LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

`ಸನ್ಮಾರ್ಗದ ದುಂಬಿ' ಪುಸ್ತಕ ವಿಮರ್ಶೆ

ಇತ್ತೀಚೆಗೆ ತುಮಕೂರು ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಬಿಡುಗಡೆಯಾದ ಪುಸ್ತಕ ಆತ್ಮೀಯರಾದ ಸಹೋದರ ಶ್ರೀ ಮುತ್ತು ಸರ್ ರವರು ರಚಿಸಿದ ಕವನ ಸಂಕಲನ ‘ಸನ್ಮಾರ್ಗದ ದುಂಬಿ’.ಅತ್ಯAತ ಸರಳವಾಗಿ ಬಿಡುಗೊಡೆಗೊಳಿಸಿದ್ದು ಎಲ್ಲರಿಗೂ ಇದೊಂದು ಮಾದರಿ.
ಮನುಷ್ಯನ ಅಂತರAಗದ ಭಾವನೆಯನ್ನು ವ್ಯಕ್ತಪಡಿಸುವ ಸಾಧನಗಳು ಈ ಕವನ ಸಂಕಲನಗಳು.ಸನ್ಮಾರ್ಗದ ದುಂಬಿ ಕವನ ಸಂಕಲನದಲ್ಲಿ ೬೯ ಕವನಗಳಿದ್ದು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.ಮುತ್ತು ಸರ್ ರವರು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ.ಅವರಿಗೆ ಅಲ್ಲಿಂದಲೇ ಒಳ್ಳೆಯ ಮೌಲ್ಯಗಳನ್ನು ಕಲಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.
ಹೀಗಾಗಿ ಪ್ರಥಮವಾಗಿ ತಮ್ಮ ಆರಾಧ್ಯ ದೈವ ಸಿದ್ಧಗಂಗಾ ಶ್ರೀಗಳ ಕುರಿತು ಬರೆದ ಕವನ ಪ್ರಾರಂಭದಲ್ಲೇ ಭಕ್ತಿ ಭಾವದ ಸಿಂಚನವಾಗುತ್ತದೆ. ನಂತರ ಪರಿಸರದ ಕಾಳಜಿಯ ಬಗ್ಗೆ ತಿಳಿಸುತ್ತಾ ಸಾಲುಮರದ ತಿಮ್ಮಕ್ಕನವರನ್ನು ನೆನೆದಿದ್ದಾರೆ ಹತ್ತರ ಮಗುವೇ ಎಚ್ಚರವಾಗಿರು ಎಂಬ ಕವನದಲ್ಲಿ ಯಾವ ರೀತಿಯಾಗಿ ಮಕ್ಕಳು ಶಿಕ್ಷಣ ಕಲಿಯಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದಾರೆ.ಅನ್ನ ನೀಡುವ ಅನ್ನದಾತನ ಬಗ್ಗೆ ನಾವೆಲ್ಲರೂ ಕಾಳಜಿ ತೋರಬೇಕು ಎಂಬುದನ್ನು ಅರುಹಿದ್ದಾರೆ.
ತಂದೆ-ತಾಯಿಯರ ಬಗ್ಗೆ ವಿಶೇಷವಾಗಿ ಪ್ರೀತಿ ಕಾಳಜಿ ಗೌರವ ಪೂರ್ವಕವಾಗಿ ಬರೆದ ಕವನವಂತೂ ಮನಸ್ಸಿಗೆ ನಾಟುವಂತಿದೆ.ಹೆತ್ತವರನ್ನು ಎಂದಿಗೂ ನೋಯಿಸಬೇಡಿ ಎನ್ನುವ ಸಂದೇಶ ನೀಡಿದ್ದಾರೆ.ಜೊತೆಗೆ ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಕವನದಲ್ಲಿ ಕೂಡಿ ಬಾಳುವ ಸಂಸ್ಕöÈತಿಯನ್ನು ಕಲಿಸಿ ಕೊಟ್ಟಿದ್ದಾರೆ.ಸಮಯದ ಬಗ್ಗೆ ಬರೆಯುತ್ತಾ ಹೊತ್ತು ಹೋದರೆ ಮತ್ತೆ ಬಾರದು ಎಂಬಂತೆ ಅಮೂಲ್ಯ ಸಮಯವನ್ನು ಗೌರವಿಸಿ ಎಂಬ ಕಿವಿಮಾತನ್ನು ಹೇಳಿದ್ದಾರೆ.
ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ ಇವರು ಹೆಣ್ಣು ಸಮಾಜದ ಕಣ್ಣು ಎನ್ನುವ ಕವನದಲ್ಲಿ ಹೆಣ್ಣಿನ ಮನಸ್ಸಿಗೆ ನೋವು ಕೊಡಬೇಡಿ ಎನ್ನುವ ಮೌನ ಸಂದೇಶವಿದೆ.ಪಾಪ ತುಂಬಿದ ಈ ಲೋಕಕ್ಕೆ ಹೇ ಭಗವಂತ ಒಮ್ಮೆ ಧರೆಗೆ ಬಾ ಎನ್ನುವ ಪೂಜ್ಯ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೇಶ ಕಾಯುವ ಸೈನಿಕರಿಗೆ, ಗುರುಗಳಿಗೆ ಕೃತಜ್ಞತಾ ಭಾವದಿಂದ ನೆನೆದಿದ್ದಾರೆ.ಬದುಕು ಎನ್ನುವುದು ಪ್ರತಿಯೊಬ್ಬರ ಕಲ್ಪನೆಯಲ್ಲಿ ಯಾವ ರೀತಿಯಾಗಿರುತ್ತದೆ ಎನ್ನುವುದನ್ನು ಬದುಕಿನ ಅರ್ಥ ನಾನಾರ್ಥದಲ್ಲಿ ತುಂಬಾ ಸೊಗಸಾಗಿ ತಿಳಿಸಿದ್ದಾರೆ.
ನಾವೆಲ್ಲರೂ ಸರಿಯಾದ ಮಾರ್ಗದಲ್ಲಿ ನಡೆದು ಸಾಧನೆಯ ಕನಸನ್ನು ನನಸಾಗಿಸಿ ಸ್ಪೂರ್ತಿಯಾಗಬೇಕೆಂದು ಸನ್ಮಾರ್ಗದ ದುಂಬಿ ಕವನದಲ್ಲಿ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ನನಗೆ ಅತ್ಯಂತ ಮೆಚ್ಚುಗೆಯಾದ ಕವನವೆಂದರೆ ಗುರುಶಿಷ್ಯರ ಬಾಂಧವ್ಯ. ಗುರುವನ್ನು ಮೀರಿ ಶಿಷ್ಯ ಬೆಳೆಯಬೇಕು ಎನ್ನುವ ಗುರುವಿನ ಆಶಯ ಬಹಳ ಅಚ್ಚುಕಟ್ಟಾಗಿ ಸೊಗಸಾಗಿ ಅದರ ಬಗ್ಗೆ ತಿಳಿಸಿದ್ದಾರೆ.
ಕೊನೆಯದಾಗಿ ಜೀವನ ಹೇಗಿರಬೇಕು? ಇತಿಹಾಸದ ಪುಟದಲ್ಲಿ ನಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಿರಲಿ ಎಂಬ ಆಶಯ ಹೊಂದಿದ್ದಾರೆ..ನಮ್ಮ ಕನಸಿನ ಶಾಲೆ ನಾಡಿಗೆ ಮಾದರಿಯಾಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಹೀಗೆ ಓದುತ್ತಾ ಹೋದಂತೆ ಎಲ್ಲವನ್ನೂ ಸರಳವಾಗಿ ಓದಿಸಿಕೊಂಡು ಹೋಗುತ್ತವೆ.
ತಮ್ಮದೇ ಸರಳ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಬರೆದ ಕವನಗಳು ಓದುಗರ ಜೀವನಕ್ಕೆ ಬಹಳ ಹತ್ತಿರವಾಗಿವೆ.
ಮುತ್ತು ಸರ್ ಅವರ ಈ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ.ಅವರಿಂದ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಹೊರಹೊಮ್ಮಲಿ ಎಂದು ಆಶಿಸುವೆ.
-ಸುನಂದಾ ಪುರಾಣಿಕ ಹಳಿಯಾಳ ಉತ್ತರ ಕನ್ನಡ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು