LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸೋನಾಟದ ಫೋಜ್ ಹೊಸ ಸಂಗ್ರಹ ಅನಾವರಣ

ಬೆಂಗಳೂರು: ಸಮಕಾಲೀನ ಫ್ಯಾಷನ್ ಅನ್ನು ಕಾಲಾತೀತ ಕೈಗಡಿಯಾರಗಳ ತಯಾರಿಕೆಗೆ ಸಂಯೋಜಿಸಲು ಹೆಸರುವಾಸಿಯಾಗಿರುವ ಸೋನಾಟಾದ ಉಪ- ಬ್ರ್ಯಾಂಡ್ ಆಗಿರುವ ಪೋಜ್, ಈ ವಸಂತ ಹಾಗೂ ಬೇಸಿಗೆಯ 2024ರ ಋತುವಿಗೆ ತನ್ನ ಇತ್ತೀಚಿನ ಹೊಸ ಸಂಗ್ರಹವನ್ನು ಅನಾವರಣ ಮಾಡಿರುವುದಾಗಿ ಹೆಮ್ಮೆಯಿಂದ ಪ್ರಕಟಿಸಿದೆ.

ವಸಂತ ಋತುವಿನ ರೋಮಾಂಚನಕಾರಿ ವೈವಿಧ್ಯಮಯ ಬಣ್ಣಗಳು ಮತ್ತು ಬೇಸಿಗೆಯ ಸೂರ್ಯಾಸ್ತಗಳ ಚಿನ್ನದ ಹೊಳಪಿನಿಂದ ಸ್ಫೂರ್ತಿ ಪಡೆದ ವಿಶಿಷ್ಟ ಶೈಲಿಗಳ ಆಕರ್ಷಕ ಶ್ರೇಣಿಯನ್ನು ಅನಾವರಣಗೊಳಿಸಿದೆ.ನಿಖರತೆ ಮತ್ತು ಕಾಳಜಿ ಸೇರಿ ತಯಾರಿಸಲಾಗಿರುವ ಈ ಹೊಸ ಸಂಗ್ರಹವು ಎಲ್ಲಾ ಸ್ತ್ರೀ - ಪುರುಷರ ಬದಲಾಗುತ್ತಿರುವ ಪ್ರವೃತ್ತಿಗಳು ಮತ್ತು ಫ್ಯಾಷನ್ ಉತ್ಸಾಹಗಳನ್ನು ಪೂರೈಸಲಿದೆ.

ಗುಣಮಟ್ಟ, ಲಭ್ಯತೆ ಮತ್ತು ಜನಪ್ರಿಯ ಹೊಸ ಅಲೆಯ ವಿನ್ಯಾಸಗಳ ಮೇಲೆ ಗಮನ ಕೇಂದ್ರೀಕರಿಸಿ, ನಾವು ಕೇವಲ ಸಮಯ ಸೂಚಿಸುವ ಸಾಧನವನ್ನಷ್ಟೇ ಪರಿಚಯಿಸಿಲ್ಲ. ನಮ್ಮ ಗ್ರಾಹಕರ ದೈನಂದಿನ ಬದುಕು ಮತ್ತು ಅವರ ವೈಯಕ್ತಿಕ ಜೀವನ ಶೈಲಿಯ ಅಭಿವ್ಯಕ್ತಿಗಳ ಅಗತ್ಯ ಭಾಗಗಳಾಗಿರುವ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಪರಿಚಯಿಸುವುದನ್ನು ನಾವು ಮುಂದುವರಿಸಲಿದ್ದೇವೆ ಎಂದು ಸೋನಾಟಾ ಬ್ರ್ಯಾಂಡ್‍ನ ಮುಖ್ಯಸ್ಥ ಪ್ರತೀಕ್ ಗುಪ್ತಾ ಅವರು ಹೇಳಿದ್ದಾರೆ.

ರೂ. 695 ಮತ್ತು ರೂ. 1695 ರ ಮಧ್ಯೆ ಇರುವ ಬೆಲೆಯ, ಸೋನಾಟಾದ ಪೋಜ್‍ನ ವಸಂತ ಹಾಗೂ ಬೇಸಿಗೆ ಸಂಗ್ರಹವು ಇದೀಗ ಸೋನಾಟಾದ ಅಧಿಕೃತ ಅಂತರ್ಜಾಲ ತಾಣದಲ್ಲಿ ಮತ್ತು ಭಾರತದಾದ್ಯಂತದ ರಿಟೇಲ್ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು