LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ದಾಸರಾಯರ ಕೃತಿ ಸಂಪದಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗುವ ಎಲ್ಲ ಅರ್ಹತೆಗಳಿವೆ: ಹರಿದಾಸ ಸಂಪದ ಸಂಸ್ಥಾಪಕ ಮಧುಸೂಧನ್ ವಿ.ರಾವ್ ಅಭಿಮತ

ಬೆಂಗಳೂರು: ಮಾನವಿಯ ಜಗನ್ನಾಥ ದಾಸರ ಅಂತರಂಗ ಭಕ್ತರಾದ ಬಲ್ಲಟಗಿ ಗುಂಡಾಚಾರ್ಯರ(ಶ್ರೀಶ್ಯಾಮಸುಂದರದಾಸರ) ಪುಣ್ಯದಿನ ಅಂಗವಾಗಿ ಬೆಂಗಳೂರು ಮತ್ತಿಕೆರೆ ರಾಯರ ಮಠದಲ್ಲಿ ದಾಸವಾಣಿ ಕರ್ನಾಟಕ ಆಯೋಜಿಸಿದ್ದ ಕಾರ್ಯಕ್ರಮವನ್ನು ಅಂಕಣಕಾರ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಡಾ ಗುರುರಾಜ್ ಪೋಶೆಟ್ಟಿಹಳ್ಳಿ ದೀಪ ಬೆಳಗಿ ಉದ್ಘಾಟಿಸಿದರು.

ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಹರಿದಾಸ ಸಂಪದ ಟ್ರಸ್ಟ್ ಸಂಸ್ಥಾಪಕ ಮಧುಸೂಧನ್ ವಿ ರಾವ್ ಮಾತನಾಡುತ್ತ ಕವಿಗಳಾಗಿದ್ದ ಶ್ಯಾಮಸುಂದರದಾಸರು ಭಕ್ತಿರಸಪೂರಿತವಾದ ಅನೇಕ ಕೃತಿಗಳನ್ನು ತಮ್ಮ ಶಬ್ದ ಚಮತ್ಕಾರದಿಂದ ರಚಿಸಿ ವಾಙ್ಮಯ ಸೇವೆಯನ್ನು ಮಾಡಿದ್ದಾರೆ. ಪ್ರಾಸಬದ್ಧವಾದ ರಚನೆಗಳು, ಗೂಢಾ ರ್ಥಗಳುಳ್ಳ ಪದಗಳು ಇವರ ರಚನೆಯ ವೈಶಿಷ್ಟ್ಯ.

ಅತ್ಯಂತ ಸರಳ ರೀತಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಅಸಾಮಾನ್ಯ ವ್ಯಕ್ತಿತ್ವ ಹೊಂದಿ ದೈವಾಂಶ ಸಂಭೂತರಾಗಿ ಅವಧೂತರಾಗಿ ಸದ್ದಿಲ್ಲದೆ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದ ಶ್ರೀ ಶ್ಯಾಮಸುಂದರದಾಸರು. (1903-1956) ಪುರಂದರ ದಾಸರಾದಿಯಾಗಿ ದಾಸರ ಕೃತಿಗಳನ್ನು ಅಧ್ಯಯನ ಮಾಡುವ ಮೊದಲು ಇವರ ಕೃತಿಗಳನ್ನು ಅಧ್ಯಯನ ಮಾಡಿದರೆ ಉನ್ನತ ವಿಚಾರಗಳು ತಿಳಿಯಲ್ಪಡುತ್ತವೆ .ಇವರ ಕೃತಿ ಸಂಪದಕ್ಕೆ ಜ್ಞಾನ ಪೀಠ ಪ್ರಶಸ್ತಿ ಸಿಗಬೇಕಾದ ಎಲ್ಲ ಅರ್ಹತೆಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೆ ವೇಳೆ ಮಂಗಳಂಗಾ ಹರಿ ವಿಠ್ಠಲ (ಡಾ. ಎನ್ ಜಿ. ವಿಜಯಲಕ್ಷ್ಮಿ ರಾಘವೇಂದ್ರ ಆಚಾರ್ಯ )ವಿರಚಿತಾ ದೇವರನಾಮಗಳ ಧ್ವನಿ ಸುರಳಿಯನ್ನು ಲೋಕಾರ್ಪಣೆ ಗೊಳಿಸಲಾಯಿತು. ದಾಸವಾಣಿ ಕರ್ನಾಟಕದ ಜೈರಾಜ್ ಕುಲಕರ್ಣಿ, ಹಿರಿಯ ಸದಸ್ಯ ಜಿ. ಎಸ್ ಕೃಷ್ಣಮೂರ್ತಿ, ಮತ್ತು ಗಾಯಕಿ ಮಾನಸ ಕುಲಕರ್ಣಿ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು