LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಾರ್ಥಕ ಜೀವಿ ಸಾಕ್ಷ್ಯ ಚಿತ್ರ ಬಿಡುಗಡೆ

ಸಮಾಜ ಸೇವಕರು, ಖ್ಯಾತ ವೈದ್ಯರು, ಅನಿವಾಸಿ ಭಾರತೀಯರು ಆದ ಪಾವಗಡ ಮೂಲದ ಡಾ. ಪ್ರಭಾಕರ ರೆಡ್ಡಿ ಅವರ 86ನೇ ಜನ್ಮ ದಿನಾಚರಣೆಯನ್ನು. ಬೆಂಗಳೂರಿನ ಕನ್ನಡ ಭವನ ನಯನ ಸಭಾಂಗಣದಲ್ಲಿ ವಿಭಿನ್ನವಾಗಿ ಆಚರಿಸಲಾಯಿತು.

ಡಾ. ಪ್ರಭಾಕರ ರೆಡ್ಡಿ ಅವರ ಜೀವನ ಸಾಧನೆ ಮತ್ತು ಮಾಡಿರುವ ಸಮಾಜ ಸೇವ ಕಾರ್ಯಗಳನ್ನು ಒಳಗೊಂಡಿರುವ 30 ನಿಮಿಷಗಳ ಸಾಕ್ಷಾತ್ ಚಿತ್ರವನ್ನು ಬಿಡುಗಡೆಗೊಳಿಸಲಾಯಿತು.ತುಮಕೂರು ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿಯಾಗಿ ವಿಶೇಷ ಸಾಧನೆ ಮತ್ತು ಜನಪ್ರಿಯತೆ ಗಳಿಸಿದ್ದ ಡಾ. ಸಿ ಸೋಮಶೇಖರ್ ಅವರು "ಸಾರ್ಥಕ ಜೀವಿ" ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿದರು.

ಖ್ಯಾತ ಸಾಹಿತಿಗಳು ಕ್ಷಣ ಹೊತ್ತು ಆಣಿ ಮತ್ತು ಖ್ಯಾತಿಯ ನಾಡೋಜ ಡಾ.ಎಸ್. ಷಡಕ್ಷರಿ, ಪಾವಗಡದ ಖ್ಯಾತ ವೈದ್ಯರಾದ ಡಾ. ಚಕ್ಕರ ರೆಡ್ಡಿ, ಮತ್ತು ಡಾ. ಪ್ರಭಾಕರ ರೆಡ್ಡಿ ಅವರ ಸ್ನೇಹಿತರು ಆಪ್ತರು ಹಿತೈಷಿಗಳು, ಮತ್ತು ಡಾಕ್ಟರ್ ಪ್ರಭಾಕರ ರೆಡ್ಡಿ ಚಾರಿಟೇಬಲ್ ಎಜುಕೇಶನಲ್ ಫೌಂಡೇಶನ್ ಟ್ರಸ್ನ ಉಪಾಧ್ಯಕ್ಷರಾದ ಶ್ರೀಮತಿ ಅಮ್ಮಯ್ಯ ತಿಮ್ಮರಾಜು,ವೆಂಕಟೇಶಲು ಖಜಾಂಚಿ, ಗೋವಿಂದಪ್ಪ ಜಂಟಿ ಕಾರ್ಯದರ್ಶಿ ಮುಂತಾದವರು ಭಾಗಿಯಾಗಿದ್ದರು.

ಪ್ರತಿಷ್ಠಿತ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಏರ್ಪಡಿಸಿದ್ದ ಶ್ರೀರಾಮರಕ್ಷಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದ ಸಾಧಕರು ಆಗಮಿಸಿದ್ದರು. ಅವರ ಸಮ್ಮುಖದಲ್ಲಿ ಪ್ರಭಾಕರ ರೆಡ್ಡಿ ಅವರ ಜನ್ಮದಿನವನ್ನು ಆಚರಿಸಲಾಯಿತು.
ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕರಾದ ಡಾ. ಗುಣವಂತ ಮಂಜು, ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜನೆ ಮಾಡಿದ್ದರು. ಡಾ. ಪ್ರಭಾಕರ ರೆಡ್ಡಿ ಅವರಿಗೆ ಶ್ರೀ ರಾಮರಕ್ಷಾ ಪುರುಷೋತ್ತಮ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು