LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮುಂಬೈ ಇಂಡಿಯನ್ಸ್ಗೆ ಪಂಜಾಬ್ ಕಿಂಗ್ಸ್ ಸವಾಲು

ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಏಪ್ರಿಲ್ 16ರ ಗುರುವಾರದಂದು ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಲಯಕ್ಕೆ ಮರಳುವ ತವಕದಲ್ಲಿ ಇದೆ. ಆದರೆ ಫಾರ್ಮ್ ನಲ್ಲಿರುವ ತಂಡದ ಪ್ರಮುಖ ಬ್ಯಾಟರ್ ರೋಹಿತ್ ಶರ್ಮಾ ಅವರು ಗಾಯಗೊಂಡಿರುವ ಕಾರಣ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗಿದೆ.ಸೀಸನ್ ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಮುಂಬೈ ತಂಡ ಬಳಿಕ ಆಡಿದ ಮೂರು ಪಂದ್ಯಗಳಲ್ಲೂ ಪರಾಭವ ಅನುಭವಿಸಿದೆ. ಮುಖ್ಯವಾಗಿ ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್ ಪಡೆಯಲು ಬೌಲರ್‌ಗಳು ವಿಫಲರಾಗುತ್ತಿರುವುದು ಮತ್ತು ಜಸ್‌ಪ್ರಿತ್ ಬುಮ್ರಾ ಅವರ ವಿಕೆಟ್ ಪಡೆಯಲು ಪರದಾಡುತ್ತಿರುವುದು ತಂಡದ ಹಿನ್ನೆಡೆಗೆ ಕಾರಣವಾರಿದೆ.ಬ್ಯಾಟಿಂಗ್‌ನಲ್ಲೂ ಆರಂಭಿಕ ಓವರ್‌ಗಳಲ್ಲಿ ರನ್ ವೇಗ ಕುಂಠಿತವಾಗುತ್ತಿರುವುದರಿಂದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಏತನ್ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಹಿರಿಯ ಆಟಗಾರ ರೋಹಿತ್ ಶರ್ಮಾ ಅವರು ಮುಂದಿನೆರಡು ಪಂದ್ಯಗಳಿಗೆ ಅನುಮಾನ ಎಂದೇ ವರದಿಯಾಗಿದೆ. ಇದು ಹೌದಾಗಿದ್ದರೆ ಮುಂಬೈ ತಂಡಕ್ಕೆ ದೊಡ್ಡ ಹೊಡೆತವಾಗಲಿದೆ.ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಉತ್ತಮ ಲಯದಲ್ಲಿದ್ದು ಆಡಿರುವ 4 ಪಂದ್ಯಗಳಲ್ಲಿ 3ನ್ನು ಗೆದ್ದು 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ.ಹೇಗಿದೆ ಪಿಚ್?ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿರುವ ಪಿಚ್ ಬ್ಯಾಟಿಂಗ್ ಸ್ವರ್ಗ ಎಂದು ವಿಶ್ವಪ್ರಸಿದ್ಧ. ಇನ್ನು ಟಿ20 ಗೆ ಬಂದಾಗಲAತೂ ಹೇಳಲೇ ಬೇಕಿಲ್ಲ. ಭಾರತದ ಕ್ರೀಡಾಂಗಣಗಳಲ್ಲೇ ಅತ್ಯಂತ ಕಿರಿಯ ಬೌಂಡರಿ ಹೊಂದಿರುವ ಈ ಮೈದಾನದಲ್ಲಿ ಸಿಕ್ಸರ್ ಗಳನ್ನು ನೀರು ಕುಡಿದಷ್ಟು ಸುಲಭದಲ್ಲಿ ಹೊಡೆಯಬಹುದು. ಜೊತೆಗೆ ಮೈದಾನದ ಹೊರಾಂಗಣ ಸಹ ವೇಗವಾಗಿರುವುದರಿಂದ ಬ್ಯಾಟಿಗೆ ತಗಲಿದ ಚೆಂಡು ಬೌಂಡರಿ ಗೆರೆ ದಾಟಲು ಹೆಚ್ಚು ಸಮಯ ತಗಲುವುದಿಲ್ಲ. ಐಪಿಎಲ್ 2026 ರಲ್ಲಿ ಇಲ್ಲಿ ನಡೆದಿರುವ ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್ಗಳಲ್ಲಿಯೂ ತಂಡಗಳು 220 ರನ್‌ಗಳ ಗಡಿಯನ್ನು ದಾಟಿದ್ದೇ ಈ ಪಿಚ್ ನ ತಾಕತ್ತಿಗೆ ಸಾಕ್ಷಿ. ಹೀಗಾಗಿ ಗುರುವಾರವೂ ಒಂದು ಹೈ ಸ್ಕೋರಿಂಗ್ ಪುಂದ್ಯ ನಡೆಯಬಹುದು ಎಂಬ ನಿರೀಕ್ಷೆ ಇದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು