LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಶಾಖಾಹಾರಿ ಸಂಭ್ರಮ ರಂಗಾಯಣ ರಘುಗೆ ಸನ್ಮಾನ

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರಲ್ಲಿ ಒಬ್ಬರು ರಂಗಾಯಣ ರಘು. ಅವರ ಅಮೋಘ ಅಭಿನಯದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ವಿಶೇಷ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ರಂಗಾಯಣ ರಘು ಅವರೀಗ ಅಭಿನಯಾಸುರು ಎಂಬ ಬಿರುದು ನೀಡಿ ಗೌರವಿಸಲಾಗಿದೆ.

ಸಂದೀಪ್ ಸುಂಕದ್ ಚೊಚ್ಚಲ ಹೆಜ್ಜೆ ಶಾಖಾಹಾರಿ.. ಈ ಸಿನಿಮಾದಲ್ಲಿ ರಂಗಾಯಣ ರಘು ಗಂಭೀರ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸನ್ನದ್ಧರಾಗಿದ್ದಾರೆ. ಇದೇ ತಿಂಗಳ 16ರಂದು ಮಲೆನಾಡ ಸೊಗಡಿನ ಥ್ರಿಲ್ಲಿಂಗ್ ಕಥಾಹಂದರ ಶಾಖಾಹಾರಿ ಸಿನಿಮಾ ತೆರೆಗೆ ಬರ್ತಿದೆ. ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಅದರ ಭಾಗವೆಂಬಂತೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸುಕ್ಕ ಸೂರಿ ವಿಶೇಷ ಅಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಸಾಥ್ ಕೊಟ್ಟರು. ಇದೇ ವೇಳೆ ರಂಗಾಯಣ ರಘು ಅವರಿಗೆ ಶಾಖಾಹಾರಿ ಸಿನಿ ಬಳಗ ಅಭಿನಯಾಸುರು ಎಂಬ ಬಿರುದು ನೀಡಿ ಗೌರವಿಸಿತು. ಇಲ್ಲಿವರೆಗೂ ಯಾವುದೇ ಚಿತ್ರತಂಡ ಅವರಿಗೆ ಈ ರೀತಿ ಬಿರುದು ಕೊಟ್ಮೊದಲ ಬಾರಿಗೆ ಅವರ ಕಲಾಸೇವೆ ಚಿತ್ರತಂಡ ಈ ರೀತಿ ಗೌರವ ಸೂಚಿಸಿದೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ದುನಿಯಾ ಸೂರಿ ಮಾತನಾಡಿ, ನಾನು ಈ ರೀತಿ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ.

ನನ್ನ ನಿರ್ದೇಶಕ ಅಂತಾ ಕರೆಯುತ್ತಾರೆ ಎಂದರೆ. ಈ ಹಿಂದೆ ನಾವು ಯೋಗರಾಜ್ ಮಣಿ ಅಂತಾ ಸಿನಿಮಾ ಮಾಡಬೇಕಾದರೆ ರಘು ಸರ್ ಸಿಕ್ತಾರೆ. ನಮಗೆ ಅಲ್ಲಿಂದ ದೊಡ್ಮನೆ ಹುಡುಗ ಸಿನಿಮಾದವರೆಗೂ ಜೊತೆಯಲಿ ಇದ್ದರು. ಈ ನಡುವೆ ಅಣ್ಣ ಮಾಡುವ ಪಾತ್ರ ಇಲ್ಲ ಎಂದು ಬಿಟ್ಟುಕೊಡುತ್ತೇವೆ. ನಾನು ಒಂದು ವಿಷಯ ತೆಗೆದುಕೊಂಡು ಹೋದರೆ ಅದಕ್ಕೊಂದು ಹಿನ್ನೆಲೆ ಹೇಳಿ ಗಟ್ಟಿ ಮಾಡುತ್ತಾರೆ. ಯೋಗರಾಜ್, ಸರ್ ನಮಗೆ ಗುರು. ಅನುಭವ ಹೇಳ್ತಾರೆ, ಹೆದರಬೇಡ ಅಂತಾರೇ.

ನಾನು ಆಕ್ಷನ್ ಕಟ್ ಹೇಳಬಹುದು. ನಾನು ಇಂದು ಏನಾದ್ರೂ ಮಾಡಿದ್ದೇನೆ ಎಂದರೆ ಅದರಲ್ಲಿ ರಘು ಸರ್ ದ್ದೂ ದೊಡ್ಡ ಪಾಲು. ನಮ್ಮ ಬರವಣಿಗೆಯನ್ನು ಸ್ಕ್ರೀನ್ ಗೆ ತರುವುದು ಇದೆಯಲ್ಲ. ಅದಕ್ಕೆ ಕಲಾವಿದ ಜೀವ ತುಂಬಬೇಕು. ನನಗೆ ಅನಿಸುತ್ತದೆ ನಾವು ರಘು ಸರ್ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ? ಅನಿಸುತ್ತೆ ಎಂದರು.

ರಂಗಾಯಣ ರಘು ಮಾತನಾಡಿ, ನನ್ನ ಒಟ್ಟು ಜೀವನದಲ್ಲಿ ನನಗೆ ತುಂಬಾ ಅಮೂಲ್ಯ ನೆನಪು ಕೊಟ್ಟಂತಹವರು ಸೂರಿ ಅವರು ಹಾಗೂ ಅಶ್ವಿನಿ ಮೇಡಂ. ನಾನು ಇಂಡಸ್ಟ್ರೀ?ಗೆ ಬಂದು ಸುಮಾರು 35 ವರ್ಷವಾಯ್ತು. ನಾನು ಒಂದ ಸಿನಿಮಾಗೋಸ್ಕರ ಬಂದವನು. 94 ರಿಂದ 2001ರವೆಗೆ ನಾನು ಮಾಡಿದ ಸಿನಿಮಾಗಳ ಬಗ್ಗೆ ಊರಲೆಲ್ಲಾ ಹಾಗೇ ಮಾಡಿದ್ದೇನೆ. ಹೀಗೆ ಮಾಡಿದ್ದೇನೆ ಹೇಳಿಕೊಂಡು ಬರುತ್ತಿದ್ದೆ. ರಂಗಾಯಣದ ಬಗ್ಗೆ ನಾನು ಎಷ್ಟು ನೆನಪು ಮಾಡಿಕೊಂಡರೇ ಸಾಲದು ಎಂದರು.

ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ಈ ರೀತಿ ಕಥೆಯನ್ನು ಪ್ರೊಡ್ಯೂಸರ್ ಮಾಡೋದಕ್ಕೆ ಧೈರ್ಯ ಬೇಕು. ಒಂದು ಸಾಹಿತ್ಯದ ಹಿನ್ನೆಲೆ ಬೇಕು. ಅಷ್ಟೇ ಪ್ರಬಲ ಪ್ರಜ್ಞೆ ಬೇಕು. ಬ್ಯುಸಿನೆಸ್ ಮೈಡ್ ಸೆಟ್ ಬೇಕು. ಎಲ್ಲಾ ತರಹದ ಅನುಕೂಲ ಕಲ್ಪಿಸಿಕೊಟ್ಟು, ಅಷ್ಟೇ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಯಾವುದೇ ಟೈಮ್ ನಲ್ಲಿಯೂ ಇಲ್ಲ ಅಂದಿಲ್ಲ. ಬಜೆಟ್ ಹೆಚ್ಚು ಕಮ್ಮಿಯಾದ್ರೂ ಯಾವುದೇ ಅಡ್ಡಿ ಆತಂಕ ತೆಗೆದುಕೊಳ್ಳದೇ ಫ್ರೀಡಂ ಕೊಟ್ಟಿದ್ದಾರೆ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು