LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ನ್ಯಾಯಯುತ ಮಾರ್ಗದ ದುಡಿಮೆಯಲ್ಲಿ ಬಂಡವಾಳ ಮಾಡುವುದು ತಪ್ಪಲ್ಲ ಪ್ರಗತಿಪರ ಚಿಂತಕ ಹಾಗೂ ಲೇಖಕ ಮಂಜುನಾಥ್ ಅದ್ದೆ

ದೊಡ್ಡಬಳ್ಳಾಪುರ: ಚಳುವಳಿಗಾರರು ಸಂವಿಧಾನದ ಚೌಕಟ್ಟಿನಲ್ಲಿ ದುಡುಮೆಗು ಮಾರ್ಗಮಾಡಿಕೊಳ್ಳದೇ ಹೋದರೆ ಹೋರಾಟಗಳು ಸೋಲುತ್ತವೆ. ಇದರಿಂದ ಸಮಾಜಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಪ್ರಗತಿಪರ ಚಿಂತಕ, ಲೇಖಕ ಮಂಜುನಾಥ ಎಂ.ಅದ್ದೆ ಹೇಳಿದರು.
ಅವರು ನಗರದ ಕನ್ನಡ ಜಾಗೃತ ಭವನ ದಲ್ಲಿ ಭಾನುವಾರ ನಡೆದ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ ಅವರಿಗೆ `ಕನ್ನಡ ಜನಪರ ಸತ್ಯ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಯಾವುದೇ ವ್ಯಕ್ತಿ ನ್ಯಾಯಯುತ ಮಾರ್ಗದ ದುಡುಮೆಯಲ್ಲಿ ಬಂಡವಾಳ ಮಾಡುವುದು ತಪ್ಪಲ್ಲ. ಆದರೆ ಅದನ್ನು ತನ್ನ ಸುತ್ತಲಿನ ಸಮಾಜಕ್ಕು ಹಂಚುವ ಮೂಲಕ ಬದುಕಿದಾಗ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ. ಆದರೆ ಕಾರ್ಪೊರೆಟ್ ವಲಯದ ವ್ಯಕ್ತಿಗಳು ಜನರ ಶೋಷಣೆಯ ಮೂಲಕ ಬಂಡವಾಳ ಮಾಡುವುದು ಅಪಾಯಕಾರಿ.

ಇದನ್ನು ವಿರೋಧಿಸುವ ಎದೆಗಾರಿಕೆಯನ್ನು ಬೆಳೆಸಿಕೊಂಡು ಜನಪರವಾಗಿ ಹೋರಾಟ ಮಾಡುವ ತನ್ನ ಸುತ್ತಲಿನ ಜನರ ಒಳಿತಿಗಾಗಿ ಶ್ರಮಿಸಿದವರು ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ. ಹೀಗಾಗಿಯೇ ಕರ್ನಾಟಕ 50ನೇ ವರ್ಷಾಚರಣೆ ಸಂದರ್ಭದಲ್ಲಿ ಸಮಾನ ಮನಸ್ಕರು ನಗದು ಪುರಸ್ಕಾರ ನೀಡುವ ಮೂಲಕ ಅಭಿನಂದಿಸುತ್ತಿರುವುದು ಅರ್ಥಪೂರ್ಣವಾಗಿದೆ. ಇದು ಇತರೆ ಹೋರಾಟಗಾರರಿಗೆ ಜನರಪರವಾಗಿ ಕೆಲಸ ಮಾಡುವ ಸ್ಫೂರ್ತಿ ತುಂಬದಲಿದೆ ಎಂದರು.

ನಗರಸಭಾ ಸದಸ್ಯ ಹಾಗೂ ಹಿರಿಯಕನ್ನಡಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ಪ್ರಾರಂಭದ ದಿನಗಳಲ್ಲಿ
ಪರಭಾಷಾ ಚಿತ್ರಗಳ ವಿರುದ್ಧದ ಪ್ರತಿಭಟನೆಗೆಸೀಮಿತವಾಗಿದ್ದ ನಮ್ಮ ಹೋರಾಟಗಳು ನಂತರದಿನಗಳಲ್ಲಿ ನಾಡಿನ ನೆಲ,ಜಲ ಹಾಗೂ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಹೋರಾಟಗಳಾಗಿ ರೂಪುಗೊಂಡಿದ್ದು ಈಗ ಇತಿಹಾಸ. 80ರ ದಶಕದಲ್ಲಿ ನಗರದಲ್ಲಿ ಹುಟ್ಟಿಕೊಂಡ ಕನ್ನಡ ಜಾಗೃತ ಪರಿಷತ್ ಅಡಿಯಲ್ಲಿ ಇಡೀ ರಾಜ್ಯವೇ ಇಲ್ಲಿನ ಕನ್ನಡಪರ, ರೈತರಪರ ಹಾಗೂ ದಲಿತಪರ ಚಳುವಳಿಗೆಗಳನ್ನು ಗುರುತಿಸುವಂತೆ ಹಲವಾರು ದಾಖಲರ್ಹ ಹೋರಾಟಗಳು ನಡೆದಿವೆ.

ಈ ಎಲ್ಲಾ ಹೋರಾಟಗಳಲ್ಲೂ ಡಾ.ವೆಂಕಟರೆಡ್ಡಿ, ಜಿ.ಸತ್ಯನಾರಾಯಣ ಸೇರಿದಂತೆ ಹಲವಾರು ಜನ ತೊಡಗಿಸಿಕೊಂಡಿದ್ದರು. ಇದರ ಫಲವಾಗಿಯೇ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಗಳು ದೊರೆಯಲು ಕಾರಣವಾಯಿತು. ಇದರಿಂದ ಕನ್ನಡಿಗರು ಆರ್ಥಿಕವಾಗಿ ಸದೃಢರಾಗಿ ಬೆಳೆಯಲು ಸಾಧ್ಯವಾಗಿದೆ. ಇಂದಿನ ಯುವ ಪೀಳಿಗೆ ಹೋರಾಟಗಳ ಇತಿಹಾಸವನ್ನು ತಿಳಿಯುವ ಮೂಲಕ ಸ್ವಾಭಿಮಾನದ ಬದುಕು ರೂಪಿಕೊಳ್ಳಲು ನಾಡಿನ ಏಳಿಗೆಗೆ ಶ್ರಮಿಸಲು ಸಜ್ಜಾಗಬೇಕು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ, ಚಳುವಳಿಗಾರರು ಎಂದೂ ಸಹ ಪ್ರಶಸ್ತಿ, ಅಭಿನಂದನೆಗಳಿಗಾಗಿ ಹೋರಾಟಗಳನ್ನು ನಡೆಸುವುದಿಲ್ಲ. ಸದಾ ತಮ್ಮ ಸುತ್ತಲಿನ ಸಮಾಜದ ನೆಮ್ಮದಿಗಾಗಿ ತುಡಿಯಲಿದೆ. ಆದರೆ ಈ ತುಡಿತವನ್ನು ಇಳಿ ವಯಸ್ಸಿನಲ್ಲಿ ಗುರುತಿಸಿ ಗೌರವಿಸಿದಾಗ ಹೋರಾಟಗಾರರ ಬದುಕು ಸಾರ್ಥಕವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೇಜರ್ ಎಸ್.ಮಹಾಬಲೇಶ್ವರ್ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಕನ್ನಡ ಜಾಗೃತಿ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಸೇರಿದಂತೆ ಹಲವಾರು ಜನ ಹೋರಾಟಗಾರರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು