LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸುದೀಪ್ ಜೊತೆ ಕೈ ಜೋಡಿಸಿದ ಸಂದೇಶ್ ನಾಗರಾಜ್?

ಒಂದ್ಕಾಲದಲ್ಲಿ ದರ್ಶನ್ ಮತ್ತು ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ನಡುವೆ ಅವಿನಾಭಾವ ಸಂಬಂಧ ಇತ್ತು. ಸ್ನೇಹಕ್ಕೂ ಮೀರಿದ್ದ ಆತ್ಮೀಯವಾದ ಸಂಬಂಧ ಅದು. ಪ್ರಿನ್ಸ್ .. ಮಿಸ್ಟರ್ ಐರಾವತ .. ಒಡೆಯ .. ಇದೇ ಸಂಬಂಧಕ್ಕೆ ಹಿಡಿದ ಕೈಗನ್ನಡಿ. ಆದರೆ, 2021ರ ಆಚೀಚೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‍ನಲ್ಲಿ ನಡೆದ ಗಲಾಟೆಯ ನಂತರ ಸಂಬಂಧದಲ್ಲಿ ಬಿರುಕು ಕಂಡು ಬಂತು.

ಇದಕ್ಕೆ ಪೂರಕವಾಗಿ ಆ ನಂತರ ಸಂದೇಶ್ ನಾಗರಾಜ್ ಅವರ ಜೊತೆ ದರ್ಶನ್ ಕಾಣಿಸಿಕೊಂಡಿಲ್ಲ. ದರ್ಶನ್ ಅವರ ಜೊತೆ ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ಜೊತೆ ಕೂಡ ಕಾಣಿಸಿಕೊಳ್ಳಲಿಲ್ಲ.ಗಲಾಟೆ-ಗದ್ದಲದ ನಂತರ ಅವರ ಅವರ ಜೀವನದಲ್ಲಿ ಇಬ್ಬರು ಬ್ಯುಸಿಯಾದರು. ರಾಬರ್ಟ್, ಕ್ರಾಂತಿ, ಕಾಟೇರ, ಹೀಗೆ ದರ್ಶನ್.. ಒಂದಾದ ಮೇಲೊಂದು ಸಿನಿಮಾ ಮಾಡಿದರೆ,

ಸಂದೇಶ್ ನಾಗರಾಜ್ ಘೋಸ್ಟ್ ಸಿನಿಮಾವನ್ನ ನಿರ್ಮಾಣ ಮಾಡಿದರು. ಹೀಗೆ ಕವಲೊಡೆದ ದಾರಿಯಲ್ಲಿಒಂದೊಂದು ದಿಕ್ಕಿನ ಕಡೆ ಹೊರಟ ಇಬ್ಬರಲ್ಲಿ, ಸಂದೇಶ್ ನಾಗರಾಜ್ ಇದೀಗ ಸುದೀಪ ಅವರ ಸಮೀಪ ಬಂದಿದ್ದಾರೆ. ಇದಕ್ಕೆ ಸಾಕ್ಷಿ ಅನ್ನುವಂತೆ ಚೆನೈನಲ್ಲಿ ಮ್ಯಾಕ್ಸ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಂದೇಶ್ ನಾಗರಾಜ್ ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಿದ್ದಾರೆ. ಚಿತ್ರವೊಂದರ ಕುರಿತು ಮಾತುಕಥೆಯನ್ನೂ ನಡೆಸಿದ್ದಾರೆ.

ಎಲ್ಲವೂ ಅಂದುಕೊಂಡತೆ ಆದರೆ ಸಂದೇಶ್ ನಾಗರಾಜ್, ಸದ್ಯದಲ್ಲಿಯೇ ಸುದೀಪ್ ಅವರ ಚಿತ್ರವನ್ನ ಘೋಷಿಸುವ ಸಾಧ್ಯತೆ ಇದೆ. ಆ ಚಿತ್ರಕ್ಕೆ ಸಂದೇಶ್ ನಾಗರಾಜ್ ಪೂರ್ಣ ಪ್ರಮಾಣದ ನಿರ್ಮಾಪಕರಾದರು ಆಗಬಹುದು ಅಥವಾ ನಿರ್ಮಾಪಕರಲ್ಲಿ ಒಬ್ಬರಾದರು ಆಗಬಹುದು, ಮಹತ್ವಕಾಂಕ್ಷೆಯ ಈ ಚಿತ್ರಕ್ಕೆ ಸಂದೇಶ್ ನಾಗರಾಜ್ ಬೇರೆ ನಿರ್ಮಾಪಕರ ಜೊತೆ ಕೈ ಜೋಡಿಸಿದರು ಜೋಡಿಸಬಹುದು.

ಆ ಸಾಧ್ಯತೆಯೂ ಇದೆ ಅನ್ನುವುದು ಸದ್ಯಕ್ಕೆ ಗಾಂಧಿನಗರದ ತುಂಬೆಲ್ಲ ಕೇಳಿ ಬರುತ್ತಿರುವ ಮಾತು.Anil Kumble  ಇಂದ್ರಜಿತ್ ಲಂಕೇಶ್ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಇನ್ನೂ.. ಸುದೀಪ್ ಮತ್ತು ಸಂದೇಶ್ ನಾಗರಾಜ್ ಸಂಗಮದಲ್ಲಿ ಮೂಡಿ ಬರಲಿರುವ ಈ ಚಿತ್ರ ಸೆಟ್ಟೇರುವುದು ಯಾವಾಗ ಅನ್ನುವ ಸಹಜವಾದ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಹೇಳುವುದು ಕಷ್ಟ. ಯಾಕೆಂದರೆ ಸುದೀಪ್ ಸದ್ಯಕ್ಕೆ ಮ್ಯಾಕ್ಸ್ ಚಿತ್ರದ ಚಿತ್ರೀಕರಣವನ್ನ ಮ್ಯಾಕ್ಸಿಮಮ್ ಸ್ಪೀಡ್‍ನಲ್ಲಿ ಮಾಡ್ತಿದ್ದಾರೆ. ಇನ್ನೂ ಇದಾದ ಬೆನ್ನಲ್ಲಿಯೇ ಚೇರನ್ ಸಿನಿಮಾ ಶುರುವಾಗಲಿದೆ.

ಆ ನಂತರ ಸರತಿ ಸಾಲಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಆರ್.ಚಂದ್ರು ಕೂಡ ಇದ್ದಾರೆ. ಅನೂಪ್ ಭಂಡಾರಿ ಕೂಡ ಇದ್ದಾರೆ. ಇದರ ನಡುವೆ.. ಸುದೀಪ್ ನಿರ್ದೇಶಕನಾಗಿಯೂ ಕಣಕ್ಕಿಳಿಯಬೇಕಿದೆ. ಇನ್ನೂ ಇತ್ತ ಸಂದೇಶ್ ನಾಗರಾಜ್ ಅವರ ನಿರ್ಮಾಣ ಸಂಸ್ಥೆ ಸೃಜನ್ ಲೊಕೇಶ್ ನಿರ್ದೇಶನದ ಚೊಚ್ಚಲ ಚಿತ್ರ ಜಿಎಸ್‍ಟಿ ಚಿತ್ರವನ್ನ ನಿರ್ಮಾಣ ಮಾಡ್ತಿದೆ. ಮತ್ತೊಂದು ಕಡೆ ಬೀರಬಲ್ 2 ಚಿತ್ರದ ಆಲೋಚನೆ ಕೂಡ ಇದೆ. ಈ ಎಲ್ಲ ಕಮ್ಮಿಟ್ಮೆಂಟ್‍ಗಳನ್ನ ಇಬ್ಬರು ಮುಗಿಸಿದ ನಂತರವಷ್ಟೇ ಈ ಚಿತ್ರ ಆರಂಭವಾಗಬಹುದು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು