LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"`ಕಾಂತಾರ-ಅಧ್ಯಾಯ ೧'ರ ಸಂಗೀತ ಆಲ್ಬಂನಲ್ಲಿ ಕೈಜೋಡಿಸಿದ ಗಾಯಕ ದಿಲ್ಜಿತ್ ದೋಸಾಂಜ್"

ರಾಷ್ಟçಪ್ರಶಸ್ತಿ ವಿಜೇತ ನಟ-ಗಾಯಕ ದಿಲ್ಜಿತ್ ದೋಸಾಂಜ್, ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರೊಂದಿಗೆ `ಕಾAತಾರ-ಅಧ್ಯಾಯ ೧'ರ ಸಂಗೀತ ಆಲ್ಬಂನಲ್ಲಿ ಕೈಜೋಡಿಸಿದ್ದಾರೆ. ಈ ಸಂತಸದ ಸಂಗತಿಯನ್ನು ಇನ್ಸಾ÷್ಟಗ್ರಾಮ್‌ನಲ್ಲಿ ಹಂಚಿಕೊAಡಿರುವ ದಿಲ್ಜಿತ್, ಮೂಲ 'ಕಾಂತಾರ' ಸಿನಿಮಾ ತಮ್ಮ ಮೇಲೆ ಮಾಡಿದ ಪರಿಣಾಮವನ್ನು ಸ್ಮರಿಸಿದ್ದಾರೆ. "ದೊಡ್ಡಣ್ಣ ರಿಷಬ್ ಶೆಟ್ಟಿ ಅವರಿಗೆ ನನ್ನ ಸಲಾಂ. ಅವರು ನಿಜಕ್ಕೂ ಒಂದು ಮಾಸ್ಟರ್‌ಪೀಸ್ ಚಿತ್ರವನ್ನು ನಿರ್ಮಿಸಿದ್ದಾರೆ. ಆ ಸಿನಿಮಾದೊಂದಿಗೆ ನನಗೆ ವೈಯಕ್ತಿಕ ನಂಟಿದೆ, ಅದನ್ನು ಹೇಳಲು ಸಾಧ್ಯವಿಲ್ಲ.

ಆದರೆ, ಚಿತ್ರಮಂದಿರದಲ್ಲಿ 'ವರಾಹ ರೂಪಂ' ಹಾಡು ಬಂದಾಗ, ಆನಂದ ಭಾಷ್ಪದಿಂದ ಕಣ್ಣು ತುಂಬಿಕೊAಡಿದ್ದೆ" ಎಂದು ಭಾವುಕರಾಗಿ ಬರೆದಿದ್ದಾರೆ. ಅಕ್ಟೋಬರ್ ೨ ರಂದು ಬಿಡುಗಡೆಯಾಗಲಿರುವ ಈ ಬಹು ನಿರೀಕ್ಷಿತ ಚಿತ್ರಕ್ಕಾಗಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೊಂದಿಗೆ ಕೆಲಸ ಮಾಡಿದ ಬಗ್ಗೆಯೂ ದಿಲ್ಜಿತ್ ಸಂತಸ ವ್ಯಕ್ತಪಡಿಸಿದ್ದಾರೆ. "ಕೇವಲ ಒಂದೇ ದಿನದಲ್ಲಿ ಅವರಿಂದ ಸಾಕಷ್ಟು ಕಲಿತುಕೊಂಡೆ" ಎಂದು ತಿಳಿಸಿದ್ದಾರೆ. ದಿಲ್ಜಿತ್ ದೋಸಾಂಜ್ ಮತ್ತು ರಿಷಬ್ ಶೆಟ್ಟಿ ಅವರ ಈ ಮೈತ್ರಿ, ಹೋಂಬಾಳೆ ಫಿಲ್ಮ್÷್ಸ ನಿರ್ಮಾಣದ 'ಕಾಂತಾರ- ಅಧ್ಯಾಯ ೧' ಚಿತ್ರಕ್ಕೆ ಹೊಸಸಂಗೀತದ ಸ್ಪರ್ಶ ನೀಡುವುದು ಖಚಿತ. 'ಕಾಂತಾರ-ಅಧ್ಯಾಯ ೧' ಅಕ್ಟೋಬರ್ ೨, ೨೦೨೫ ರಂದು ವಿಶ್ವಾದ್ಯಂತ ತೆರೆಗೆಬರಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST