LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಇಂದ್ರ ಲೋಕದ ಚಂದ್ರಿಕೆಯಂತೆ ಕಂಡ ರಾಗಿಣಿ

ಇಂದ್ರ ಲೋಕಕ್ಕೆ ರಾಗಿಣಿ ಈಗ ಪಟ್ಟದರಸಿ
ಹಾಡುಗಳನ್ನ ಕೇಳ್ತಾ ಇದ್ದರೆ ಮನಸ್ಸಿಗೆ ಮುದ ನೀಡಬೇಕು, ಕಿವಿಗೆ ಹಿತ ವೆನಿಸಬೇಕು. ಆ ರೀತಿ ಇರಬೇಕು ಸಾಹಿತ್ಯ. ಅಷ್ಟು ಇಂಪಾದ ಸಾಹಿತ್ಯವನ್ನ ನೀಡಿರೋದು ಮದನಿಕ ಚಿತ್ರತಂಡ. ಹೌದು ಮದನಿಕ ಸಿನಿಮಾದಿಂದ ಕಾನನಗಳ ಕನ್ನಿಕಾ, ಇಂದ್ರಲೋಕ ಚಂದ್ರಿಕಾ, ಪಟ್ಟದರಸಿಯಾದಳೀಗಾ ಮದನಿಕ ಎಂಬ ಹಾಡು ರಿಲೀಸ್ ಆಗಿದೆ. ಈ ಹಾಡಲ್ಲಿ ರಾಗಿಣಿ ದ್ವಿವೇದಿ ಅಪ್ಸರೆಯಂತೆ ಕಾಣಿಸ್ತಾ ಇದ್ದಾರೆ. ಗೊಂಬೆಗಳಂತೆ ಈ ಹಾಡಿನಲ್ಲಿ ರಾಜ-ರಾಣಿ, ಸೇವಕಿಯರನ್ನ ಸೃಷ್ಟಿ ಮಾಡಲಾಗಿದೆ. ರಾಜನಂತೆ ದೇವ್ ಗಿಲ್ ಕಾಣಿಸಿಕೊಂಡಿದ್ದಾರೆ. ಅರಮನೆಯ ಬ್ಯಾಕ್ ಡ್ರಾಪ್ ನಲ್ಲಿ ಹಾಡನ್ನ ಶೂಟ್ ಮಾಡಲಾಗಿದೆ. ದೇವಲೋಕದ ಸೃಷ್ಟಿಯಂತೆ ಕಣ್ಣಿಗೆ ಸುಂದರವಾಗಿ ಈ ಹಾಡಿನ ದೃಶ್ಯ ಮೂಡಿ ಬಂದಿದೆ.
ಈ ಹಾಡಿನ ಸಾಹಿತ್ಯವನ್ನು ಬರೆದವರು ಕೆ ಕಲ್ಯಾಣ್ ಅವರು. ಅದ್ಭುತ ಮ್ಯೂಸಿಕ್ ನೀಡಿದವರು ಸಲಾಮ್ ವಿರೋಲಿ. ಹಾಗೇ ಇಷ್ಟು ಸುಂದರ ಪದಗಳಿಗೆ ಧ್ವನಿಯಾದವರು ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್. ಹಾಡು ಇಷ್ಟು ಅದ್ಭುತವಾಗಿ ನಾಟುವುದಕ್ಕೆ ಈ ಧ್ವನಿಯೂ ಕಾರಣವಾಗಿದೆ. ಡಿಬೀಟ್ ಮ್ಯೂಸಿಕ್ ವರ್ಲ್್ಡ ನಲ್ಲಿ ಹಾಡು ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ.
`ಎಸ್.ಪಿ.ಆರ್ ಪ್ರೊಡಕ್ಷನ್ಸ್' ಮತ್ತು `ಸಖರ್ಥ್ ಡಿಜಿಟಲ್ ಹೌಸ್' ಬ್ಯಾನರಿನಲ್ಲಿ ಸುಜಾತ ಲಕ್ಷ್ಮೀ, ಕುಮಾರಸ್ವಾಮಿ `ಮದನಿಕ' ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಬಿ. ಎಸ್. ಸಂಜಯ್ ನಿರ್ದೇಶನವಿದ್ದು, ಧರ್ಮ ಕೀರ್ತಿರಾಜ್, ದೇವ್ ಗಿಲ್, ಹರೀಶ್ ರಾಜ್, ರಾಜ್ವಿ, ಶಶಿಕುಮಾರ್ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆರ್. ಗಿರಿ ಛಾಯಾಗ್ರಹಣ, ಚಿತ್ರದಲ್ಲಿ ಒಟ್ಟು ಹತ್ತು ಹಾಡುಗಳಿದ್ದು ಶಾಸ್ತ್ರೀಯ ಶೈಲಿಯಲ್ಲಿರುವ ಈ ಹಾಡುಗಳಿಗೆ ಸಲಾಂ ವೇರೋಲಿ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್, ಡಾ. ದೇವಾನಂದ್ ಮೊದಲಾದವರು ಸಾಹಿತ್ಯ ಒದಗಿಸಿದ್ದಾರೆ. ಮದನ್ ಹರಿಣಿ, ತ್ರಿಭುವನ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು