LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಲೋಕಸಭಾ ಚುನಾವಣೆ ಹಿನ್ನೆಲೆ ಸಿವಿಲ್ ಪೊಲೀಸ್ ವರ್ಗಾವಣೆ

2024-2029 ರ ಲೋಕಸಭಾ ಚುನಾವಣೆ ಈ ವರ್ಷ ಇನ್ನೂ ಕೆಲವೇ ದಿನಗಳಲ್ಲಿ ನಡೆಯಲಿದ್ದು ಈ ಸಂಬಂಧ ರಾಜ್ಯದ ಸಿವಿಲ್ ಪೊಲೀಸ್ ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡ ಬಹುದಾದ ಹಿನ್ನೆಲೆಯಲ್ಲಿ ವರ್ಗಾವಣೆ ಕಾವು ಹೆಚ್ಚುತ್ತಿದೆ.

ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಮತ್ತು ಕಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳ ಸ್ವಂತ ಊರುಗಳನ್ನು ಆಧರಿಸಿ ಅವರು ಕೆಲಸ ನಿರ್ವಹಿಸುತ್ತಿರುವ ಜಾಗಗಳ ಅನುಗುಣವಾಗಿ (ಸಾರ್ವಜನಿಕರ ಕುಂದು ಕೊರತೆ ಅಥವಾ ಇನ್ನೂ ಇತರೆ ವಿಷಯಗಳಲ್ಲಿ ಪ್ರತಿದಿನ ಸಂಪರ್ಕದಲ್ಲಿಇರುವ, ಪೊಲೀಸ್ ಠಾಣೆಗಳಲ್ಲಿ.) ಅಧಿಕಾರಿಗಳ ವರ್ಗಾವಣೆಯನ್ನು ಮಾಡಲು ಇಲಾಖೆ ರೂಪರೇಷಗಳನ್ನು (ಮಾರ್ಗಸೂಚಿ ) ಸಿದ್ಧಗೊಳಿಸುತ್ತಿದ್ದಾರೆ ಅಥವಾ ಪೂರ್ವ ತಯಾರಿ ನಡೆದಿದೆ ಎನ್ನಬಹುದು.

ರಾಜ್ಯದಲ್ಲಿ 1068 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು, ಸಂಚಾರಿ ಪೊಲೀಸ್ ಠಾಣೆಗಳು, ಸಿಸಿಬಿ ಘಟಕಗಳು ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಆಫೀಸ್‍ಗಳು & 155 ಡಿವೈಎಸ್ಪಿ/ ಎಸಿಪಿ ಕಚೇರಿಗಳು ಹಾಗೂ 30 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 60 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಸಂಖ್ಯೆ ಇರುತ್ತದೆ.

ಅಂದಾಜಿನ ಪ್ರಕಾರ ಸುಮಾರು ಒಂದು ಲಕ್ಷಕ್ಕೂ ಅಧಿಕ ಐ. ಪಿ. ಎಸ್ ಹಾಗು ಇತರೆ, ಹಿರಿಯ ಮತ್ತು ಕಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಿದ್ದು , ಸುಮಾರು 90000 ಸಾವಿರ ಸಿವಿಲ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪ್ರತಿದಿನ ಹಗಲು ಮತ್ತು ರಾತ್ರಿ ಸ್ಥಳೀಯರ ಮತ್ತು ಸಾರ್ವಜನಿಕರ ಸಂಪರ್ಕದಲ್ಲಿರುವ ಸ್ಥಳೀಯ ಊರು, ತಾಲೂಕು ಅಥವಾ ಗ್ರಾಮದವರಾಗಿರುವವರ ಪೊಲೀಸ್ ಕಾನ್ಸ್‍ಟೇಬಲ್, ಹೆಡ್ ಕಾನ್ಸ್‍ಟೇಬಲ್,

ಎಎಸ್‍ಐ ಮತ್ತು ಶ್ರೇಣಿಯ ಬಡ್ತಿ ಪಡೆದಿರುವ ಪಿಎಸ್‍ಐ /ಪಿ. ಐ ರವರ ಹೆಸರುಗಳನ್ನು ಗುರುತಿಸಿ ಚುನಾವಣೆ ಮುಗಿಯುವವರೆಗೂ ಪಕ್ಕದ ತಾಲೂಕುಗಳಿಗೆ/ ನಗರ ಪ್ರದೇಶದಲ್ಲಿ ಠಾಣೆಗಳಿಗೆ ವರ್ಗಾವಣೆ ಮಾಡಲು ಮತ್ತು ಸಿವಿಲ್ ಸಬ್ ಇನ್ಸ್‍ಪೆಕ್ಟರ್ ಮತ್ತು ಮೇಲ್ಪಟ್ಟ ಅಧಿಕಾರಿಗಳನ್ನು ನಗರದಿಂದ ಜಿಲ್ಲೆಗಳಿಗೆ ಮತ್ತು ಜಿಲ್ಲೆಗಳಿಂದ ನಗರಗಳಿಗೆ ಮತ್ತು ಇಲಾಖೆಯ ವಿವಿಧ ಘಟಕಗಳಿಗೂ, ಹಾಗೆಯೇ 30 ಎಸ್ ಪಿ, 60 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಐಜಿಪಿ ಅಧಿಕಾರಿ ಶ್ರೇಣಿ ಅಧಿಕಾರಿಗಳನ್ನು ಜಿಲ್ಲೆಗಳಿಂದ ಮತ್ತು ವಲಯಗಳಿಂದ ವರ್ಗಾವಣೆ ಮಾಡಲು ಪೂರ್ವ ತಯಾರಿ ನಡೆದಿದೆ.ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಮಧ್ಯದಲ್ಲಿ ಈ ವರ್ಗಾವಣೆಗಳನ್ನು ಮಾಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿರುತ್ತಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು