LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"ಪ್ರೇಮಂ ಮಧುರಂ ಪ್ರೇಮಂ ಅಮರಂ"

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಪ್ರೇಮಂ ಮಧುರಂ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ರೂಬಿ ಕ್ರಿಯೇಶನ್ಸ್ ಅಡಿಯಲ್ಲಿ ಅರಗೊಂಡ ಶೇಖರ್‌ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಗಾಂಧಿ.ಎ.ಬಿ ಸಿನಿಮಾಕ್ಕೆ ಕಥೆ, ನಿರ್ದೇಶನಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ನಾಯಕಿಯರಾದ ಐಶ್ವರ್ಯ ದಿನೇಶ್, ಅನುಷಾ ಜೈನ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ತಾರಾಗಣದಲ್ಲಿ ಸಿಹಿಕಹಿಚಂದ್ರು, ರಾಜೇಶ್ವರಿ, ಲಪಂಗ್‌ರಾಜ, ಅನೂಪ್ ಅಗಸ್ತ್ಯ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ವಿಶಾಲ್ ಆಲಾಪ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮಂಜುನಾಥ ಹೆಗಡೆ, ಸಂಕಲನ ಸಂಜೀವ್ ಜಾಗಿರ್‌ದಾರ್, ಹಿನ್ನಲೆ ಶಬ್ದಶ್ರೀಮಾನ್ ಗಂಧರ್ವ, ನೃತ್ಯ ಮನೀಷ್ ಕೇಶವ್,ಲೋಕೇಶ್ ಅರ್ಜುನ್, ರಾಂಕುಮಾರ್.ಡಿ, ಗೌತಂ ಸೆಲ್ವರಾಜ್ ಅವರದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಹೊಸ ಪ್ರತಿಭೆಗಳು ಹುಟ್ಟಬೇಕು. ಆಮೇಲೆ ನೀವುಗಳು ಕನಿಷ್ಟ ಹತ್ತು ಪ್ರತಿಭೆಗಳನ್ನು ಮೇಲಕ್ಕೆ ತರಬೇಕು ಅಂತ ಷರತ್ತು ಹಾಕಿ
ನಿರ್ಮಾಪಕರು ಬಂಡವಾಳ ಹೂಡಿದರು. ಹಲವು ನಿರ್ದೇಶಕರಗಳ ಬಳಿ ಕೆಲಸ ಕಲಿತು, ಪೂನ ಫಿಲಂ ಇನ್ಸಿಟ್ಯೂಟ್‌ದಲ್ಲಿ ತರಭೇತಿ ಪಡೆದಿದ್ದೇನೆ. ಸಿನಿಮಾವು ಪ್ರಸಕ್ತ ಯುವಜನತೆಗೆ ಕನೆಕ್ಟ್ ಆಗುವಂತೆ ಸನ್ನಿವೇಶಗಳು ಇರುತ್ತದೆ. ಪ್ರತಿಯೊಬ್ಬರ ಬದುಕಲ್ಲಿ ಪ್ರೀತಿ ಯಶಸ್ಸು, ಇಲ್ಲವೆ ಸೋತಿರುತ್ತದೆ. ಅವರೆಲ್ಲರಿಗೂ ಇದು ಅನ್ವಯವಾಗುತ್ತದೆ. ಹೊಸದಾಗಿ ಏನನ್ನು
ಹೇಳಲಿಕ್ಕೆ ಹೋಗಿಲ್ಲ. ಸ್ಕೂಲ್, ಕಾಲೇಜ್‌ದಲ್ಲಿ ನಾನು ಅನುಭವಿಸಿದಂತ, ಕಂಡಂತ ಒಂದಷ್ಟುಅಂಶಗಳನ್ನು ಚಿತ್ರರೂಪಕ್ಕೆ ತರಲಾಗಿದೆ. ಮೂರು ಹಂತಗಳಲ್ಲಿ ಪ್ರೀತಿ ಹೇಗಿರುತ್ತೆ ಎಂಬುದನ್ನು ತೋರಿಸಲಾಗಿದೆ.

ಬೆಂಗಳೂರು, ಮಂಗಳೂರು, ಬೈಂದೂರು, ಉಡುಪಿ ಕಾಲ್ತೋಡು, ಮಲ್ಪೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕಾಸು ಕೊಟ್ಟು ಬರುವ ಪ್ರೇಕ್ಷಕನಿಗೆ ಸಂಪೂರ್ಣ ಮನರಂಜನೆ ಕೊಡಲಿದೆ. ಚುಂಬನ ದೃಶ್ಯದಲ್ಲಿ ಪ್ಯಾನಿಕ್ ಆಗಿದ್ದೆ ಎಂದು ಮಾಧ್ಯಮದ ಪ್ರಶ್ನೆಗೆ ಗಾಂಧಿ.ಎ.ಬಿ ಉತ್ತರವಾದರು. ಬಾಗೂರು ಟಾಕೀಸ್ ಸಂಸ್ಥೆಯು ಇದೇ ತಿಂಗಳಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು