LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ರಾಜಾ ವೆಂಕಟಪ್ಪ ನಾಯಕ ಅಜಾತ ಶತ್ರು: ಡಿಕೆ ಗುಣಗಾನ

ಬೆಂಗಳೂರು: "ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ತಾಲೂಕಿನ ಶಾಸಕರಾಗಿದ್ದ ದಿವಂಗತ ರಾಜಾ ವೆಂಕಟಪ್ಪ ನಾಯಕ ಅವರು ಅಜಾತ ಶತ್ರು ಹಾಗೂ ಆದರ್ಶ ವ್ಯಕ್ತಿತ್ವ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದರು.ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ವೇಳೆ ಮಾತನಾಡಿದ ಅವರು, "ರಾಜಾ ವೆಂಕಟಪ್ಪ ನಾಯಕ ಅವರು ನನಗೆ 1987ರಿಂದ ಪರಿಚಯ.

ನಾನು ಗ್ರಾನೈಟ್ ವ್ಯವಹಾರ ಮಾಡುತ್ತಿದ್ದಾಗ ಅವರು ತಮ್ಮ ಸ್ನೇಹಿತರೊಂದಿಗೆ ನಮ್ಮ ಊರಿಗೆ ಬಂದಿದ್ದರು. ನಮ್ಮನ್ನು ಅವರ ಊರಿಗೆ ಕರೆದುಕೊಂಡು ಹೋಗಿ ಅಲ್ಲಿನ ಭಾಗದ ಕಲ್ಲಿನ ಬಗ್ಗೆ ತೋರಿಸಿದ್ದರು.ಆ ಸಂದರ್ಭದಲ್ಲಿ ನಾನು ಅವರನ್ನು ಕೇಳಿದೆ.ನಾನು ಈಗಾಗಲೇ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದೇನೆ. ನೀವು ರಾಜ ಮನೆತನದವರು, ನಿಮ್ಮ ಕುಟುಂಬದವರು ಶಾಸಕರಾಗಿದ್ದಾರೆ.

ನೀವು ಯಾಕೆ ಇನ್ನು ಸ್ಪರ್ಧೆ ಮಾಡಿಲ್ಲ ಎಂದು ಕೇಳಿದೆ. ನಂತರ ಅವರು 1994ರಲ್ಲಿ ಸ್ಪರ್ಧಿಸಿ, ನಮ್ಮ ಜತೆ ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಯಾವುದೇ ರಾಜ ಸದಾ ರಾಜನಾಗಿ, ಯಾವುದೇ ಶ್ರೀಮಂತ ಸದಾ ಶ್ರೀಮಂತನಾಗಿ, ಯಾವುದೇ ಬಡವ ಸದಾ ಬಡವನಾಗಿ ಇರಲು ಸಾಧ್ಯವಿಲ್ಲ. ಯಾರು ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು. ದೇವರು ನಮಗೆ ಕೊಟ್ಟಿರು
ವುದು ಶಾಶ್ವತವಲ್ಲ. ನಮ್ಮ ಸಂಬಂಧಗಳು ಮಾತ್ರ ಶಾಶ್ವತ.

ನಾಲ್ಕು ದಿನಗಳ ಹಿಂದೆ ನಾನು, ಜಿ.ಸಿ ಚಂದ್ರಶೇಖರ್, ಎಸ್ ಟಿ ಸೋಮಶೇಖರ್, ಶ್ರೀನಿವಾಸ್ ಅವರ ಜತೆಆಸ್ಪತ್ರೆಗೆ ಹೋಗಿ ರಾಜಾ ವೆಂಕಟಪ್ಪ ನಾಯಕ ಅವರ ಆರೋಗ್ಯ ವಿಚಾರಿಸಿ ಬಂದಿದ್ದೆ. ಅವರನ್ನುಐಸಿಯುನಿಂದ ಸಾಮಾನ್ಯ ವಾರ್ಡ್ ಗೆ ಕರೆತಂದಿದ್ದರು. ನಾನು ಖಾಸಗಿಯಾಗಿ ಅವರ ಜೊತೆ ಮಾತನಾಡಿದೆ. ಅವರು ಕಾಗದ ಮೇಲೆ ಬರೆದು ನನ್ನ ಜೊತೆ ಮಾತನಾಡಲು ಪ್ರಯತ್ನಿಸಿದರು. ರಾಜ್ಯ ಸಭೆ ಚುನಾವಣೆ ಬಗ್ಗೆ ಮಾತನಾಡಿದಾಗ, ಮತದಾನದ ವೇಳೆಗೆ ಬರುತ್ತೇನೆ ಎಂದು ಸನ್ನೆ ಮೂಲಕ ಹೇಳಿದರು.

ಅವರಿಂದ ಸಹಿ ಹಾಕಿಸಲು ಹೋದಾಗ ಅವರ ಸಹಿ ಸರಿಯಾಗಿ ಬರಲಿಲ್ಲ. ಆಗ ವೈದ್ಯರು ನಾವು ಪ್ರಮಾಣ ಪತ್ರ ನೀಡುತ್ತೇವೆ ಎಂದು ತಿಳಿಸಿದರು. ನಾನು ಅವರ ಕುಟುಂಬದ ಸದಸ್ಯರ ಜೊತೆ ಮಾತನಾಡಿದೆ.ನಾನು ನಿನ್ನೆ ಕಾರ್ಯಕ್ರಮದಲ್ಲಿ ಇದ್ದಾಗ ಅವರು ವಿಧಿವಶರಾದ ಬಗ್ಗೆ ಮಾಹಿತಿ ತಿಳಿಯಿತು. ಆಗ ನಾನು ತಕ್ಷಣ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದೆ. ರಾಜಕಾರಣ ಏನೇ ಇರಲಿ, ರಾಜಾ ವೆಂಕಟಪ್ಪ ನಾಯಕ ಅವರು ನಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಯಾರೊಬ್ಬರೂ ಹೇಳುವುದಿಲ್ಲ.

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ,ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನಎಂಬ ವಿವೇಕಾನಂದರ ಮಾತಿನಂತೆ ಅವರುಯಾವುದೇ ವೈರತ್ವ ಇಲ್ಲದೆ ಜೀವನ ಮಾಡಿದ್ದಾರೆ.ರಾಜಾ ವೆಂಕಟಪ್ಪ ಅವರ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿ ಕೂಡ ಹೃದಯಾಘಾತದಿಂದ ಮೃತರಾಗಿದ್ದಾರೆ.

ಆ ಕ್ಷೇತ್ರದಿಂದ ಬೇರೆ ಪಕ್ಷದವರು ಪಕ್ಷ ಸೇರುವ ಸನ್ನಿವೇಶ ಇತ್ತು. ಆಗ ಖರ್ಗೆ ಅವರು, ರಾಜಾ ವೆಂಕಟಪ್ಪ ನಾಯಕ ಅವರು ಉತ್ತಮ ವ್ಯಕ್ತಿತ್ವ ಹೊಂದಿದ್ದು ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿದರು. ಖರ್ಗೆ ಅವರುರಾಜಾ ವೆಂಕಟಪ್ಪ ಅವರಿಗೆ ರಾಜ್ಯ ಮಟ್ಟದ
ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡುವಂತೆಸೂಚಿಸಿದರು. ಸಂಸತ್‍ಚುನಾವಣೆಗೆ ಸಮೀಕ್ಷೆ ಮಾಡಿಸಿದಾಗ ರಾಜಾ ವೆಂಕಟಪ್ಪ ನಾಯಕ ಅವರು ಅಭ್ಯರ್ಥಿ ಆಗಬೇಕು ಎಂದು ವರದಿ ಬಂದಿತ್ತು.

ಆರೋಗ್ಯ ಸ್ಥಿತಿ ನೋಡಿ ನಾವು ಬೇರೆಯವರ ಬಗ್ಗೆ ಆಲೋಚನೆ ಮಾಡಿದೆವು.ದೇವರು ನಮಗೆ ಎರಡು ಆಯ್ಕೆ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ರಾಜಾ ವೆಂಕಟಪ್ಪ ನಾಯಕ ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ. ರಾಜಾ ವೆಂಕಟಪ್ಪ ನಾಯಕ ಅವರು ನಮ್ಮಿಂದ ದೂರವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು