LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಮಲಯಾಳಂ ಬಹು ನಿರೀಕ್ಷಿತ ಕಥನಾರ್ ಸಿನಿಮಾದ ಟ್ರೇಲರ್ ರಿಲೀಸ್

ಮಲಯಾಳಂ ನಟ ಜಯಸೂರ್ಯ-ಅನುಷ್ಕಾ ಶೆಟ್ಟಿ ನಟನೆಯ ಕಥನಾರ್ ಟ್ರೇಲರ್ ಅನಾವರಣ ಮಲಯಾಳಂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಶ್ರೀ ಗೋಕುಲಂ ಮೂವೀಸ್' ಬ್ಯಾನರ್ ನಡಿ ಗೋಕುಲಂ ಗೋಪಾಲನ್ ಅವರು ನಿರ್ಮಿಸಿರುವ ಬಹುನಿರೀಕ್ಷಿತ ಕಥನಾರ್ ಟ್ರೇಲರ್ ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಹೀಗಾಗಿ ಕನ್ನಡದಲ್ಲಿಯೂ ಟ್ರೇಲರ್ ಅನಾವರಣಗೊಂಡಿದೆ.
ಮಲಯಾಳಂ ನಟ ಜಯಸೂರ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸುದ್ದು, ಅನುಷ್ಕಾ ಶೆಟ್ಟಿ, ಪ್ರಭುದೇವ ಸನೂಪ್ ಸಾನ್, ಸ್ಯಾಂಡಿ, ದೇವಿಕಾ, ನಿತೀಶ್ ಭಾರದ್ವಾಜ್, ವಿನೀತ್, ಹರೀಶ್ ಉತ್ತಮನ್, ಶ್ರೀಕಾಂತ್ ಮುರಳಿ ಮತ್ತು ಕುಲ್‌ಪ್ರೀತ್ ಯಾದವ್ ತಾರಾಬಳಗದಲ್ಲಿದ್ದಾರೆ.
ಹಾಲಿವುಡ್ ನೆನಪಿಸುವ ವಿ.ಎಫ್.ಎಕ್ಸ್ ಮತ್ತು ಹಿನ್ನೆಲೆ ಸಂಗೀತ, ವಿಷ್ಯುವಲ್ ಎಫೆಕ್ಟ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿವೆ. ಜಯಸೂರ್ಯ ತಮ್ಮ ವೃತ್ತಿಜೀವನದ ಸುಮಾರು ನಾಲ್ಕು ವರ್ಷಗಳನ್ನು ಈ ಚಿತ್ರಕ್ಕೆ ಮೀಸಲಿಟ್ಟಿದ್ದಾರೆ. ಕಥನಾರ್ ಚಿತ್ರ 15 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾಗೆ ರೋಜಿನ್ ಥಾಮಸ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರಕ್ಕೆ ಆರ್. ರಾಮಾನಂದ್ ಮತ್ತು ರೋಜಿನ್ ಥಾಮಸ್ ಚಿತ್ರಕಥೆ ಬರೆದಿದ್ದು, ನೀಲ್ ಡಿ ಕುನ್ಹಾ ಕ್ಯಾಮರಾ ವರ್ಕ್ ಇದೆ. ರಾಹುಲ್ ಸುಬ್ರಮಣ್ಯನ್ ಸಂಗೀತ ಸಂಯೋಜಿಸಿದ್ದು, ಸಾಹಿತ್ಯವನ್ನೂ ಬರೆದಿರೋದು ವಿಶೇಷ. ರೋಜಿನ್ ಥಾಮಸ್ ಎಡಿಟಿಂಗ್ ಜೊತೆ ವಿಎಫ್‌ಎಕ್ಸ್ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು