LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಇತಿಹಾಸ ಸೃಷ್ಟಿ ಚಿನ್ನ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲಿಟ್ ಶರ್ಮಿಳಾ

ಗ್ಲಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಪಟ್ಟಿ ಏರುತ್ತಲೇ ಇದೆ. ಈ ಮಧ್ಯೆ ಪ್ಯಾರಾ ಅಥ್ಲಿಟ್ ಶರ್ಮಿಳಾ ಧಂಕರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.ಗ್ಲ್ಯಾಸ್ಗೋದಲ್ಲಿ ಮಂಗಳವಾರ ನಡೆದ ಮಹಿಳೆಯರ ಶಾಟ್‌ಪುಟ್ ಈ57 ಸ್ಪರ್ಧೆಯಲ್ಲಿ 40 ವರ್ಷದ ಶರ್ಮಿಳಾ ಚಿನ್ನದ ಪದಕ ಗೆದ್ದು, ಇತಿಹಾಸ ಬರೆದಿದ್ದಾರೆ. ಈ ಮೂಲಕ ಭಾರತದ ಪರ ಚಿನ್ನದ ಪದಕ ಗೆದ್ದ ಮೊದಲ ಪ್ಯಾರಾ ಅಥ್ಲಿಟ್ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.ಅಲ್ಲದೇ, ಈ ಗೆಲುವಿನೊಂದಿಗೆ 2 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನ ಒಳಗೊಂಡಂತೆ ದೇಶದ ಒಟ್ಟು ಪದಕಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮಹಿಳೆಯರ ಶಾಟ್‌ಪುಟ್ ಈ57 ಸ್ಪರ್ಧೆಯಲ್ಲಿ ಶರ್ಮಿಳಾ 9.81 ಮೀಟರ್ ದೂರ ಗುಂಡು ಎಸೆದು, ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಘಾನಾದ ಜಿನಾಬು ಇಸ್ಸಾ 8.65 ಮೀಟರ್ ದೂರ ಎಸೆದು 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಇನ್ನೂ ನೈಜೀರಿಯಾದ ಯುಚಾರಿಯಾ ಇಯಾಜಿ, ಭಾರತದ ಶಿಲ್ಪಾ ಇಬ್ಬರೂ ಸಮವಾಗಿ 8.19 ಮೀಟರ್ ದೂರ ಗುಂಡು ಎಸೆದು ಕಂಚಿನ ಪದಕ ಹಂಚಿಕೊಂಡರು.ಶರ್ಮಿಳಾ ಅವರು ಚಿನ್ನದ ಪದಕ ಗೆದ್ದ ಪರಿಶ್ರಮದ ಹಿಂದೆ ಕಣ್ಣೀರಿನ ಕಥೆಯೂ ಇದೆ. ಹರಿಯಾಣದ ಚಿತ್ರೌಲಿ ಗ್ರಾಮದಲ್ಲಿ ಜನಿಸಿದ ಧಂಕರ್ ಅವರು 2ನೇ ವಯಸ್ಸಿನಲ್ಲಿದ್ದಾಗಲೇ ಪೋಲಿಯೊಗೆ ತುತ್ತಾದರು, ಇದು ಅವರ ಒಂದು ಕಾಲನ್ನು ಶಾಶ್ವತವಾಗಿ ಬಾಧಿಸಿತು. ಆದಾಗ್ಯೂ ದೈಹಿಕ ಸವಾಲುಗಳನ್ನು ಮೆಟ್ಟಿ ನಿಂತ ಧಂಕರ್ ಜೀವನದ ಹೋರಾಟ ಮುಂದುವರಿಸಿದ್ರು.18 ನೇ ವಯಸ್ಸಿನಲ್ಲಿ ವಿವಾಹವಾದ ಧಂಕರ್ ತನ್ನ ಮೊದಲ ಮದುವೆಯಲ್ಲಿ ವರ್ಷಗಳ ಕಾಲ ದೈಹಿಕ ಮತ್ತು ಭಾವನಾತ್ಮಕ ಕಿರುಕುಳ ಅನುಭವಿಸಿದ್ರು. ಮೊದಲೇ ವರದಕ್ಷಿಣೆ ಕಿರುಕುಳ ಅನುಭವಿಸುತ್ತಿದ್ದ ಧಂಕರ್, ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಮತ್ತಷ್ಟು ಹಿಂಸೆಗೆ ಒಳಗಾಗುವಂತೆ ಮಾಡಿತು. 26 ನೇ ವಯಸ್ಸಿನಲ್ಲಿ, ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ತಮ್ಮ ಗಂಡನ ಮನೆ ತೊರೆದು ತವರಿಗೆ ಮರಳಿದರು. ಜೀವನವೇ ಸಾಕು ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದ್ದರು. ಹೀಗಿರುವಾಗಲೇ ಅವರ ಜೀವನಕ್ಕೆ ಮತ್ತೊಂದು ತಿರುವು ಸಿಕ್ಕಿತು. ಧಂಕರ್ 28 ನೇ ವಯಸ್ಸಿನಲ್ಲಿ ಅಜಿತ್ ಸಿಂಗ್ ಎಂಬವರೊಂದಿಗೆ 2ನೇ ವಿವಾಹವಾದರು, ಅಲ್ಲಿಂದ ಅವರ ಜೀವನ ಪಯಣ ಹೊಸ ಆರಂಭ ಪಡೆದುಕೊಂಡಿತು. ಈ ಕ್ರೀಡೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ ನಂತರ ಅಜಿತ್, ಶರ್ಮಿಳಾರನ್ನ ಪ್ಯಾರಾ ಅಥ್ಲೆಟಿಕ್ಸ್ಗೆ ಪರಿಚಯಿಸಿದರು. ಅವರ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು, ವೃತ್ತಿಪರವಾಗಿ ಅಥ್ಲೆಟಿಕ್ಸ್ ಮುಂದುವರಿಸಲು ಪ್ರೋತ್ಸಾಹಿಸಿದರು. 2023 ರಲ್ಲಿ ಅವರ ತರಬೇತಿ ಮತ್ತು ಸ್ಪರ್ಧೆಗಳಿಗೆ ಹಣಕಾಸು ಒದಗಿಸಲು ಅವರು ತಮ್ಮ ಮನೆಯನ್ನೇ ಮಾರಿದರು. ಹೀಗೆ ಅನೇಕ ಕಷ್ಟ, ಸಾವಲುಗಳನ್ನು ಮೆಟ್ಟಿ ನಿಂತ ಶರ್ಮಿಳಾ ಧಂಕರ್ ಇಂದು ಚಿನ್ನದ ಪದಕ ಗೆದ್ದು, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು