LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಭರವಸೆಯ ಕಲಾವಿದೆ ತುಷಾರಳ ರಂಗಪ್ರವೇಶ

ಶಾಸ್ತ್ರೀಯ ನೃತ್ಯಕ್ಷೇತ್ರದಲ್ಲಿ ವಿದುಷಿ. ಸರಿತಾ ಪ್ರಸಾದ್ ಕೊಟ್ಟಾರಿ ಉತ್ತಮ ಭರತನಾಟ್ಯ ಕಲಾವಿದೆ ಹಾಗೂ ದಕ್ಷ ಗುರುಗಳಾಗಿ ಹೆಸರು ಮಾಡಿದ್ದಾರೆ. `ಚಿಗುರು ನೃತ್ಯಾಲಯ'ದ ಸ್ಥಾಪಕಿ. ತಮ್ಮ ಶಿಷ್ಯರ ಬೆಳವಣಿಗೆಗೆ ಪೂರಕವಾಗುವಂತೆ ನಾಡಿನಾದ್ಯಂತ ಅನೇಕ ವೇದಿಕೆಗಳನ್ನು ಒದಗಿಸಿ ಉದಯೋನ್ಮುಖ ಕಲಾವಿದರ ಪ್ರತಿಭೆಯನ್ನು ಬೆಳೆಸುತ್ತಿರುವ ಪ್ರಗತಿಪರ ಮನೋಭಾವದ ಮಾರ್ಗದರ್ಶಕಿ ಕೂಡ.

ಇವರ ನುರಿತ ಗರಡಿಯಲ್ಲಿ ತಯಾರಾಗುತ್ತಿರುವ ಭರವಸೆಯ ಪ್ರತಿಭೆ ಕೆ.ಎ.ತುಷಾರ ಶ್ರೀ ಕಮಲೇಶ್ ಮತ್ತು ನಂದಾ ಅವರ ಪುತ್ರಿ. ನೃತ್ಯದ ಬಗ್ಗೆ ಅಪಾರ ಆಸಕ್ತಿಯುಳ್ಳ ಹನ್ನೆರಡು ವರ್ಷದ ಈ ಬಾಲಪ್ರತಿಭೆ ಇದೇ ತಿಂಗಳ 18 ಶನಿವಾರ ಸಂಜೆ 5 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳಲಿದ್ದಾಳೆ.

ಅವಳ ಸುಂದರ ನರ್ತನ ವಲ್ಲರಿಯನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸುಸ್ವಾಗತ.ಪುಟ್ಟಬಾಲಕಿ ತುಷಾರಳಿಗೆ ಬಾಲ್ಯದಿಂದಲೂ ನೃತ್ಯ ಎಂದರೆ ಅತೀವ ಆಸಕ್ತಿ. ಸಾಂಸ್ಕೃತಿಕ ಕುಟುಂಬದ ವಾತಾವರಣ. ಗಾಯನ-ನರ್ತನದಲ್ಲಿ ಆಸಕ್ತಿ ತೋರಿದ ಮಗಳ ಪ್ರತಿಭೆಗೆ ತಂದೆ ಕಮಲೇಶ್ ಮತ್ತು ತಾಯಿ ನಂದಾ ಸಂಪೂರ್ಣ ಬೆಂಬಲ ನೀಡಿ, ನುರಿತ ನೃತ್ಯಗುರು ಸರಿತಾ ಪ್ರಸಾದ್ ಅವರಲ್ಲಿ ಅವಳ ಆರನೆಯ ವಯಸ್ಸಿಗೇ ನೃತ್ಯಶಾಲೆಗೆ ಸೇರಿಸಿದರು. ತುಷಾರ ಬಾಲಪ್ರತಿಭೆ. ಚುರುಕು ಮೇಧಾಶಕ್ತಿ. ಅತ್ಯಾಸಕ್ತಿ-ಪರಿಶ್ರಮದಿಂದ ಬಹು ಬೇಗ ನೃತ್ಯ ಕಲಿಕೆಯಲ್ಲಿ ಪ್ರಗತಿ ಸಾಧಿಸಿದಳು.

`ಚಿಗುರು ನೃತ್ಯಾಲಯ'ದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ನೃತ್ಯಪ್ರತಿಭೆಯನ್ನು ಪ್ರಕಾಶಿಸಿದಳು. ಬೆಂಗಳೂರಿನ ದಕ್ಷಿಣ `ಡೆಲ್ಲಿ ಪಬ್ಲಿಕ್ ಶಾಲೆ'ಯಲ್ಲಿ 8 ನೆಯ ತರಗತಿಯಲ್ಲಿ ಓದುತ್ತಿರುವ ಇವಳು ಓದಿನಲ್ಲಿ ಬುದ್ಧಿವಂತೆ ಮಾತ್ರವಲ್ಲದೆ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದು. ಅನೇಕ ಬಹುಮಾನಗಳನ್ನು ಪಡೆದಿರುವ ಇವಳು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದು, ತಾನೇ ಹಾಡುಗಳನ್ನು ರಚಿಸಿ ಹಾಡಬಲ್ಲಳು ಕೂಡ. ಸ್ಕೇಟಿಂಗ್, ಸ್ವಿಮ್ಮಿಂಗ್ ಮತ್ತು ಯೋಗದಲ್ಲೂ ಪರಿಶ್ರಮ ಹೊಂದಿರುವುದು ಇವಳ ಅಗ್ಗಳಿಕೆ.

ಕು.ತುಷಾರಳ ಹೆಜ್ಜೆ-ಗೆಜ್ಜೆಗಳ ಕಲಿಕೆಗೆ ನಿರ್ವ್ಯಾಜ ಅಂತಃಕರಣದಿಂದ ವಿದ್ಯಾಧಾರೆ ಎರೆಯುತ್ತಿರುವ ಗುರು ಸರಿತಾ ಅವರ ಗುರು ಪರಂಪರೆಯ ಜ್ಞಾನ-ವಿದ್ಯಾರ್ಜನೆ- ಸರಳ ಸ್ವಭಾವ ಕಾರಣವಾದರೆ, ತುಷಾರಳ ಹೆತ್ತವರ, ಪ್ರತಿಭಾ ಪೋಷಣೆಯ ನಿರ್ಮಲ ಕಲಾಪ್ರೀತಿ- ನಿಷ್ಠೆ -ಕಾಳಜಿಗಳು ಅವಳ ಉತ್ಸಾಹ ಕಾರಂಜಿಯ ಹಿಂದಿನ ಶಕ್ತಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು