LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಭ್ರಷ್ಟರಿಗೆ `ಲೋಕಾ' ಬಿಸಿ

ಬೆಂಗಳೂರು: ಲೊಕಾಯುಕ್ತ ಅಧಿಕಾರಿಗಳು ಕೆಲ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಒಟ್ಟು 250 ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಜ್ಯಾದ್ಯಂತ ವಿವಿಧ ಇಲಾಖೆಗಳ 17 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಏಕಕಾಲದಲ್ಲಿ 75 ಕಡೆ ದಾಳಿ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ತಿಪ್ಪಣ್ಣಗೌಡ ತಂದೆ ಸೋಮಣ್ಣಗೌಡ ಅನ್ನದಾನಿ ಕಾರ್ಯನಿರ್ವಾಹಕ ಅಭಿಯಂತರರು, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ನಾರಾಯಣಪುರ ಬಲದಂಡೆ ಕಾಲುವೆ ಡಿವಿ-6, ಚಿಕ್ಕಹೊನ್ನಿ ಕ್ಯಾಂಪ್, ದೇವದುರ್ಗ. ಬಸವರಾಜ ತಂದೆ ಶ್ರೀಶೈಲ ಡಾಂಗೆ ವಲಯ ಅರಣ್ಯಾಧಿಕಾರಿ, ಬೀದರ್. ಮಹಾಂತೇಶ ತಂದೆ ಸದಾನಂದ ನ್ಯಾಮತಿ ವಲಯ ಅರಣ್ಯಾಧಿಕಾರಿ, ಹಾವೇರಿ ಉಪ ವಿಭಾಗ, ಹಾವೇರಿ. ಪರಮೇಶಪ್ಪ ತಂದೆ ಹನುಮಂತಪ್ಪ ಪೆಲ್ನಾವರ ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ವಿಭಾಗ, ಕೃಷಿ ಘಟಕ, ಹಾವೇರಿ.

ಎಂ.ಪಿ. ನಾಗೇಂದ್ರ ನಾಯ್ಕ್ ತಂದೆ ಪಾಪನಾಯಕ್, ಎಸಿಎಫ್, ಸಾಮಾಜಿಕ ಅರಣ್ಯ ಕಛೇರಿ, ಚಿತ್ರದುರ್ಗ. ಬಾಲರಾಜು ಓ.P ತಂದೆ ಪುಟ್ಟಸ್ವಾಮಿ ಮುಖ್ಯ ಇಂಜಿನಿಯರ್, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು. ಕೆ.ಮಂಜುನಾಥ್ ತಂದೆ ಕೆ.ಬಸಣ್ಣ ಕಂದಾಯ ನಿರೀಕ್ಷಕರು, ಬಳ್ಳಾರಿ ಶರಣಬಸಪ್ಪ ಪಟ್ಟೇಡ್ ನಿರ್ದೇಶಕರು, ಯೋಜನೆ, ಕ್ಯಾಶ್ಯೂಟೆಕ್ ನಿರ್ಮಿತಿ ಕೇಂದ್ರ, ಶಕ್ತಿ ನಗರ, ರಾಯಚೂರು.

ಎಂ.ನಾಗೇಂದ್ರಪ್ಪ ತಂದೆ ಮಾರಯ್ಯ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿರಾ, ತುಮಕೂರು. ವಿ.ಕೃಷ್ಣಮೂರ್ತಿ ತಂದೆ ದಿವಂಗತ ವೆಂಕಟಪ್ಪ, ಸಹಾಯಕ ನಿರ್ದೇಶಕ, ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ಅಪ್ಪಾಸಾಹೇಬ ಸಿದ್ಲಿಂಗ್ ಕಾಂಬಳೆ ಜಂಟಿ ನಿರ್ದೇಶಕರು, ನಗರ ಯೋಜನೆ, ಗುಲ್ಬರ್ಗ.

ಚಂದ್ರಪ್ಪ ಕೆ.ವಿ ARO,, ಹೆಗ್ಗನಹಳ್ಳಿ,BBMP, , ಬೆಂಗಳೂರು ಹೆಚ್.ರಾಜೇಶ್ ತಂದೆ ಹಮ್ಮಣ್ಣ ನಾಯಕ್, ಬೇಲೇಕೇರಿ. ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ. ಉಡುಪಿ. ನಾರಾಯಣ ಹೆಚ್ ಇ ತಂದೆ ಈರೇಗೌಡ ಜೂನಿಯರ್ ಇಂಜಿನಿಯರ್, ಕೆಪಿಟಿಸಿಎಲ್, ಗೊರೂರು, ಹಾಸನ.

ಮಹಾದೇವ ತಂದೆ ಸಣ್ಣಪ್ಪ ಬೀರದಾರ ಪಾಟೀಲ್. ಎಇಇ, ಪಂಚಾಯತ್ ರಾಜ್ ಉಪವಿಭಾಗ, ಬೆಳಗಾವಿ.ಶಶಿಕುಮಾರ್ ಟಿ ಎಂ ತಂದೆ ಮಾದಯ್ಯ ಟಿ ಸಿ ಎಕ್ಸಿಕ್ಯೂಟಿವ್ ಇಂಜಿನಿಯರ್, ಟೌನ್ ಪ್ಲಾನಿಂಗ್, ಕೆಐಎಡಿಬಿ ಬೆಂಗಳೂರು. ಶ್ರೀನಿವಾಸ್ ಎಸ್.ಆರ್ ತಂದೆ ರಾಮಣ್ಣ ಡಿ. ಬಾಯ್ಲರ್ ಫಾರ್ ಉಪನಿರ್ದೇಶಕರು, ದಾವಣಗೆರೆ. ಇವರುಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರ ಪರಿಶೀಲನೆ ನಡೆಸಲಾಗುತ್ತಿದೆ.
ಕೆಲ ಅಧಿಕಾರಿಗಳ ಮನೆಯಲ್ಲಿ ಅಪಾರ ಮೊತ್ತದ ಹಣ ಚಿನ್ನ ದೊರೆತಿದ್ದು, ಕೆಲವರ ಬಳಿ ಅಕ್ರಮ ಆಸ್ತಿ ಸಂಪಾದನೆ ದಾಖಲೆ ದೊರೆತಿದೆ ಎಂದು ಸಹ ಹೇಳಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು