LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮೆಸ್ಸಿ ಚೊಚ್ಚಲ ವಿಶ್ವಕಪ್ ಹ್ಯಾಟ್ರಿಕ್! ರೊನಾಲ್ಡೊ ವಿಶ್ವದಾಖಲೆ ಧೂಳೀಪಟ!

ಅರ್ಜೇಂಟೀನಾದ ಸ್ಟಾರ್ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಅವರ 200ನೇ ಅಂತಾರಾಷ್ಟ್ರೀಯ ಪಂದ್ಯ ಇಷ್ಟರಮಟ್ಟಿಗೆ ಸ್ಮರಣೀಯವಾಗಬಹುದು ಎಂದು ಸ್ವತಃ ಮೆಸ್ಸಿ ಅವರೇ ಅಂದುಕೊAಡಿರಲಿಕ್ಕಿಲ್ಲ. ಅಲ್ಜೀರಿಯಾ ವಿರುದ್ಧ ನಡೆದ 2026ರ ಫಿಫಾ ವಿಶ್ವಕಪ್‌ನ ಅರ್ಜೆಂಟೀನಾದ ಮೊದಲ ಪಂದ್ಯದಲ್ಲೇ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದ ಚೊಚ್ಚಲ ವಿಶ್ವಕಪ್ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮಾತ್ರವಲ್ಲದೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅಪರೂರದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಕಾನ್ಸಾಸ್‌ನಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಈ ಪಂದ್ಯವನ್ನು 3-0 ಅಂತರದಿಂದ ಗೆದ್ದುಕೊಂಡಿತು. 38 ವರ್ಷದ ಮೆಸ್ಸಿ ಮೂರೂ ಗೋಲುಗಳನ್ನು ಗಳಿಸುವ ಮೂಲಕ ತಮ್ಮ ದೇಶದ ಪರ 200ನೇ ಪಂದ್ಯವನ್ನಾಡಿದ ಸಂಭ್ರಮ ಆಚರಿಸಿದರು. ಇದರೊಂದಿಗೆ ಆರು ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಆಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.
ಹೀಗಿತ್ತು ಹ್ಯಾಟ್ರಿಕ್ ಗೋಲಿನ ಹಾದಿ
ಲಿಯೋನೆಲ್ ಮೆಸ್ಸಿ ಅವರು ಪಂದ್ಯದ 17ನೇ ನಿಮಿಷದಲ್ಲಿ ಬಾಕ್ಸ್ನ ಹೊರಗಿನಿಂದ ಅತ್ಯುತ್ತಮ ಎಡಗಾಲಿನ ಶಾಟ್ ಹೊಡೆಯುವ ಮೂಲಕ ಮೊದಲ ಗೋಲು ಬಾರಿಸಿದರು. ಆನಂತರ, 60ನೇ ನಿಮಿಷದಲ್ಲಿ ಅಲ್ಜೀರಿಯಾದ ಗೋಲ್‌ಕೀಪರ್ ಕೈಯಿಂದ ಚೆಂಡು ಜಾರಿದ ಅವಕಾಶವನ್ನು ಬಳಸಿಕೊಂಡು ಹತ್ತಿರದಿಂದಲೇ ಎರಡನೇ ಗೋಲು ಗಳಿಸಿದರು. ತದನಂತರ, 76ನೇ ನಿಮಿಷದಲ್ಲಿ ಮತ್ತೊಮ್ಮೆ ಬಾಕ್ಸ್ನ ಹೊರಗಿನಿಂದ ಅದ್ಭುತವಾಗಿ ಚೆಂಡನ್ನು ತಿರುಗಿಲುವ ಮೂಲಕ ಮೂರನೇ ಗೋಲು ಬಾರಿಸಿ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ಇತಿಹಾಸ ಸೃಷ್ಟಿಸಿದ ಲಿಯೋನೆಲ್ ಮೆಸ್ಸಿ
ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಹ್ಯಾಟ್ರಿಕ್ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಮೆಸ್ಸಿ ಪಾತ್ರರಾಗಿದ್ದಾರೆ. ಈ ಮೂಲಕ ಅವರು 2018ರ ವಿಶ್ವಕಪ್‌ನಲ್ಲಿ ಸೋಚಿಯ ಫಿಶ್ಟ್ ಒಲಿಂಪಿಕ್ ಸ್ಟೇಡಿಯಂನಲ್ಲಿ ಸ್ಪೇನ್ ವಿರುದ್ಧ ಮೂರು ಗೋಲು ಗಳಿಸಿ ಕ್ರಿಸ್ಟಿಯಾನೊ ರೊನಾಲ್ಡೊ ಬರೆದಿದ್ದ ದಾಖಲೆಯನ್ನು ಮುರಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು