LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಯುವ ಜನತೆಯಲ್ಲಿ ವ್ಯಾಸದಾಸ ಸಾಹಿತ್ಯದ ಅರಿವು ಮೂಡಬೇಕು: ಪೇಜಾವರ ಶ್ರೀ

ಹರಿದಾಸ ಮಿಲನ ಮತ್ತು ದಾಸೋಪಾಸನ, ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದ ಮೂರನೇ ವಾರ್ಷಿಕೋತ್ಸವಬೆಂಗಳೂರು ಕತ್ರಿಗುಪ್ಪೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಇಂದಿನ ಯುವಜನೆತೆಯಲ್ಲಿ ವ್ಯಾಸದಾಸ ಸಾಹಿತ್ಯದ ಅರಿವು ಬರಬೇಕು.

ಸಾಮೂಹಿಕ ಕಾರ್ಯಕ್ರಮಗಳಲ್ಲಿ ಯುವಕರು ಭಾಗವಹಿಸುವಂತೆ ಮಾಡಿ ಎಂದು ಕಿವಿಮಾತು ಹೇಳಿದರು .ಮುಖ್ಯ ಅತಿಥಿಗಳಾಗಿ ಪಂಡಿತರಾದ ಶ್ರೀ ಸತ್ಯಧ್ಯಾನ ಆಚಾರ್ಯ ಕಟ್ಟಿ ವ್ಯಾಸ ಸಾಹಿತ್ಯದ ಸರಳ ರೂಪವೇ ದಾಸ ಸಾಹಿತ್ಯ ಎಂದು ದಾಸ ಸಾಹಿತ್ಯದ ಸಮಗ್ರ ಸರಳ ರೂಪ ತಿಳಿಸಿದರು. ಪಂಡಿತ ಡಾ /ಸತ್ಯನಾರಾಯಣಾಚಾರ್ಯರು ಶ್ರೀ ವಿಜಯ ದಾಸರ ಕೃತಿಗಳ ಸುಳಾದಿಗಳ ವೈಶಿಷ್ಟತೆಯ ಬಗ್ಗೆ ಉಪನ್ಯಾಸ ನೀಡಿದರು.

ಸಮೂಹದಲ್ಲಿ "ನಿತ್ಯ ಗಾಯನ ಸೇವೆ", ವಾರದ ನೇರ ಪ್ರಸಾರ ಗಾಯನ ಸೇವೆ, ವಿಶೇಷ ದಾಸರ ಮತ್ತು ಯತಿಗಳ "ಗಾಯನ ಸ್ಪರ್ಧೆ", ತಿಂಗಳಿಗೆ ಎರಡು ಬಾರಿ "ಪಟ್ ಅಂತ ಹೇಳ್ರಿ" ಇನ್ನು ವಿಶೇಷವಾಗಿ ಶ್ರಾವಣಮಾಸದಲ್ಲಿ "ಶ್ರಾವಣೀಯ ಶ್ರಾವಣೋಪಾಸನೆ", ಪಕ್ಷಮಾಸದಲ್ಲಿ ಪಿತೃಗಳ ಚಿಂತನೆ, ಹಲವಾರು ವೈವಿದ್ಯಮಯ ಸ್ಪರ್ಧೆ, ಚಿಂತನೆ ನಡೆಸುತ್ತಾ ಒಟ್ಟಾರೆ 11 ಪ್ರಶಸ್ತಿ ಪ್ರಧಾನ ಮಾಡಲಾಯಿತು.ಶ್ರೀ ಚಿದಾನಂದ ಕುಲಕರ್ಣಿ ಅವರ "ಪುಣ್ಯಕೋಟಿ " ರೂಪಕ ಅವರ ತನ್ಮಯತೆಯ ಏಕಪಾತ್ರಾಭಿನಯ ಎಲ್ಲರ ಮನಸೂರೆಗೊಂಡಿತು. ವಿಶೇಷ ಚೇತನಳಾದ ಕುಮಾರಿ ವೈಭವಿ ಕುಲಕರ್ಣಿ ಇವಳ ಭರತ ನಾಟ್ಯ ಎಲ್ಲರ ಪ್ರೀತಿಗೆ ಪಾತ್ರವಾಯಿತು.

ಶ್ರೀ ಶ್ರೀಪಾದ ಸಿಂಗನಮಲ್ಲಿ, ಪಂಡಿತ ಶ್ರೀ ಪದ್ಮನಾಭ ವರಖೇಡಿ, ಶ್ರೀ ಸುರೇಶ ಕಲ್ಲೂರ, ಡಾ ಆರ್. ಪಿ. ಕುಲಕರ್ಣಿ, ಶ್ರೀಮತಿ ರಾಧಿಕಾ ಜೋಶಿ, ಹಾಗೂ ಪ್ರಿಯಾ ಪ್ರಾಣೇಶ ಹರಿದಾಸ ಹೀಗೆ ಸಮೂಹದ ಎಲ್ಲ ಕಾರ್ಯನಿರ್ವಾಹಕರು, ಸದಸ್ಯರ ಉಪಸ್ಥಿತಿಯಲ್ಲಿ ಸಾಂಗೋಪವಾಗಿ ನೆರವೇರಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು