LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಲಾಕ್‌ಡೌನ್ ನೋವು-ನಲಿವು

ಹೊಸ ಪ್ರತಿಭೆಗಳೇ ಸೇರಿಕೊಂಡು `ಲಾಕ್‌ಡೌನ್' ಎನ್ನುವ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಅಭಿನವ ಪ್ರೊಡಕ್ಷನ್ ಅಡಿಯಲ್ಲಿ ಮಂಜು ಮುದ್ಗಲ್ ನಿರ್ಮಾಣ ಮಾಡುವ ಜತೆಗೆ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಮಾಡಿರುವ ಜಾವೇದ್ ತಿಪ್ಪನಹಟ್ಟಿ ಸಿನಿಮಾಕ್ಕೆ ಚಿತ್ರಕಥೆ, ಸಾಹಿತ್ಯ, ಸಂಗೀತ ಸಂಯೋಜಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಮೊನ್ನೆಯಷ್ಟೇ ಟ್ರೇಲರ್ ಹಾಗೂ ಸಿರಿ ಮ್ಯೂಸಿಕ್ ಹೊರತಂದಿರುವ ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಂಗಳೂರಿನ ವಿಜಯ್ ವಿಘ್ನೇಶ್ ನಾಯಕ. ದಾವಣಗೆರೆ ಮೂಲದ ವಾಣಿಶ್ರೀ ಶ್ರೀನಿವಾಸ್ ನಾಯಕಿ. ಇವರೊಂದಿಗೆ ಶ್ರಾವಣಿ, ಅಶ್ವಿನಿಮುದ್ಗಲ್, ಮಮತಾ ಹಾಗೂ ರೀಲ್ಸ್ ಕರ್ನಾಟಕ ಜೋಡಿ ಖ್ಯಾತರಾದ ಗೋವಿಂದರಾಜು-ವೈಲಾ ಮುಂತಾದವರು ನಟಿಸಿದ್ದಾರೆ. ಶರಣಪ್ಪ ಸುಗ್ಗನಹಳ್ಳಿ ಛಾಯಾಗ್ರಹಣ, ಶಿವರಾಜ್ ಮೆಹೂ ಸಂಕಲನ ಚಿತ್ರಕ್ಕಿದೆ.
ನಂತರ ಮಾತನಾಡಿದ ನಿರ್ದೇಶಕರು, ವಿಶ್ವವೇ ನಲುಗಿದ ಲಾಕ್‌ಡೌನ್ ಸಂದರ್ಭದಲ್ಲಿ ಹಲವರಿಗೆ ನೋವು ತಂದರೆ ಕೆಲವರಿಗೆ ನಲಿವು ತಂದುಕೊಟ್ಟಿದೆ. ಅದಕ್ಕೆ ಟ್ಯಾಗ್ ಲೈನ್‌ದಲ್ಲಿ ವಿಷಾದ ಅಂಡ್ ರಂಜನೆ ಎಂದು ಹೇಳಲಾಗಿದೆ. ಅದರಲ್ಲೂ ಬಳ್ಳಾರಿಯಲ್ಲಿ ಅಂದು ಒಂದಷ್ಟು ಕಹಿ ಘಟನೆಗಳು ನಡೆದುದನ್ನು ಚಿತ್ರಕತೆಗೆ ಅಳವಡಿಸಿಕೊಳ್ಳಲಾಗಿದೆ. ಜತೆಗೆ ಯುವ ಪ್ರೇಮಿಗಳು ಹಾಗೂ ಮಧ್ಯ ವಯಸ್ಕ ದಂಪತಿಗಳ ಪ್ರೀತಿಯನ್ನು ಹಾಸ್ಯದೊಂದಿಗೆ ತೋರಿಸಲಾಗಿದೆ. ಸನ್ನವೇಶಗಳು ವಾಸ್ತವ. ಆದರೆ ಕಥೆ ಕಾಲ್ಪನಿಕವಾಗಿದೆ. ಉತ್ತರ ಕರ್ನಾಟಕ ಭಾಷೆಯನ್ನು ಬಳಸಲಾಗಿದೆ. ಒಂದಷ್ಟು ವಿಷಯಗಳು ಜನರಿಗೆ ಗೊತ್ತಿರುವುದಿಲ್ಲ. ಅದನ್ನು ತಿಳಿಯಬೇಕಾದರೆ ನಮ್ಮ ಸಿನಿಮಾ ನೋಡಬೇಕು ಎನ್ನುತ್ತಾರೆ ಜಾವೇದ್ ತಿಪ್ಪನಹಟ್ಟಿ.
ಅಭಿನಯದ ಅವಕಾಶಕ್ಕಾಗಿ ಎಲ್ಲರ ಬಳಿ ಹೋಗುತ್ತಿದ್ದೆ. ಅವರು ಕೊಡುತ್ತಿದ್ದ ಅಸಹಕಾರದಿಂದ ನಾನೇ ಏಕೆ ಚಿತ್ರ ಮಾಡಬಾರದು ಎಂದು ಯೋಚಿಸಿದ್ದೆ, ಇಲ್ಲಿಯತನಕ ತಂದು ನಿಲ್ಲಿಸಿದೆ. ಎರಡು ಟ್ರಾ÷್ಯಕ್‌ದಲ್ಲಿ ಲವ್ ಸ್ಟೋರಿ ಇರಲಿದ್ದು, ಒಂದರಲ್ಲಿ ನಾನು ಕಾಣಿಸಿಕೊಂಡಿದ್ದೇನೆ.
ದುಡಿದ ಹಣವನ್ನು ಸಿನಿಮಾಕ್ಕೆ ಖರ್ಚು ಮಾಡಿದ್ದೇನೆ. ಮಾಧ್ಯಮದವರು ಸಹಕಾರ ಕೊಡಬೇಕೆಂದು ಮಂಜು ಮುದ್ಗಲ್ ಕೋರಿಕೊಂಡರು. ಕೊಪ್ಪಳ, ಉಪ್ಪಿನ ಬೆಟಗೇರಿ ಸುತ್ತಮುತ್ತ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದುಕೊAಡAತೆ ಆದರೆ, ಇದೇ ತಿಂಗಳು ತೆರೆಗೆ ತರಲು ಜಯದೇವ ಫಿಲಂಸ್ ಯೋಜನೆ ರೂಪಿಸಿಕೊಂಡಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು