LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸಾಯಿ ಪಲ್ಲವಿ ಅವಕಾಶ ಕಿತ್ತುಕೊಂಡ ರಶ್ಮಿಕಾ

ಸಂಗೀತ ಕ್ಷೇತ್ರದ ಖ್ಯಾತ ಗಾಯಕಿ ಎಂ.ಎಸ್ ಸುಬ್ಬಲಕ್ಷ್ಮೀ ಜೀವನಾಧಾರಿತ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ಸಾಯಿ ಪಲ್ಲವಿ ನಾಯಕಿ ಎಂದು ಹೇಳಲಾಗಿತ್ತು. ಸುಬ್ಬಲಕ್ಷ್ಮೀ ಪಾತ್ರ ಮಾಡುವುದಕ್ಕಾಗಿಯೇ ಸಾಯಿ ಪಲ್ಲವಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯಿತ್ತು. ಸುಬ್ಬಲಕ್ಷಿ÷್ಮ ಅವರು ಹಾಡಿದ ಪಾಪ್ಯುಲರ್ ಗೀತೆಗಳನ್ನು ಸಾಯಿ ಪಲ್ಲವಿ ಕಲಿಯುತ್ತಿದ್ದಾರೆ ಅಂತಾನೂ ಹೇಳಲಾಗಿತ್ತು. ಆದರೆ, ಈಗ ಪಾತ್ರಧಾರಿಯೇ ಬದಲಾವಣೆ ಆಗಿದೆಯಂತೆ. ಹೌದು ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಸುಬ್ಬಲಕ್ಷ್ಮೀ ಪಾತ್ರದಿಂದ ಸಾಯಿ ಪಲ್ಲವಿಯನ್ನು ಕೈಬಿಡಲಾಗಿದೆಯಂತೆ. ಆ ಜಾಗಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ ಅನ್ನೋದು ಹೊಸ ಸುದ್ದಿ. ಸಾಯಿ ಪಲ್ಲವಿಯನ್ನು ಕೈ ಬಿಡೋಕೆ ಕಾರಣ ಏನು? ಅನ್ನುವುದು ಈವರೆಗೂ ಗೊತ್ತಾಗಿಲ್ಲ. ಆದರೆ, ಈ ಸಿನಿಮಾದಿಂದ ಸಾಯಿ ಪಲ್ಲವಿ ಹೊರ ಬಂದಿದ್ದಾರೆ ಅನ್ನೋದು ನಿಜವಂತೆ ಸಾಯಿ ಪಲ್ಲವಿಯನ್ನು ಕೈ ಬಿಟ್ಟಿದ್ದು ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದ್ದು ಅಧಿಕೃತವಾಗಿ ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಸಿನಿಮಾ ರಂಗದಲ್ಲಿ ಮಾತ್ರ ಈ ಸುದ್ದಿ ಸಾಕಷ್ಟು ಸದ್ದು ಮಾಡಿದೆ. ಸಾಯಿ ಪಲ್ಲವಿಯಿಂದ ರಶ್ಮಿಕಾ ಅವಕಾಶ ಕಿತ್ತುಕೊಂಡಿದ್ದಾರೆ ಅಂತ ಚೆರ್ಚೆ ಶುರುವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST