LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Haveri

ಬಸ್‌ಗೆ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹನ ಡಿಕ್ಕಿ

ಹಾವೇರಿ: ಸರ್ಕಾರಿ ಬಸ್‌ಗೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಬೆಂಗಾವಲು ವಾಹನ ಗುದ್ದಿದ್ದು, ಎಸ್ಕಾರ್ಟ್ ವಾಹನದ ಮುಂಭಾಗವು ನುಜ್ಜುನುಜ್ಜಾದ ಘಟನೆ ಹಾವೇರಿಯಲ್ಲಿ ನಡೆದಿದೆ.ನಗರದ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದ ಕಡೆಗೆ ಹೊರಟ್ಡಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಎಸ್ಕಾರ್ಟ್ ವಾಹನದ ಚಾಲಕ ಚನ್ನಬಸಪ್ಪ ಅರ್ಚಕ್ ವಿರುದ್ಧ ದೂರು ದಾಖಲಾಗಿದೆ. ಅತೀವೇಗದ ಚಾಲನೆಯಿಂದ ಬಸ್‌ನ ಹಿಂಬದಿಗೆ ಗುದ್ದಿದ್ದಾನೆ ಎನ್ನಲಾಗಿದೆ. ಎಸ್ಕಾರ್ಟ್ ವಾಹನದ ಮುಂದಿನ ಭಾಗ ಮತ್ತು ಬಸ್ ನ ಹಿಂದಿನ ಭಾಗ ಸಂಪೂರ್ಣ ಹಾನಿಯಾಗಿದೆ. ಬಸ್ ಹಾವೇರಿಯಿಂದ ಗದಗ ಹೊರಟ್ಟಿದ್ದ ಬಸ್ ಎನ್ನಲಾಗಿದೆ. ಬಸ್ ಏಂ-27 ಈ0726 ಸಂಖ್ಯೆ ಬಸ್ ಗೆ ಹಿಂದಿನಿಂದ ವೇಗವಾಗಿ ಎಸ್ಕಾರ್ಟ್ ಡಿಕ್ಕಿ ಹೊಡೆದಿದ್ದಾನೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST