LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಕೋಟಿಯಲ್ಲಿ ಮಿಂಚಲು ನವಪ್ರತಿಭೆಗಳು ರೆಡಿ

ಬರುವ ಶುಕ್ರವಾರ ಬಿಡುಗಡೆಗೆ ಸಿದ್ಧವಿರುವ 'ಕೋಟಿ' ಸಿನಿಮಾ ಈಗಾಗಲೇ ಟ್ರೇಲರ್ vಮತ್ತು ಹಾಡುಗಳಿಂದ ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ 'ಕೋಟಿ' ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ.

'ಕೋಟಿ' ಚಿತ್ರದ ಇನ್ನೊಂದು ವಿಶೇಷತೆ ಇಬ್ಬರು ಹೊಸ ಪ್ರತಿಭೆಗಳು. 'ಕೋಟಿ'ಯಲ್ಲಿ ಧನಂಜಯ್‍ಗೆ ತಾಯಿಯಾಗಿ ತಾರಾ ಅಭಿನಯಿಸಿದ್ದರೆ, ತಮ್ಮ - ತಂಗಿಯಾಗಿ ಪೃಥ್ವಿ ಶಾಮನೂರು ಮತ್ತು ತನುಜಾ ವೆಂಕಟೇಶ್ ಅಭಿನಯಿಸಿದ್ದಾರೆ. ಇತ್ತಿಚೆಗೆ ನಡೆದ ಚಿತ್ರದ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಡಾಲಿ ಧನಂಜಯ್ ಮತ್ತು ತಾರಾ ಅವರು ಈ ಹೊಸ ಪ್ರತಿಭೆಗಳ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉದಯೋನ್ಮುಖ ನಟ 'ಪೃಥ್ವಿ ಶಾಮನೂರು' ಈಗಾಗಲೇ ಹರಿಪ್ರಸಾದ್ ಜಯಣ್ಣ ನಿರ್ದೇಶನದ 'ಪದವಿ ಪೂರ್ವ'ದ ಮುಖಾಂತರ ತಮ್ಮ ಸಿನಿಮಾ ಪಯಣವನ್ನು ಆರಂಭಿಸಿದ್ದಾರೆ. ಕೋಟಿ ಸಿನಿಮಾದಲ್ಲಿ ಇವರ ಪಾತ್ರ 'ನಚ್ಚಿ', ಕೋಟಿಯ ಪ್ರೀತಿಯ ತಮ್ಮ. ಯಾರಿಗೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಇವನು ಅಕ್ಕ ಅಣ್ಣಂದಿರ ಕಾಡಿಸುತ್ತ ನಗಿಸುತ್ತ ಮನೆಗೊಂದು ಕಳೆ ತರುವ ತುಂಟ. ಹಾಗೆಯೆ ಕೋಟಿಯ ತಂಗಿ 'ಮಹತಿ'ಯ ಪಾತ್ರದಲ್ಲಿ ರಂಗಭೂಮಿ ಹಿನ್ನೆಲೆಯ ತನುಜಾ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಇವರಿಗೆ ಇದು ಚೊಚ್ಚಲ ಸಿನಿಮಾ.

ಕೋಟಿ ಚಿತ್ರದ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಪೃಥ್ವಿ ಶಾಮನೂರು "ನಚ್ಚಿ ಒಂದು ಸಣ್ಣ ಪಾತ್ರವಾದರೂ ತುಂಬಾ ಇಂಪ್ಯಾಕ್ಟ್ ಇರುವ ಪಾತ್ರ. ಇಷ್ಟು ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿ ಇದೆ" ಎಂದರು.ಕೋಟಿಯ ತಂಗಿಯ ಪಾತ್ರ ಮಾಡಿರುವ ತನುಜಾ ವೆಂಕಟೇಶ್ "ನಾನು ಕೋಟಿಯ ತಂಗಿ 'ಮಹತಿ'ಯಾಗಿ ಅಭಿನಯಿಸಿದೀನಿ. ಒಂದು ಇಂಪಾರ್ಟೆಂಟ್ ಪಾತ್ರ. ಧನಂಜಯ್ ಅಣ್ಣ, ತಾರಮ್ಮ ಮತ್ತು ಪೃಥ್ವಿ ಅವರ ಜತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಒಂದು ಕುಟುಂಬದ ಜತೆ ಇದ್ದಂತೆ ಅನಿಸಿತು" ಎಂದು ಸಂತಸ ಹಂಚಿಕೊಂಡರು.

ಕೋಟಿ ಚಿತ್ರದ ನಿರ್ದೇಶಕ ಪರಮ್ "ಈಗಾಗಲೇ ಹೀರೋ ಆಗಿ 'ಪದವಿ ಪೂರ್ವ' ಚಿತ್ರದಲ್ಲಿ ನಟಿಸಿರುವ ಪೃಥ್ವಿ ಶಾಮನೂರು 'ನಚ್ಚಿ' ಪಾತ್ರವನ್ನು ಇಷ್ಟಪಟ್ಟು ಒಪ್ಪಿ ನಟಿಸಿದ್ದಾರೆ. ಅವರ ಅಭಿನಯದ ಎರಡು ದೃಶ್ಯಗಳನಂತೂ ನೀವು ತುಂಬಾ ಇಷ್ಟ ಪಡುತ್ತೀರಿ. 'ಮಹತಿ'ಯ ಪಾತ್ರ ಮಾಡಿರುವ ತನುಜಾ ಅವರ ಮೊದಲ ಸಿನಿಮಾ ಇದು. ಅವರ ಅಭಿನಯದಲ್ಲಿ ತುಂಬಾ ಲೈಫ್ ಇದೆ. ಪ್ರತಿಭಾವಂತ ನಟಿ" ಎಂದರು.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ಕೋಟಿ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು