಿಸಿದ್ದೇವೆ. ಮಾಧ್ಯಮದ ಸಹಕಾರಬೇಕೆಂದು ಸುಸಮಯ ದಿನೇಶ್ ಕೋರಿಕೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು