LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಬದುಕು ಮತ್ತು ಬದುಕಲು ಬಿಡಿ... ಮಹಾವೀರ್ ಜನ್ಮ ಕಲ್ಯಾಣಕ್...

ಅಹಿಂಸೆ, ಸತ್ಯ, ಅಸ್ತೀಯ, ಬ್ರಹ್ಮಚರ್ಯ, ಅಪರಿಗ್ರಹ, ನಿರ್ವಣಾ, ಇಂತಹ ಪ್ರಮುಖವಾದ ಬೋಧನೆಯನ್ನು ಪಂಚತತ್ವ ಎಂದು ಸಮಾಜವು ಗೌರವಿಸುತ್ತದೆ. ಭಗವಾನ್ ಮಹಾವೀರರು ಜೈನ ಧರ್ಮದ 24ನೆಯ ಮತ್ತು ಕೊನೆಯ ತೀರ್ಥಂಕರರು. ಬಿಹಾರದ ಕುಂದಾ ಗ್ರಾಮದಲ್ಲಿ ವರ್ಧಮಾನ ಬಾಲ್ಯದ ಹೆಸರು. ತಂದೆ ರಾಜ ಸಿದ್ದಾರ್ಥ, ತಾಯಿ ರಾಣಿ ತ್ರಿಶಾಲಾ. ವರ್ಧಮಾನ ಎಂದರೆ ಅತ್ಯಂತ ಧೈರ್ಯಶಾಲಿ ಎಂದು ಹೇಳುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ 13ನೆಯ ದಿನ ಕ್ರಿ.ಪೂ.599. ವರ್ಧಮಾನರು ತಮ್ಮ ಇಂದ್ರಿಯ ಶಕ್ತಿಯಿಂದ ಭಗವಾನ್ ಮಹಾವೀರರಾಗಿ ಈ ಪವಿತ್ರ 2625 ಈ ದಿನವನ್ನು ಭಗವಾನ್ ಮಹಾವೀರರ ಪವಿತ್ರ ಜಯಂತಿಯಾಗಿ ವಿಶ್ವದಲ್ಲಿ ಅಧ್ಯಾತ್ಮದ ತತ್ವದ ಗುರುವಾಗಿ ಆಚರಣೆ ಮಾಡಲಾಗುತ್ತದೆ.
ಪ್ರಸ್ತುತ ಯುಗದಲ್ಲಿ, ಭಗವಾನ್ ಶ್ರೀ ವೃಷಭ ದೇವನಿಂದ ಭಗವಾನ್ ಮಹಾವೀರ ಪೂರ್ಣಗೊಂಡಿದ್ದಾರೆ. ಅಂದಿನ ದಿನಗಳಲ್ಲಿ ಯಜ್ಞಗಳು ಮತ್ತು ತ್ಯಾಗದ ಆಚರಣೆ ವ್ಯಾಪಕವಾಗಿತ್ತು ಮಹಾವೀರರು ಎಲ್ಲಾ ಜೀವಿಗಳನ್ನು ಒಬ್ಬರ ಸ್ವಂತ ಆತ್ಮವೆಂದು ಅನುಭವಿಸುವ ಪವಿತ್ರ ಸಂದೇಶವನ್ನು ಜಗಕ್ಕೆ ಬೋಧಿಸಿದರು ಸ್ವಯಂ ಸಾಕ್ಷಾತ್ಕಾರಗೊಂಡ ಸತ್ಯವನ್ನು ತಿಳಿಸಿದರು ಸಮಸ್ತ ಜನರು ಅವರ ತತ್ವದಲ್ಲಿ ಅಡಗಿರುವ ಸತ್ಯಾಂಶವನ್ನು ಸಮಗ್ರತೆಯನ್ನು ಒಪ್ಪಿಕೊಂಡರು ಮತ್ತು ಅಪ್ಪಿಕೊಂಡರು. ಜ್ಞಾನ, ತತ್ವಶಾಸ್ತ್ರ, ಚಾರಿತ್ರ್ಯ, ಮತ್ತು ತಪಸ್ಸನ್ನು ಧಾರ್ಮಿಕ ಆಚರಣೆಯ ಮೂಲಭೂತ ಅಡಿಪಾಯವಾಗಿದೆ ಎಂದು ಅನುಭವಿಸಿ ಘೋಷಿಸಿದರು. ಭಗವಾನ್ ಮಹಾವೀರರು ತಮ್ಮ 30ನೆಯ ವಯಸ್ಸಿನಲ್ಲಿ ತ್ಯಾಗದ ಮಾರ್ಗವನ್ನು ಆತ್ಮ ಶುದ್ಧೀಕರಣಕ್ಕಾಗಿ ಸ್ವೀಕರಿಸಿದರು. ಅವರು ಸತತವಾಗಿ 12 ವರ್ಷಗಳ ಕಾಲ ಕಠಿಣ ತಪಸ್ಸು, ಧ್ಯಾನ, ಸಂಕಲ್ಪದ ಸಿದ್ಧಿಗಾಗಿ ಮೌನ ಧ್ಯಾನದ ಮೂಲಕ ಆತ್ಮ ಶುದ್ಧಿಯ ಮಾರ್ಗವನ್ನು ಅನುಸರಿಸಿದರು. ಹೀಗೆ ಭಗವಾನರು ಮೂವತ್ತು ವರ್ಷಗಳ ಕಾಲ ಜನರ ಕಲ್ಯಾಣಕ್ಕಾಗಿ ಬಹುತ್ವವುಳ್ಳ ಭಾವನಾತ್ಮಕ ವಿಚಾರದಿಂದ ಬೋಧಿಸಿದರು ಅವರ ಸಂದೇಶಗಳಲ್ಲಿ ಮಾನವೀಯತೆಗೆ ಮಾರ್ಗದರ್ಶಿಯಾದಂತಹ ಚಿಂತನೆಗಳು ಪ್ರತಿಯೊಬ್ಬರನ್ನು ಶ್ರೀ ಸಾಮಾನ್ಯ ಜನರನ್ನು ಸಮಾಧಾನ ನೀಡುವಂತಿದ್ದವು ಈ ಕಾರಣದಿಂದ ಲಕ್ಷಾಂತರ ಗ್ರಹಸ್ಥರು ಶ್ರಾವಕ_, ಶ್ರಾವಿಕ ಧರ್ಮವನ್ನು ಅನುಸರಿಸಿದರು. ಶಿಸ್ತು ಮತ್ತು ಸಮನ್ವಯತೆಯಿಂದ ಭಗವಾನರು ತಮ್ಮ ಧಾರ್ಮಿಕ ಕ್ರಮದೊಳಗೆ ಗಣ ಮತ್ತು ಗಣಧರ ಸಂಪ್ರದಾಯಗಳನ್ನು ಸಂಸ್ಥಾಪಿಸಿದರು.
ನೀವು ಬದುಕಿ ಇತರರನ್ನು ಬದುಕಲು ಬಿಡಿ ಎಂಬ ಅವರ ಸಂದೇಶವು ಮಾನವೀಯತೆಗೆ ಶಾಶ್ವತ ಮಾರ್ಗಸೂಚಿಯಾಗಿ ಇಂದಿಗೂ ಉಳಿದಿದೆ. ಭಗವಾನ್ ಬುದ್ಧರ ಅಹಿಂಸೆ ಪರಮೋಧರ್ಮ ಮತ್ತು ಸತ್ಯ ಸದ್ಭಾವನೆಯ ಸಂದೇಶವನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ಹರಡಲು ನಿರಂತರವಾಗಿ ಅವರು ಸಂಚರಿಸಿದರು. ಅಂದಿನ ಅವರ ಅಹಿಂಸೆಯ ಮಾರ್ಗವನ್ನು ಇಂದಿನ ಈ ದಿನಗಳಲ್ಲಿ ಇವ ನಮ್ಮವ ಇವ ನಮ್ಮವ ಎನ್ನುವ ದಾರಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ ಎಲ್ಲಾ ಮಹಾತ್ಮರು ಪೂಜ್ಯರು ಭಗವಾನರು ಮನುಜರೆಲ್ಲರನ್ನು ಒಂದಾಗಿಸುವ ಸೌಹಾರ್ದತೆಯ ಪರಿಪೂರ್ಣತೆಯ ಪ್ರಜ್ಞೆಯ ಮೂಲಕ ಎಲ್ಲರ ಮನದಂಗಳದಲ್ಲಿ ಪವಿತ್ರವಾದ ಕಮಲದ ಹೂ ಅರಳಲು ಅವರ ಆಲೋಚನೆಗಳು ಎಂದೆAದಿಗೂ ಉಳಿಯುವಂತವಾಗಿವೆ. ಜೈನ ಸಮುದಾಯ ಇಂದಿಗೂ ಗೌರವಿಸಲ್ಪಡುತ್ತದೆ ಕಾರಣ ಪ್ರತಿಯೊಬ್ಬರಲ್ಲೂ ಅವರು ದೇವರ ರೂಪವನ್ನು ಕಾಣುತ್ತಾರೆ ಆತ್ಮ ಶುದ್ಧಿ ಪರಿಶುದ್ಧಿ ಅಧ್ಯಾತ್ಮ ಶುದ್ದಿ ಅಂತAಕರಣದ ಶುದ್ದಿ ಇವೆಲ್ಲವನ್ನು ಮಾನವೀಯತೆ ನೆಲೆಯಿಂದ ಕೂಡ ಆಚರಣೆಯನ್ನು ಮಾಡುತ್ತಾರೆ.
ಭಗವಾನ್ ಮಹಾವೀರರ ಪವಿತ್ರ ಸಂದೇಶಗಳು ಇಂದಿಗೂ ಕೂಡ ಎಲ್ಲರೂ ಮನಃಪೂರ್ವಕವಾಗಿ ಅನುಸರಿಸುತ್ತಾರೆ. ನಿಮ್ಮ ಆತ್ಮವನ್ನು ಮೀರಿದ ಶತ್ರು ಇನ್ನೊಬ್ಬನಿಲ್ಲ, ನಿಜವಾದ ಶತ್ರುಗಳು ತಮ್ಮೊಳಗೆ ವಾಸಿಸುತ್ತಾರೆ. ಅವುಗಳೆಂದರೆ, ಕೋಪ, ಅಹಂಕಾರ, ದುರಾಸೆ, ಬಾಂಧವ್ಯ ಮತ್ತು ದ್ವೇಷ.
ಭಗವಾನ್ ಮಹಾವೀರರ ಬೋಧನೆಗಳು ಸದಾಚಾರ ಮತ್ತು ಸಹಾನುಭೂತಿಯ ಜೀವನವನ್ನು ನಡೆಸಲು ಪ್ರತಿಯೊಬ್ಬರಿಗೂ ಪ್ರೇರೇಪಿಸುತ್ತವೆ.
ಬದುಕು... ಬದುಕಲು ಬಿಡು ಎಂಬ ಶ್ರೇಷ್ಠ ಸಂದೇಶದೊAದಿಗೆ ಅಹಿಂಸೆಯೇ ಪರಮೋಚ್ಚ ಧರ್ಮವೆಂದು ಜಗತ್ತಿಗೆ ಸಾರಿದ ಭಗವಾನರು.
ವ್ಯಕ್ತಿ ತನ್ನನ್ನು ತಾನು ಅರಿಯದ ಹೊರತು ಅನ್ಯರನ್ನು ಅರಿಯಲಾರನು, ತನ್ನ ಅರಿವಿಂದಲೇ ಮುಕ್ತಿ ತಾನು ಸರಿಹೋದರೆ ಲೋಕ ಕಲ್ಯಾಣ ಮಾಡಿದಂತೆ ಎಂಬ ಸಂದೇಶ ಸರ್ವಕಾಲಕ್ಕೂ ಸತ್ಯವಾಗಿದೆ. ಅಹಿಂಸೆಯೇ ದೊಡ್ಡ ಧರ್ಮ, ತನ್ನ ಅಸ್ತಿತ್ವವನ್ನು ಅಳಿಸುವ ಬದಲು ಶಾಂತಿಯಿAದ ಜೀವನವನ್ನು ನಡೆಸಲು ಮತ್ತು ಪ್ರಜ್ಞೆಯಿಂದ ನಡೆದುಕೊಳ್ಳಲು ಬಿಡಬೇಕು, ಇದರಲ್ಲೇ ಎಲ್ಲರ ಕಲ್ಯಾಣ ಅಡಗಿದೆ ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳ ಬಗ್ಗೆ ಕರುಣೆ ಇರಲಿ ಹಾಗೂ ಪ್ರೀತಿ ತೋರಿ ಎಂಬ ಸಂದೇಶ ನೀಡಿ ಬಿಹಾರದ ಪಾವಪುರಿಯಲ್ಲಿ ಶಾಶ್ವತ ಮುಕ್ತಿ ಹೊಂದಿದರು.
-ಪ್ರೊ. ಸಮತಾ ಬಿ. ದೇಶಮಾನೆ
ಪ್ರಾಧ್ಯಾಪಕರು, ಸಮಾಜಶಾಸ್ತ್ರ
ಬೆಂಗಳೂರು ವಿಶ್ವವಿದ್ಯಾಲಯ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು